ಪಾಟ್ನಾ: ವಧುವೊಬ್ಬಳು ನನ್ನನ್ನು ಮದುವೆಯಾಗು ಎಂದು ಮಾರುಕಟ್ಟೆಯಲ್ಲಿ ಯುವಕನ ಹಿಂದೆ ಓಡಿದ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ನವಾಡದಲ್ಲಿ ಈ ಘಟನೆ ನಡೆದಿರುವ ವೀಡಿಯೋವು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವಧುವಿನ ಕುಟುಂಬಸ್ಥರ ಪ್ರಕಾರ, ವಧುವಿಗೂ ಯುವಕನಿಗೂ 3 ತಿಂಗಳ ಹಿಂದೆ ಮದುವೆ ನಿಶ್ಚಯಿಸಲಾಗಿತ್ತು. ಅಷ್ಟೇ ಅಲ್ಲದೇ ಯುವಕನಿಗೆ ಬೈಕ್ ಹಾಗೂ 50 ಸಾವಿರ ನಗದನ್ನು ವರದಕ್ಷಿಣೆಯಾಗಿ ನೀಡಿದ್ದರು. ಆದರೆ ಯುವಕ ಸಬೂಬನ್ನು ಹೇಳಿ ಮದುವೆಯನ್ನು ವಿಳಂಬ ಮಾಡುತ್ತಲೇ ಇದ್ದ. ಈ ಹಿನ್ನೆಲೆಯಲ್ಲಿ ವಧು ಮಾರುಕಟ್ಟೆಯಲ್ಲಿ ನನ್ನನ್ನು ಮದುವೆಯಾಗಿ ಎಂದು ಯುವಕನ ಹಿಂದೆ ಓಡಿದ್ದಾಳೆ.
#bihar#nawada#highvoltagedrama#मेरीशादीकरवाओ!
मेरी शादी करवाओ! बीच सड़क पर लड़के को पकड़कर चिल्लाने लगी लड़की. pic.twitter.com/I2XyPDVnKl
— Sweta Gupta (@swetaguptag) August 29, 2022
ವೀಡಿಯೋದಲ್ಲಿ ಏನಿದೆ?: ನವಡಾದ ಭಗತ್ ಸಿಂಗ್ ಚೌಕ್‍ನಲ್ಲಿ ಯುವಕನೊಬ್ಬ ಹೋಗುತ್ತಿದ್ದ. ಈ ವೇಳೆ ಆತನನ್ನು ನೋಡಿದ ವಧು ನನ್ನನ್ನು ಮದುವೆಯಾಗು ಎಂದು ಅವನ ಕೈಯನ್ನು ಹಿಡಿದು ಅಳುತ್ತಾ ಒತ್ತಾಯಿಸಿದ್ದಾಳೆ. ಇದರಿಂದಾಗಿ ಆತ ವಧುವಿನಿಂದ ತಪ್ಪಿಸಿಕೊಂಡು ಅಲ್ಲಿಂದ ಓಡಲು ಪ್ರಯತ್ನಿಸಿದ್ದಾರೆ. ಆದರೆ ವಧು ಆತನನ್ನು ಹಿಡಿಯಲು ಅವನ ಹಿಂದೆ ಓಡುತ್ತಾಳೆ. ಕೊನೆಗೂ ಆ ಯುವಕನ ಶತಪ್ರಯತ್ನಗಳೆಲ್ಲಾ ವಿಫಲವಾಗಿ ವಧುವಿನ ಕೈಯಲ್ಲಿ ಸಿಕ್ಕಿಬಿಳುತ್ತಾನೆ. ಇದನ್ನೂ ಓದಿ: ಪಂದ್ಯ ಸೋತ್ರೂ ರೋಮ್ಯಾಂಟಿಕ್ ಮೂಡ್- ಗೆಳತಿಗೆ ಪ್ರಪೋಸ್ ಮಾಡಿದ ಕ್ರಿಕೆಟಿಗ
ಆ ವೇಳೆಗಾಗಲೇ ಅಲ್ಲಿ ಜನರೆಲ್ಲರೂ ಸೇರಿರುತ್ತಾರೆ. ಅವರೆಲ್ಲರ ಎದುರೇ ವಧು, ಅಳುತ್ತಾ, ನನ್ನನ್ನು ಮದುವೆಯಾಗು ಎಂದು ಒತ್ತಾಯಿಸುತ್ತಾಳೆ. ಅಷ್ಟೇ ಅಲ್ಲದೇ ಆತನನ್ನು ಬಿಟ್ಟರೇ ಮತ್ತೆ ಎಲ್ಲಿ ತಪ್ಪಿಸಿಕೊಳ್ಳುತ್ತಾನೋ ಎನ್ನುವ ಭಯದಿಂದ ಆತನ ಕೈಯನ್ನು ಹಿಡಿಕೊಂಡು ಗಲಾಟೆ ಪ್ರಾರಂಭಿಸುತ್ತಾಳೆ. ಆಗ ಪೊಲೀಸರು ಮಧ್ಯಪ್ರವೇಶಿಸಿ, ಘಟನೆಗೆ ಸಂಬಂಧಿಸಿ ಎರಡು ಕಡೆಯವರನ್ನು ಠಾಣೆಗೆ ಕರೆದೊಯ್ದು ಕೌನ್ಸೆಲಿಂಗ್ ಮಾಡಿ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಆನಂತರದಲ್ಲಿ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ದೇವಸ್ಥಾನದಲ್ಲಿ ಇಬ್ಬರು ವಿವಾಹವಾದರು. ಇದನ್ನೂ ಓದಿ: ಮುರುಘಾ ಶ್ರೀಗೆ ಸದ್ಯಕ್ಕಿಲ್ಲ ರಿಲೀಫ್ – ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ