ನವದೆಹಲಿ: ನಡು ರಸ್ತೆಯಲ್ಲಿ ಮಹಿಳೆಯೊಬ್ಬಳು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಳೆದ ವಾರ ಪಶ್ಚಿಮ ಪಟೇಲ್ ನಗರದ ಕಸ್ತೂರಿ ಲಾಲ್ ಆನಂದ್ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ವೀಡಿಯೋದಲ್ಲಿ ನೀಲಿ ಟೀ ಶರ್ಟ್ ಮತ್ತು ಮುಖಕ್ಕೆ ಮಾಸ್ಕ್ ಧರಿಸಿದ್ದ ಮಹಿಳೆ ರಸ್ತೆ ಮಧ್ಯೆ ಕ್ಯಾಬ್ ಚಾಲಕನ ಕಾಲರ್ ಹಿಡಿದುಕೊಂಡು ಥಳಿಸಿದ್ದಾಳೆ. ಇದನ್ನೂ ಓದಿ: “ಚರ್ಮದ ಸಂಪರ್ಕವಿಲ್ಲದೆ ಸ್ತನ ಹಿಡಿಯುವುದು ಲೈಂಗಿಕ ದೌರ್ಜನ್ಯ ಅಲ್ಲ” – ವಿವಾದಿತ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್
Advertisement
Advertisement
ಮಹಿಳೆ ಸ್ಕೂಟಿಯಲ್ಲಿ ಚಲಾಯಿಸುತ್ತಿದ್ದ ವೇಳೆ ರಸ್ತೆಯಲ್ಲಿ ಇಕ್ಕಟ್ಟು ಉಂಟಾಗಿದೆ. ಇದೇ ವೇಳೆ ಇಕ್ಕಟ್ಟಿನಲ್ಲಿ ಸಿಲುಕಿದ್ದ ಕ್ಯಾಬ್ ಚಾಲಕ ಮಹಿಳೆ ತೆರಳಲು ಜಾಗಬಿಡಲಿಲ್ಲ ಎಂದು ಮಹಿಳೆ ಸ್ಕೂಟಿಯನ್ನು ಪಕ್ಕಕ್ಕೆ ನಿಲ್ಲಿಸಿ ಕ್ಯಾಬ್ ಚಾಲಕನಿಗೆ ನಿಂದಿಸಿದ್ದಾಳೆ. ಅಲ್ಲದೇ ಚಾಲಕನನ್ನು ಕಾರಿನಿಂದ ಹೊರಗೆ ಎಳೆದು ಕಾಲರ್ ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾಳೆ. ಇದೇ ವೇಳೆ ಜಗಳ ಬಿಡಿದಲು ಮಧ್ಯೆ ಪ್ರವೇಶಿಸಿದ ವ್ಯಕ್ತಿ ಮೇಲೂ ಮಹಿಳೆ ಕಿರುಚಾಡಿದ್ದಾಳೆ. ಇದನ್ನೂ ಓದಿ: MLC ಅಭ್ಯರ್ಥಿಯಾಗಿ ಸೂರಜ್ ರೇವಣ್ಣ ಸ್ಪರ್ಧೆ ಬಹುತೇಕ ಖಚಿತ
Advertisement
Advertisement
ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಹಿಳೆಯ ವರ್ತನೆಯನ್ನು ಖಂಡಿಸಿದ ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಮಹಿಳೆಯಿಂದ ಹಲ್ಲೆಗೊಳಗಾದ ಕ್ಯಾಬ್ ಡ್ರೈವರ್‌ನಿಂದ ಪೊಲೀಸರು ಯಾವುದೇ ದೂರು ಸ್ವೀಕರಿಸಿಲ್ಲ. ಆದರೆ ಮಹಿಳೆಯ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯ ಸಹಾಯದಿಂದ ಮಹಿಳೆಯನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.