ಒಟ್ಟಾವಾ: ಸೆಲ್ಫಿಗೀಳು ಯಾವ ಮಟ್ಟದಲ್ಲಿ ಇರುತ್ತದೆ ಎಂದರೆ ಕೆಲವರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಸೆಲ್ಫಿ ಕ್ಲಿಕ್ಕಿಸುತ್ತಾರೆ. ಇಂತಹ ಘಟನೆ ಕೆನಡಾದಲ್ಲಿ ನಡೆದಿದೆ.
ಕಾರು ನಿಯಂತ್ರಣ ತಪ್ಪಿ ಮಂಜುಗಡ್ಡೆಯಿಂದ ತುಂಬಿದ ರಿದಾಯ ನದಿಗೆ ಬಿದ್ದಿದೆ. ಕಾರು ನಿಧಾನವಾಗಿ ಮಂಜುಗಡ್ಡೆ ಒಳಗೆ ಮುಳುಗುತ್ತಿದ್ದರೆ ಕಾರು ಚಲಾಯಿಸುತ್ತಿದ್ದ ಮಹಿಳೆ ಮಾತ್ರ ಕಾರಿನ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು. ಇದನ್ನು ಗಮನಿಸಿದ ಜನರು ಆಕೆಯನ್ನು ರಕ್ಷಿಸಿದ್ದಾರೆ. ಆಕೆ ಸೆಲ್ಫಿ ತೆಗೆದುಕೊಳ್ಳುತ್ತೀರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಪತಿ ಕೊಂದು ಕತ್ತರಿಸಿದ ತಲೆ ಠಾಣೆಗೆ ತಂದು ಶರಣಾದಳು
She captured the moment with a selfie while people hurried and worried to help her. ????????♀️ pic.twitter.com/ML6zWlSa9m
— Lynda Douglas (@MammaMitch) January 17, 2022
ಸ್ಥಳೀಯರು ಮಹಿಳೆಯನ್ನು ರಕ್ಷಿಸಿ ಸುರಕ್ಷಿತವಾಗಿ ಕರೆದೊಯ್ದಿದ್ದಾರೆ. ಘಟನೆಯಲ್ಲಿ ಕಾರು ಚಾಲನೆ ಮಾಡುತ್ತಿದ್ದ ಮಹಿಳೆಗೆ ಯಾವುದೇ ಗಾಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಜನರು ಅವಳಿಗೆ ಸಹಾಯ ಮಾಡಲು ಆತುರದಿಂದ ಮತ್ತು ಚಿಂತಿತರಾಗಿದ್ದಾಗ ಅವಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾಳೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: 1200 ಕೋಟಿ ರೂ. ವೆಚ್ಚದ ಶಿರಾಡಿ ಘಾಟ್ ಚತುಷ್ಪಥ ರಸ್ತೆಗೆ ಕೇಂದ್ರ ಅನುಮೋದನೆ