ಬೀಜಿಂಗ್: ಲಿಫ್ಟ್ ನೊಳಗೆ ಹೋಗುವಾಗ ಅಥವಾ ಹೊರಬರುವಾಗ ತುಂಬಾ ಹುಷಾರಾಗಿರಬೇಕು. ಸ್ವಲ್ಪ ಹೆಚ್ಚುಕಡಿಮೆಯಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ಸಾಕ್ಷಿ ಚೀನಾದಲ್ಲಿ ನಡೆದಿರೋ ಈ ಘಟನೆ.
ಮಹಿಳೆಯೊಬ್ಬರು ಮೊಬೈಲ್ ನೋಡುತ್ತಲೇ ಲಿಫ್ಟ್ ನೊಳಗೆ ಹೋಗಲು ಮುಂದಾಗಿದ್ದಾರೆ. ಈ ವೇಳೆ ಮುಗ್ಗರಿಸಿ ಕೆಳಗೆ ಬಿದ್ದಿದ್ದು, ಆಕೆಯ ಕಾಲು ಲಿಫ್ಟ್ ಬಾಗಿಲ ನಡುವೆ ಸಿಲುಕಿಕೊಂಡಿದೆ. ಆದ್ರೆ ಇದ್ದಕ್ಕಿದ್ದಂತೆ ಲಿಫ್ಟ್ ಮೇಲೆ ಹೋಗಲು ಶುರು ಮಾಡಿದೆ.
Advertisement
Advertisement
ಸುಮಾರು ಮೂರು ಮಹಡಿಗಳಷ್ಟು ಮೇಲೆ ಹೋದ ಲಿಫ್ಟ್ ನಂತರವಷ್ಟೇ ನಿಂತಿದೆ. ಈ ವೇಳೆ ಮಹಿಳೆ ನೆಲದ ಮೇಲೆಯೇ ಬಿದ್ದು, ಸಹಾಯಕ್ಕಾಗಿ ಕಾಯುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಆಕೆ ತನ್ನ ಕಾಲನ್ನ ಎಳೆದುಕೊಳ್ಳಲು ಯತ್ನಿಸಿದ್ದು, ಬಲಗಾಲಿನ ಕೆಳಭಾಗ ಕಟ್ ಆಗಿರೋದು ಕಾಣುತ್ತದೆ.
Advertisement
Advertisement
2017ರ ಜೂನ್ 21ರಂದು ಈ ಘಟನೆ ನಡೆದಿದ್ದರೂ ಇತ್ತೀಚೆಗಷ್ಟೇ ಇದರ ವಿಡಿಯೋ ಬಿಡುಗಡೆಯಾಗಿದೆ. ಶಾಂಘೈನ ಝೋಂಗ್ಶಾನ್ ವೆಸ್ಟ್ ರೋಡ್‍ನ ಕೋಂಚ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಅಪಘಾತದ ನಂತರ ಮಹಿಳೆ ಬದುಕಿದ್ದಾರಾ ಇಲ್ಲವಾ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಮಹಿಳೆ ಮೊಬೈಲ್ ನೋಡುತ್ತಿದ್ದರಿಂದ ಲಿಫ್ಟ್ ಅದಾಗಲೇ ಸ್ಟಾರ್ಟ್ ಆಗಿ ಮೇಲೆ ಹೋಗಲು ಆರಂಭಿಸಿದ್ದನ್ನು ಆಕೆ ಗಮನಿಸಿರಲಿಲ್ಲ ಎಂದು ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ. ಮಹಿಳೆಯ ಹಿಂದೆ ನಿಂತಿದ್ದ ಮತ್ತೊಬ್ಬ ಮಹಿಳೆ ಲಿಫ್ಟ್ ನೊಳಗೆ ಇನ್ನೂ ಬಂದಿರಲಿಲ್ಲ. ಹೀಗಾಗಿ ಅದೃಷ್ಟವಶಾತ್ ಈ ಅವಘಡದಿಂದ ಆಕೆ ಪಾರಾಗಿದ್ದಾರೆ.