– ಹೇಳಿಕೆಗೆ ಕ್ಷಮೆ ಕೇಳಲು ಮಹಿಳೆ ನಿರಾಕರಣೆ
ಚಂಡೀಗಢ: ಮಹಿಳೆಯೊಬ್ಬರು 7 ಮಂದಿಯ ಜೊತೆ ತುಂಡುಡುಗೆ ಧರಿಸಿರುವ ಯುವತಿಯರನ್ನು ಕಂಡರೆ ಅತ್ಯಾಚಾರ ಮಾಡಿ ಎಂದು ಸೂಚನೆ ನೀಡಿರುವ ಹೇಯ ವಿಚಾರವೊಂದು ಬೆಳಕಿಗೆ ಬಂದಿದೆ.
ರೆಸ್ಟೋರೆಂಟ್ ಒಂದರಲ್ಲಿ ಮಹಿಳೆ ಹಾಗೂ ಹುಡುಗಿಯರ ಗುಂಪೊಂದು ಉಡುಗೆಯ ಬಗ್ಗೆ ಮಾತಿನ ಚಕಮಕಿ ನಡೆಸಿದೆ. ಇದನ್ನು ಗುಂಪಿನಲ್ಲಿದ್ದ ಯುವತಿಯೊಬ್ಬಳು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಇನ್ ಸ್ಟಾಗ್ರಾಮ್ ಮತ್ತು ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದು ವೈರಲ್ ಆಗಿದೆ.
Advertisement
Advertisement
ವಿಡಿಯೋದಲ್ಲಿ ಈ ಹಿಂದೆ ಮಧ್ಯವಯಸ್ಸಿನ ಮಹಿಳೆ ಟೀಕಿಸಿದ್ದ ಹುಡುಗಿಯರ ಗುಂಪೊಂದು ಅದೇ ಮಹಿಳೆಯನ್ನು ರೆಸ್ಟೋರೆಂಟ್ ಒಂದರಲ್ಲಿ ಸಂಪರ್ಕಿಸಿತ್ತು. ಈ ವೇಳೆ ಹುಡುಗಿಯರು, ತಮ್ಮ ಹೇಳಿಕೆಗೆ ಕ್ಷಮೆ ಕೇಳುವಂತೆ ಮಹಿಳೆಯನ್ನು ಹಿಂಬಾಲಿಸಿದ್ದಾರೆ. ಹುಡುಗಿಯರ ಗುಂಪು ತನ್ನನ್ನು ಹಿಂಬಾಲಿಸುತ್ತಿರುವುದರಿಂದ ಸಿಟ್ಟುಗೊಂಡ ಮಹಿಳೆ, ಸ್ಟೋರ್ ಸಿಬ್ಬಂದಿಯಲ್ಲಿ ಪೊಲೀಸರಿಗೆ ಕರೆ ಮಾಡುವಂತೆ ತಿಳಿಸಿದ್ದಾರೆ. ಇದೇ ವೇಳೆ ಯುವತಿಯರು ಕ್ಷಮೆ ಕೇಳಬೇಕೆಂದು ಕೇಳಿದಾಗ, ಮಹಿಳೆ ತನ್ನ ಹೇಳಿಕೆಯನ್ನು ಪುನರಾವರ್ತಿಸಲು ನಿರಾಕರಿಸಿದರು. ಅಲ್ಲದೆ ವೀಡಿಯೊವನ್ನು ಚಿತ್ರೀಕರಿಸುವ ಹುಡುಗಿಗೆ “ಗೋ ಟು ಹೆಲ್” ಎಂದು ಗರಂ ಆಗಿ ಉತ್ತರಿಸಿದ್ದಾರೆ.
Advertisement
ಸ್ಟೋರ್ ಎದುರು ನಡೆಯುತ್ತಿರುವ ಈ ಚರ್ಚೆಯನ್ನು ಗಮನಿಸಿದ ಮಹಿಳೆಯೊಬ್ಬರು ಯುವತಿಯರಿಗೆ ಬೆಂಬಲವಾಗಿ ನಿಂತು, ಮಹಿಳೆ ಜೊತೆ ಕ್ಷಮೆ ಕೇಳುವಂತೆ ಮನವಿ ಮಾಡಿಕೊಂಡಿದ್ದಾರೆ. ಒಬ್ಬ ತಾಯಿಯಾಗಿದ್ದವಳು ಪುರುಷರನ್ನು ಪ್ರೋತ್ಸಾಹಿಸುವಂತಹ ಮನೋಭಾವವನ್ನು ಬೆಳೆಸಬಾರದು ಎಂದು ಹೇಳಿದ್ದಾರೆ. ಅಲ್ಲದೆ ಅತ್ಯಾಚಾರದ ಭಾವನೆ ಬಗ್ಗೆ ಕೇಳಿದಾಗ ಮಧ್ಯಮ ವಯಸ್ಸಿನ ಮಹಿಳೆ, ಸಣ್ಣ ಉಡುಪುಗಳನ್ನು ಯುವತಿಯರು ಧರಿಸಬಾರದು ಎಂದು ಪುನರುಚ್ಚರಿಸಿದರು.
Advertisement
ಕೊನೆಯಲ್ಲಿ ಮಹಿಳೆ ಮೊಬೈಲ್ ಕ್ಯಾಮೆರಾಗಳತ್ತ ನೋಡಿ, ಇಂತಹ ಮಹಿಳೆಯರು ಸಣ್ಣ, ಸಣ್ಣ ಬಟ್ಟೆಗಳನ್ನು ಧರಿಸುವ ಮೂಲಕ ಎಲ್ಲರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ರೀತಿ ಮಹಿಳೆ ಹೇಳುತ್ತಿದ್ದಂತೆಯೇ ರೆಸ್ಟೋರೆಂಟ್ ನಲ್ಲಿದ್ದ ವ್ಯಾಪಾರಿಗಳು ಚಪ್ಪಾಳೆ ತಟ್ಟಿದರು. ಅಲ್ಲದೆ ಉಡುಗೆ ತೊಡುವಾಗ ಮಕ್ಕಳನ್ನು ಕಂಟ್ರೋಲ್ ಮಾಡುವಂತೆ ಮಹಿಳೆ ಪೋಷಕರಿಗೆ ಸೂಚನೆ ನೀಡಿದರು. ಇಷ್ಟು ಮಾತ್ರವಲ್ಲದೇ ಈ ವಿಡಿಯೋವನ್ನು ದೇಶಾದ್ಯಂತ ಪಸರಿಸುವಂತೆಯೂ ಮಹಿಳೆ ಯುವತಿಯಲ್ಲಿ ಕೇಳಿಕೊಂಡಿದ್ದಾರೆ.
ಇದನ್ನು ಗುಂಪಲ್ಲಿದ್ದ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾಳೆ. ಬಳಿಕ ಈ ದೃಶ್ಯ ಸಾಕಷ್ಟು ವೈರಲ್ ಆಗಿದ್ದು, ನಂತರ ಇನ್ ಸ್ಟಾಗ್ರಾಮ್ ನಿಂದ ವಿಡಿಯೋವನ್ನು ಅಳಿಸಲಾಗಿದೆ. ಆ ಬಳಿಕ ಹುಡುಗಿಯರನ್ನು ಟೀಕಿಸುತ್ತಿರುವ ವಿಚಾರವಾಗಿ ಮಹಿಳೆ ತನ್ನ ಫೇಸ್ ಬುಕ್ ನಲ್ಲಿ ಸಮೀಕ್ಷೆಯೊಂದನ್ನು ನಡೆಸಿದ್ದಾರೆ.
https://www.facebook.com/shivani.gupta.31/videos/vb.772524933/10156696568474934/?type=2&video_source=user_video_tab