ಮುಂಬೈ: ಸಾಮಾಜಿಕ ಜಾಲತಾಣದಲ್ಲಿ (Social Media) ರೀಲ್ಸ್ ಹವಾ ಜಾಸ್ತಿಯಾಗಿದೆ. ಅದರಲ್ಲೂ ಕೆಲ ಯುವತಿಯರು ಹಾಟ್ ಉಡುಗೆಗಳನ್ನ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಡ್ಯಾನ್ಸ್ (Dance) ಮಾಡಿ ರೀಲ್ಸ್ ಕ್ರಿಯೇಟ್ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ. ಹೆಚ್ಚಿನ ವೀವ್ಸ್‌ಗಾಗಿ ಕಂಡ ಕಂಡ ಸ್ಥಳಗಳಲ್ಲಿ ವೀಡಿಯೋ ಮಾಡೋದಕ್ಕೆ ಶುರು ಮಾಡಿದ್ದಾರೆ. ಅದರಲ್ಲೂ ಕೆಲ ಯುವತಿಯರು ತುಂಡುಬಟ್ಟೆ ಧರಿಸುವುದು, ಬಿಕಿನಿಯಲ್ಲಿ ಬೀದಿ ಸುತ್ತುವುದೇ ಟ್ರೆಂಡ್ ಅನ್ನುವಂತೆ ಮಾಡಿಕೊಂಡಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಯುವತಿಯೊಬ್ಬಳು ಮೈಗೆ ಟವೆಲ್ ಸುತ್ತಿಕೊಂಡು ಬೀದಿ ಸುತ್ತಾಡಿರುವ ವೀಡಿಯೋ ಸಾಕ್ಷಿಯಾಗಿದೆ.
View this post on Instagram
ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಮಹಿಳೆಯೊಬ್ಬಳು ಬಿಕಿನಿ ತೊಟ್ಟು ಬಸ್ಸಿನಲ್ಲಿ ಸುತ್ತಾಡಿದ್ದಳು, ಇದಕ್ಕೆ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅಂಹತದ್ದೇ ಘಟನೆಯೊಂದು ಮುಂಬೈನಲ್ಲಿ ನಡೆಸಿದೆ. ಯುವತಿಯೊಬ್ಬಳು (Mumbai Girl) ಮೈಗೆ ಟೆವೆಲ್ ಸುತ್ತಿಕೊಂಡು ಬೀದಿ ಬೀದಿ ಸುತ್ತಾಡಿದ್ದಾಳೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದ್ದು, ಟೀಕೆಗೂ ಕಾರಣವಾಗಿದೆ.
ಹೌದು. ಮಿಂತ್ರಾ ಫ್ಯಾಷನ್ ಸೂಪರ್ ಸ್ಟಾರ್ ವಿಜೇತೆ ಮತ್ತು ರೀಲ್ಸ್ ಸ್ಟಾರ್ ಯುವತಿ ತನುಮಿತಾ ಘೋಷ್ ಇತ್ತೀಚೆಗೆ ಮುಂಬೈನ ಜನರು ಓಡಾಡುತ್ತಿದ್ದ ಬೀದಿಗಳಲ್ಲಿ ದೇಹಕ್ಕೆ ಟವೆಲ್ ಸುತ್ತಿಕೊಂಡು ಯಾವುದೇ ಮುಜುಗರವಿಲ್ಲದೇ ಓಡಾಡಿದ್ದರು. ಇದನ್ನ ನೋಡಿದವರಿಗೆ ಆಕೆ ಬಾತ್‍ರೂಂನಿಂದ ಸ್ನಾನ ಮಾಡಿಕೊಂಡು ಹಾಗೇ ಎದ್ದು ಬಂದಿರುವಂತೆ ಕಾಣಿಸುತ್ತಿತ್ತು. ಅಲ್ಲದೇ ವೀಡಿಯೋ ತುಂಬಾ ʻತೌಬಾ-ತೌಬಾʼ ಎಂಬ ಹಿಂದಿ ಗೀತೆಯೊಂದು ಪ್ರಸಾರವಾಗುತ್ತಲೇ ಇದೆ.
ಈ ಉಡುಗೆಯ ಜೊತೆಗೆ ಕಿವಿಯೋಲೆಯನ್ನೂ ಆಕೆ ಧರಿಸಿದ್ದಳು ಮತ್ತು ಸ್ಟೈಲಿಶ್ ಸ್ಫೋರ್ಟ್ ಶೂ ಸಹ ಧರಿಸಿದ್ದಳು. ಈ ವೇಷದಲ್ಲಿ ಬಸ್ ನಿಲ್ದಾಣದಿಂದ ಅಂಗಡಿಯ ಕಡೆಗೆ ಹೋಗುತ್ತಿದ್ದಾಗ, ಅಲ್ಲಿದ್ದ ದಾರಿಹೋಕರು ಈಕೆಯನ್ನೇ ದಿಟ್ಟಿಸಿ ನೋಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಕೊನೆಯಲ್ಲಿ ರೀಲ್ಸ್ ಆರಣಿ ತನ್ನ ಕೂದಲಿಗೆ ಹಾಗೂ ದೇಹಕ್ಕೆ ಸುತ್ತಿದ್ದ ಟವೆಲ್ ಅನ್ನು ತೆಗೆದಿದ್ದಾಳೆ. ನಂತರ ಇದು ರೀಲ್ಸ್ ಗಾಗಿ ಮಾಡಿದ ವೀಡಿಯೋ ಎಂಬುದು ಜನರ ಅರಿವಿಗೆ ಬಂದಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೋವನ್ನು 10 ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಸಾವಿರಾರು ಮಂದಿ ಲೈಕ್ ಮಾಡಿ, ಶೇರ್ ಮಾಡಿದ್ದಾರೆ, ಕೆಲವರು ಯುವತಿ ನಡೆಗೆ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ತನುಮಿತಾ ಅವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಮತ್ತು ಸೋನಾಕ್ಷಿ ಸಿನ್ಹಾ, ಶಲೀನಾ ನಥಾನಿ, ಮನೀಶ್ ಮಲ್ಹೋತ್ರಾ ಮತ್ತು ಡಿನೋ ಮೋರಿಯಾ ಅವರಂತಹ ಸೆಲೆಬ್ರಿಟಿಗಳಂತೆ ತಾನು ಮನರಂಜನೆಗಾಗಿ ಮಾಡಿರುವುದಾಗಿ ತಿಳಿಸಿದ್ದಾರೆ.