ಟೋಕಿಯೋ: ತನ್ನ ಸ್ವಂತ ಅಜ್ಜನೇ ಉಪವಾಸದಿಂದ ನರಳುವಂತೆ ಮಾಡಿ ತನಗೆ ಹಿಂಸೆ ನೀಡಿದ್ದ ಬಗ್ಗೆ ಜಪಾನಿನ ಯುವತಿಯೊಬ್ಬಳು ಹೇಳಿಕೊಂಡಿದ್ದು ಈಗ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾಳೆ.
Advertisement
ಅಜ್ಜ ತನಗೆ ಊಟ ನೀಡದೆ ಹಿಂಸಿಸುತ್ತಿದ್ದರು. ಕದ್ದುಮುಚ್ಚು ಊಟ ಮಾಡಿದ್ರೆ ದೈಹಿಕ ಹಲ್ಲೆ ನಡೆಸುತ್ತಿದ್ದರು ಎಂದು ಯುವತಿ ಆರೋಪ ಮಾಡಿದ್ದಾಳೆ. ತಿನ್ನಲು ಊಟ ನೀಡದ್ದರಿಂದ 16 ಕೆಜಿ ತೂಕಕ್ಕೆ ಇಳಿದಿದ್ದ ಆ ಯುವತಿ ಈಗ ಚೇತರಿಸಿಕೊಂಡಿದ್ದು, ಈಗಿನ ಫೋಟೋಗಳನ್ನೂ ಕೂಡ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾಳೆ. ಆಕೆ ಈಗ ಸಂಪೂರ್ಣ ಬದಲಾಗಿದ್ದು, ಹಳೇ ಫೋಟೋದಲ್ಲಿದ್ದಿದ್ದು ಈಕೆನಾ ಎಂದು ಆಶ್ಚರ್ಯವಾಗುತ್ತದೆ.
Advertisement
Advertisement
10 ವರ್ಷಗಳ ಹಿಂದೆ ಆಸ್ಪತ್ರೆಗೆ ದಾಖಲಿಸುವ ಮುನ್ನ ಯುವತಿ ಸಾಕಷ್ಟು ಸೆಲ್ಫೀಗಳನ್ನ ತೆಗೆದುಕೊಂಡಿದ್ದು, ಈಗ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿ ತನಗಾದ ದುಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾಳೆ. ಹಳೇ ಫೋಟೋಗಳಲ್ಲಿ ಯುವತಿ ಸಣಕಲು ದೇಹ ಹೊಂದಿದ್ದು, ಮೂಳೆಗಳು ಕಾಣುವಂತೆ ಸೊರಗಿದ್ದಾಳೆ. 10 ವರ್ಷಗಳ ಹಿಂದೆ ಈಕೆ ತನ್ನ ಅಜ್ಜನ ಮನೆಯಲ್ಲಿ ವಾಸವಾಗಿದ್ದು, ಪ್ರತಿದಿನ ಉಪವಾಸದಿಂದಲೇ ಇರಬೇಕಿತ್ತು ಎಂದಿದ್ದಾಳೆ.
Advertisement
ಒಂದು ವೇಳೆ ಊಟ ಮಾಡುವಾಗ ಸಿಕ್ಕಿಬಿದ್ದರೆ ಅಜ್ಜ ನನ್ನ ಹೊಟ್ಟೆಗೆ ಒದೆಯುತ್ತಿದ್ದರು. ನಂತರ ತಿಂದ ಊಟವನ್ನು ಉಗಿಯುವಂತೆ ಅಥವಾ ವಾಂತಿ ಮಾಡುವಂತೆ ಹೇಳುತ್ತಿದ್ದರು ಎಂದಿದ್ದಾಳೆ. ಮೊದಲಿನ ಫೋಟೋಗಳನ್ನ ಹಂಚಿಕೊಂಡಿರೋ ಯುವತಿ, ಯಾರಾದ್ರೂ ಇದೇ ರೀತಿ ಹಿಂಸೆಗೆ ಒಳಗಾಗಿದ್ದರೆ ಅಥವಾ ತಿನ್ನುವ ಖಾಯಿಲೆ ಇದ್ದರೆ ತಡವಾಗೋ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಹೇಳಿದ್ದಾಳೆ.
ಯುವತಿಯನ್ನ ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು, ಆಕೆ ಇನ್ನು 10 ನಿಮಿಷದಲ್ಲಿ ಸಾವನ್ನಪ್ಪುತ್ತಿದ್ದಳು ಎಂದು ಹೇಳಿದ್ದಾಗಿ ವರದಿಯಾಗಿದೆ.
ಯುವತಿ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬಳಿಕ, ಆಕೆ ಸುಳ್ಳು ಹೇಳುತ್ತಿದ್ದಾಳೆ, ಈ ಚಿತ್ರಗಳನ್ನ ಫೋಟೋಶಾಪ್ ಮಾಡಲಾಗಿದೆ ಎಂದು ಜನ ಆರೋಪಿಸಿದ್ದರು.
ಹೀಗಾಗಿ ತಾನು ಆಸ್ಪತ್ರೆಯಲ್ಲಿದ್ದಾಗ ತೆಗೆದುಕೊಂಡಿದ್ದ ಹಲವಾರು ಫೋಟೋಗಳನ್ನ ಹಂಚಿಕೊಂಡಿದ್ದು, ಈ ಮೂಲಕ ತನ್ನ ತಾನು ಸುಳ್ಳು ಹೇಳುತ್ತಿಲ್ಲ ಹಾಗೂ ಆರೋಗ್ಯ ಸ್ಥಿತಿ ಹೇಗಿತ್ತು ಎಂಬ ಬಗ್ಗೆ ವಿವರಿಸಿದ್ದಾಳೆ. ಕೆಲವು ಫೋಟೋಗಳಲ್ಲಿ, ಯುವತಿಯ ಎದೆ ಹಾಗೂ ಕತ್ತಿನ ಭಾಗದಲ್ಲಿ ಗಾಯದ ಗುರುತುಗಳು ಇರೋದನ್ನ ಕಾಣಬಹುದು.
ಈಗ 20 ವರ್ಷ ವಯಸ್ಸಿನವಳಾದ ಈ ಯುವತಿ ಸಂಪೂರ್ಣ ಗುಣಮುಖಳಾಗಿದ್ದು, ಮುದ್ದು ಗೊಂಬೆಯಂತೆ ಕಾಣುತ್ತಾಳೆ. ಆದ್ರೆ ತನ್ನ ಅಜ್ಜನ ವಿರುದ್ಧ ಕ್ರಮ ಕೈಗೊಳ್ಳಲಾಯಿತಾ ಇಲ್ಲವಾ ಎಂಬ ಬಗ್ಗೆ ಆಕೆ ಯಾವುದೇ ಮಾಹಿತಿ ತಿಳಿಸಿಲ್ಲ.
あれから10年近く経ちました。
祖父から食事を許さない、黙って食べたら吐くまで腹蹴りされ体重が16kgまで落ちました。
虐待を受けている人、これとは少し違うけど摂食障害の人、
手遅れになる前に助けを求めてください。
私は発見があと10分遅ければ死んでいたと言われました。#児童虐待#摂食障害 pic.twitter.com/VMTexoUFKd
— 淡々と白菜 (@______410) January 27, 2018