ದೇವಸ್ಥಾನದಲ್ಲಿ ಸೀರೆಗೆ ಬೆಂಕಿ ತಗುಲಿ ಗಾಯಗೊಂಡಿದ್ದ ಮಹಿಳೆ ಸಾವು

Public TV
1 Min Read
HBL WOMAN copy

ಹುಬ್ಬಳ್ಳಿ: ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಸೀರೆಗೆ ಬೆಂಕಿ ಹೊತ್ತಿಕೊಂಡು ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಛಾಯಾ ನಾಗರಾಜ್ ಚಂದ್ರಶೇಖರಮಠ (49) ಮೃತಪಟ್ಟ ಮಹಿಳೆ ಆಗಿದ್ದು, ಕಳೆದ 1 ವಾರದಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬೆಂಕಿಯ ಕೆನ್ನಾಲಿಗೆಗೆ ಅವರ ದೇಹ ಶೇ.60 ರಷ್ಟು  ಸುಟ್ಟು ಹೋಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

HBL 1

ಹುಬ್ಬಳ್ಳಿ ಆದರ್ಶ ನಗರ ನಿವಾಸಿಯಾಗಿದ್ದ ಛಾಯಾ ಅವರು ಜೂನ್ 17 ರಂದು ವಿಶ್ವೇಶ್ವರ ನಗರದ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ದೇವಾಲಯದ ಅವರಣದಲ್ಲಿದ್ದ ದೇವರ ಕಟ್ಟೆಯಲ್ಲಿ ದೀಪ ಬೆಳಗಲು ಮುಂದಾದಾಗ ಬೆಂಕಿ ಏಕಾಏಕಿ ಅವರ ಸೀರೆಗೆ ಹೊತ್ತಿಕೊಂಡಿತ್ತು. ಆಗ ಬೆಂಕಿಯಿಂದ ತಪ್ಪಿಸಿಕೊಳ್ಳಲು ಮಹಿಳೆ ದೇವಸ್ಥಾನದ ಒಳಗೆ ಓಡಿ ಹೋಗಿದ್ದರು. ಘಟನೆಯ ಸಂದರ್ಭದಲ್ಲಿ ಮಹಿಳೆಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು ಆ ವೇಳೆಗಾಗಲೇ ಅವರು ಸುಟ್ಟು ಹೋಗಿದ್ದರು.

ಘಟನೆ ನಡೆದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದ್ದರು. ಆ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಘಟನೆಯ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

HBL A

ವಿಡಿಯೋದಲ್ಲೇನಿದೆ?
ಮಹಿಳೆ ದೇವರಿಗೆ ಕೈ ಮುಗಿದು ಹಿಂದಿರುಗುತ್ತಿದ್ದರು. ಈ ವೇಳೆ ಏಕಾಏಕಿ ಅವರ ಸೀರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಮಹಿಳೆ ಕಿರುಚಾಡುತ್ತಾ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದರು. ಮಹಿಳೆಯ ಚೀರಾಟ ಕೇಳಿದ ಸ್ಥಳದಲ್ಲಿರುವ ತಕ್ಷಣವೇ ಮಹಿಳೆಯ ಬಳಿ ಓಡಿ ಬಂದು, ಕಷ್ಟಪಟ್ಟು ಬೆಂಕಿ ನಂದಿಸಿದ್ದರು. ಬಳಿಕ ಮಹಿಳೆಯನ್ನು ನಗರದ ಆಸ್ಪತ್ರೆಗೆ ದಾಖಲಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *