ಲಂಡನ್: ಸಾಕು ಪ್ರಾಣಿಗಳನ್ನು ಎಷ್ಟೇ ಪ್ರೀತಿಸಿದರೂ ಅವುಗಳು ಕೆಟ್ಟ ಕೆಲಸ ಮಾಡಿದಾಗ ಸಿಟ್ಟು ಬರದೇ ಇರಲ್ಲ. ಅಂತೆಯೇ ಇಲ್ಲೊಂದು ಶ್ವಾನ ಮಾಡಿದ ಕಿತಾಪತಿಯಿಂದ ಮಹಿಳೆಯೊಬ್ಬಳು ಆಸ್ಪತ್ರೆ ಸೇರುವಂತಾಗಿದೆ.
ಇತ್ತೀಚಿಗೆ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು ನಿದ್ದೆಗೆ ಜಾರಿದ್ದ ಸಂದರ್ಭದಲ್ಲಿ ಆಕೆಯ ಮುಖದ ಮೇಲೆ ಮುದ್ದಿನ ಶ್ವಾನ (Dog) ಮಲವಿಸರ್ಜನೆ ಮಾಡಿದೆ. ಪರಿಣಾಮ ಆಕೆ 3 ದಿನಗಳ ಕಾಲ ಆಸ್ಪತ್ರೆಯಲ್ಲಿ ಕಳೆಯಬೇಕಾಯಿತು. ಶ್ವಾನದಿಂದಾಗಿ ಆಸ್ಪತ್ರೆ ಪಾಲಾದ ಮಹಿಳೆಯನ್ನು ಅಮಂಡಾ ಗೊಮ್ಮೊ (51) ಎಂದು ಗುರುತಿಸಲಾಗಿದೆ. ಈ ಘಟನೆ ಇಂಗ್ಲೆಂಡ್ (England) ನ ಬ್ರಿಸ್ಟೋಲ್ (Bristol) ನಲ್ಲಿ ನಡೆದಿದೆ.
ಅಮಂಡಾ ಮಧ್ಯಾಹ್ನದ ಊಟದ ಬಳಿಕ ಕಿರುನಿದ್ದೆಗೆ ಜಾರಿದ್ದಳು. ಹೀಗೆ ನಿದ್ದೆಯಲ್ಲಿ ಸ್ವಲ್ಪ ಬಾಯಿ ತೆರೆದು ಮಲಗಿದ್ದಳು. ಈ ವೇಳೆ ಆಕೆಯ ಮುದ್ದಿನ ಶ್ವಾನ ಚಿಹೋವಾ ಬೆಲ್ಲೆ (chihuahua Belle) ಆಕೆಯೊಂದಿಗೆ ಆಟವಾಡಲು ಪ್ರಯತ್ನಿಸುತ್ತದೆ. ಆದರೆ ಆಕೆ ನಿದ್ದೆಗೆ ಜಾರಿದ್ದರಿಂದ ಆಕೆಯ ಮುಖದ ಬಳಿ ಬಂದು ಕುಳಿತುಕೊಳ್ಳುತ್ತೆ. ನಂತರ ಆಕೆಯ ಬಾಯಿಯ ಬಳಿ ಮಲವಿಸರ್ಜನೆ (Dog Pooped) ಮಾಡಿದೆ. ಈ ವೇಳೆ ಮಹಿಳೆಗೆ ಎಚ್ಚರವಾಗಿದೆ. ಇದನ್ನೂ ಓದಿ: ಹಿಜಬ್ ವಿರುದ್ಧ ಪ್ರತಿಭಟನೆ – ವೇದಿಕೆಯಲ್ಲೇ ಕೂದಲು ಕತ್ತರಿಸಿದ ಟರ್ಕಿ ಗಾಯಕಿ
ಈ ಸಂಬಂಧ ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ ಆಕೆ, ನಾನು ಎಂದಿನಂತೆ ಬೆಲ್ಲೆ ಜೊತೆ ಮಧ್ಯಾಹ್ನದ ಹೊತ್ತಿನಲ್ಲಿ ಮಲಗಿದ್ದೆ. ನಿದ್ದೆಯಲ್ಲಿದ್ದ ವೇಳೆ ನನ್ನ ಬಾಯಿ ಮೇಲೆ ತಣ್ಣಗಾದ ವಸ್ತುವೊಂದು ಬಿದ್ದಂತೆ ಭಾಸವಾಯಿತು. ಕೂಡಲೇ ಎಚ್ಚರಗೊಂಡು ಮುಖ ತೊಳೆಯಲೆಂದು ಬಾತ್ ರೂಂಗೆ ಓಡಿದೆ. ಆದರೆ ಈ ವೇಳೆ ನನ್ನ ಮಗ ಸ್ನಾನ ಮಾಡುತ್ತಿದ್ದ. ಹೀಗಾಗಿ ನಾನು ಮುಖ ತೊಳೆಯುವ ಮೊದಲು ಏನೆಂದು ತಿಳಿದುಕೊಳ್ಳಲು ಮೊಬೈಲ್ ನಲ್ಲಿ ಒಂದು ಫೋಟೋ ಕ್ಲಿಕ್ಕಿಸಿಕೊಂಡೆ.
ಫೋಟೋ ನೋಡಿ ಗಾಬರಿಯಾದೆ, ಅಸಹ್ಯವಾಯಿತು. ಅಲ್ಲದೆ ಊಟ- ತಿಂಡಿ ಹೀಗೆ ಏನೂ ತಿನ್ನಲಾಗದೆ ಕೆಲ ಗಂಟೆಗಳ ಕಾಲ ಹಿಂಸೆ ಅನಿಸಿತು. ಈ ಮಧ್ಯೆ ಅಮಂಡಾ ಆರೋಗ್ಯದಲ್ಲಿಯೂ ಏರುಪೇರು ಉಂಟಾಯಿತು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಹೀಗೆ ಈಕೆ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಪ್ರಸಂಗ ಎದುರಾಯಿತು.
ಇತ್ತ ಶ್ವಾನ ಈ ರೀತಿ ಮಾಡಿದ ಬಳಿಕ ಅಮಂಡಾ ಮಗಳು ಶ್ವಾನವನ್ನು ಪಶುವೈದ್ಯರ ಬಳಿ ತೋರಿಸಿದರು. ಈ ವೇಳೆ ಅವರು, ಅದು ಹೊಟ್ಟೆನೋವಿನಿಂದ ಬಳಲುತ್ತಿದೆ ಎಂದು ಹೇಳಿ ರ್ಶವಾನಕ್ಕೂ ಔಷಧಿಯನ್ನು ಕೊಟ್ಟರು.