ನ್ಯೂಯಾರ್ಕ್: ಕೋವಿಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ಅಮೆರಿಕ ಮಹಿಳೆಯೊಬ್ಬರು ಚಲಿಸುತ್ತಿದ್ದ ವಿಮಾನದ ಟಾಯ್ಲೆಟ್‌ನಲ್ಲೇ 3 ಗಂಟೆಗಳ ಕಾಲ ಕ್ವಾರಂಟೈನ್‌ನಲ್ಲಿ ಪ್ರಸಂಗ ನಡೆದಿದೆ.
Advertisement
ಮಿಚಿಗನ್ ಮೂಲದ ಶಿಕ್ಷಕಿ ಮಾರಿಸಾ ಫೋಟಿಯೊ ಎಂಬ ಮಹಿಳೆ ಚಿಕಾಗೊದಿಂದ ಐಸ್‌ಲ್ಯಾಂಡ್‌ಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ವಿಮಾನ ಸಾಗುತ್ತಿದ್ದ ವೇಳೆ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ರ‍್ಯಾಪಿಡ್ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಪರಿಣಾಮವಾಗಿ ಅವರನ್ನು ವಿಮಾನದ ಟಾಯ್ಲೆಟ್‌ನಲ್ಲಿ ಐಸೊಲೇಟ್ ಮಾಡಲಾಗಿತ್ತು. ಇದನ್ನೂ ಓದಿ: ಓಮಿಕ್ರಾನ್ ಸೋಂಕಿತ ಹೃದಯಾಘಾತದಿಂದ ಸಾವು
Advertisement
ವಿಮಾನ ಪ್ರಯಾಣಕ್ಕೂ ಮುನ್ನ ಆರ್‌ಟಿ-ಪಿಸಿಆರ್ ಹಾಗೂ ಐದು ಬಾರಿ ರ‍್ಯಾಪಿಡ್ ಪರೀಕ್ಷೆ ಮಾಡಿಸಿದಾಗ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಆದರೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಗಂಟಲು ನೋವು ಕಾಣಿಸಿಕೊಂಡಿತು. ಈ ವೇಳೆ ರ‍್ಯಾಪಿಡ್ ಪರೀಕ್ಷೆ ಮಾಡಿಸಿದಾಗ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ ಎಂದು ಮಹಿಳೆ ಪ್ರತಿಕ್ರಿಯಿಸಿದ್ದಾರೆ.
Advertisement
Advertisement
ಚಲಿಸುತ್ತಿದ್ದ ವಿಮಾನದಲ್ಲಿದ್ದಾಗ ನನಗೆ ಕೋವಿಡ್ ತಗುಲಿರುವ ವಿಚಾರ ತಿಳಿದು ಅಳು ಬಂತು. ವಿಮಾನ ಪ್ರಯಾಣಕ್ಕೂ ಮುನ್ನ ನನ್ನ ಕುಟುಂಬದವರೊಂದಿಗೆ ಊಟ ಮಾಡಿದ್ದೆ. ವಿಮಾನದಲ್ಲಿ ಹಲವರ ಪ್ರಯಾಣ ಬೆಳೆಸುತ್ತಿದ್ದೇನೆ. ಈ ಎಲ್ಲಾ ವಿಷಯಗಳನ್ನು ನೆನೆದು ನನಗೆ ಭಯವಾಯಿತು ಎಂದು ಸೋಂಕಿತೆ ಹೇಳಿಕೊಂಡಿದ್ದಾರೆ.
ಮಾರಿಸಾ ಅವರು ಕೋವಿಡ್ ಲಸಿಕೆಯ ಎರಡು ಡೋಸ್ ಹಾಗೂ ಬೂಸ್ಟರ್ ಡೋಸ್ ಕೂಡ ಪಡೆದುಕೊಂಡಿದ್ದಾರೆ. ಆದರೆ ಲಸಿಕೆ ಪಡೆಯದವರ ಸಂಪರ್ಕ ಹೊಂದಿದ್ದ ಕಾರಣದಿಂದಾಗಿ ಅವರಿಗೆ ಸೋಂಕು ತಗುಲಿದೆ. ಇದನ್ನೂ ಓದಿ: ವಿದೇಶದಿಂದ ಬೆಂಗಳೂರಿಗೆ ಬಂದ 9 ಮಂದಿಗೆ ಕೊರೊನಾ
ಮಹಿಳೆಗೆ ಕೋವಿಡ್ ಸೋಂಕು ದೃಢಪಟ್ಟಾಗ ಅವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದರೆ ವಿಮಾನದಲ್ಲಿ ಪ್ರಯಾಣಿಕರು ತುಂಬಿದ್ದರು. ಆ ಆಸನದಲ್ಲಿ ಕೂರಲು ಸಾಧ್ಯವಾಗುತ್ತಿಲ್ಲ ಎಂದ ಸೋಂಕಿತೆಯನ್ನು ಅನಿವಾರ್ಯವಾಗಿ ಟಾಯ್ಲೆಟ್‌ನಲ್ಲಿ ಐಸೊಲೇಟ್ ಆಗುವಂತೆ ನೋಡಿಕೊಳ್ಳಬೇಕಾಯಿತು ಎಂದು ವಿಮಾನದ ಸಿಬ್ಬಂದಿ ತಿಳಿಸಿದ್ದಾರೆ.