ಭೋಪಾಲ್: ಮಹಿಳೆಯೊಬ್ಬಳಿಗೆ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಪೊಲೀಸ್ ಠಾಣೆ ಹೊರಗೆ ಪತ್ರಕರ್ತನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿ (Indore) ನಡೆದಿದೆ.
ನಡು ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ ಮಹಿಳೆ ತನ್ನ ಸೋದರಸಂಬಂಧಿಯೊಂದಿಗೆ ಜಗಳವಾಡಿ, ಕಿರುಚಾಡಿದ್ದಳು. ಈ ವೀಡಿಯೋವನ್ನು ಬೈಕ್ ಸವಾರರೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಇಂದೋರ್‍ನ ವಿಜಯ್ ನಗರ ಪೊಲೀಸ್ ಠಾಣೆಗೆ ಕರೆದೊಯ್ದರು. ಈ ವೇಳೆ ಈ ಘಟನೆಗೆ ಕಾರಣವೇನು? ನಿಮ್ಮ ಸಂಬಂಧಿಯೊಂದಿಗೆ ಜಗಳ ಯಾಕೆ ಆಯಿತು ಎಂದು ಪ್ರಶ್ನಿಸುತ್ತಿದ್ದರಿಂದ ಕೋಪಗೊಂಡ ಮಹಿಳೆ ಪತ್ರಕರ್ತರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಟ್ಯೂಶನ್‍ಗೆ ಬರುತ್ತಿದ್ದ ಬಾಲಕಿಯರಿಗೆ ಟೀಚರ್ ತಂದೆಯಿಂದಲೇ ಕಿರುಕುಳ
Advertisement
Advertisement
ವೀಡಿಯೋದಲ್ಲಿ ಮಹಿಳೆ ಕಾರಿನಲ್ಲಿ ಚಾಲಕನ ಸೀಟಿನಲ್ಲಿ ಕುಳಿತ್ತಿದ್ದ ವ್ಯಕ್ತಿ ಮೇಲೆ ಕೂಗಾಡುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಇದು ಯಾರಿಗೂ ಕಾಣಿಸಿರುವುದಿಲ್ಲ. ಕೊನೆಗೆ ಅಳುತ್ತಾ ಕಾರಿನಿಂದ ಮಹಿಳೆ ಕೆಳಗಿಳಿಯುತ್ತಾಳೆ. ಸದ್ಯ ಮಹಿಳೆ ತನ್ನ ತಪ್ಪನ್ನು ನಿರಾಕರಿಸಿದ್ದು, ತಿಂಗಳುಗಳು ಕಳೆದ ಬಳಿಕ ಇದೀಗ ಈ ವೀಡಿಯೋ ವೈರಲ್ ಮಾಡಿರುವ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮಹಿಳೆ ತಿಳಿಸಿದ್ದಾಳೆ. ಇದನ್ನೂ ಓದಿ: ರೇಣುಕಾಚಾರ್ಯ ಸಹೋದರ ಪುತ್ರನ ಸಾವು ಪ್ರಕರಣ ಎಲ್ಲಾ ಆಯಾಮಗಳಲ್ಲೂ ತನಿಖೆಗೆ ಸೂಚನೆ – ಸಿಎಂ