ನನ್ನ ಜಮೀನಿಂದ ತೆಂಗಿನಕಾಯಿ ಕದ್ದವ್ರೆ, ಅರೆಸ್ಟ್ ಮಾಡಿ – ವಿಷ ಹಿಡಿದು ಠಾಣೆ ಮುಂದೆ ಮಹಿಳೆ ಪ್ರತಿಭಟನೆ

Public TV
1 Min Read
tmk

ತುಮಕೂರು: ಮಹಿಳೆಯೊಬ್ಬರು ಪೊಲೀಸ್ ಠಾಣೆ ಎದುರು ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿರುವ ಘಟನೆ ತುಮಕೂರಿನ ತಿಪಟೂರು ತಾಲೂಕಿನ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.

tmk 1 1

ಬೆಳಗರಹಳ್ಳಿ ನಿವಾಸಿ ಉಮಾ ಅವರ ತೋಟಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದ ಶಿವಶಂಕರಯ್ಯ ರನ್ನು ಪೊಲೀಸರು ಬಂಧಿಸದ ಕಾರಣ ಪ್ರತಿಭಟನೆ ನಡೆಸಿದ್ದಾರೆ. ಪಕ್ಕದ ತೋಟದ ಶಿವಶಂಕರಯ್ಯ ಹಾಗೂ ಊಮಾ ಅವರ ಜಮೀನು ವಿವಾದ ಕೋರ್ಟ್ ನಲ್ಲಿದ್ದು ತಡೆಯಾಜ್ಞೆ ನೀಡಿದೆ.

tmk 3 1

ಆದರೂ ಶಿವಶಂಕರಯ್ಯ ತೋಟಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ಲೋಡ್ ಗಟ್ಟಲೆ ತೆಂಗಿನ ಕಾಯಿ ಕಿತ್ತುಕೊಂಡು ಹೋಗಿದ್ದು, ಶಿವಶಂಕರಯ್ಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಎಫ್‍ಐಆರ್ ಆಗಿ ಒಂದು ವಾರ ಕಳೆದರೂ ಕನಿಷ್ಟ ವಿಚಾರಣೆಯನ್ನೂ ಮಾಡಿಲ್ಲ ಎಂದು ಉಮಾ ಧರಣಿ ನಡೆಸುತ್ತಿದ್ದಾರೆ.

tmk 5 1

tmk 4 1

Share This Article
Leave a Comment

Leave a Reply

Your email address will not be published. Required fields are marked *