ಲಕ್ನೋ: ಸೆಕ್ಯೂರಿಟಿ ಗಾರ್ಡ್ (Security) ಒಬ್ಬರು ಅಪಾರ್ಟ್ಮೆಂಟ್ ಗೇಟ್ ಬಾಗಿಲು ತೆಗೆಯೋದು ತಡವಾಗಿದ್ದಕ್ಕೇ ಮಹಿಳಾ ಪ್ರೊಫೆಸರ್( Women Professor) ಸಿಬ್ಬಂದಿಯ ಕಾಲರ್‌ಪಟ್ಟಿ ಹಿಡಿದು ಎಳೆದಾಡಿದ್ದಾಳೆ. ಅಲ್ಲದೇ ಬಾಯಿಗೆ ಬಂದಂತೆ ಬೈದು ನಿಂದಿಸಿದ್ದಾಳೆ.
ನೊಯ್ಡಾದ ಸೆಕ್ಟರ್ 121 ರಲ್ಲಿರುವ ಕ್ಲಿಯೋ ಕೌಂಟಿಯಲ್ಲಿ ಘಟನೆ ನಡೆದಿದ್ದು, ಕಳೆದ ಒಂದು ತಿಂಗಳಲ್ಲಿ ಇದು ನೊಯ್ಡಾದಲ್ಲಿ ನಡೆದ 2ನೇ ಘಟನೆಯಾಗಿದೆ. ಮಹಿಳಾ ಪ್ರೊಫೆಸರ್ (Professor) ಸುತಾಪ್ ದಾಸ್ ಎಂಬಾಕೆಯೇ ತನ್ನ ಕಾರಿನಿಂದ ಇಳಿದು ಭದ್ರತಾ ಸಿಬ್ಬಂದಿ (security guard) ಸಚಿನ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ದೃಶ್ಯಾವಳಿ ಸಿಸಿಟಿಯಲ್ಲಿ (CCTV) ಸೆರೆಯಾಗಿದೆ. ಇದನ್ನೂ ಓದಿ: ʼಬ್ರಹ್ಮಾಸ್ತ್ರʼ ಚಿತ್ರದಲ್ಲಿ ನಾಯಕನ ತಾಯಿ ಪಾತ್ರ ಮಾಡಿರೋ ನಟಿ ರಣಬೀರ್ ಮಾಜಿ ಪ್ರೇಯಸಿ?
Advertisement
Another Video of #ThappadBaaz Women in #Noida, Security guard was slapped after a minor altercation, The slapping woman caught in #CCTV, Professor is a woman by Profession, #CleoCountySociety Case#VideoViral pic.twitter.com/SNgeW4GEeE
— Anuj Tomar journalist (@THAKURANUJTOMAR) September 11, 2022
Advertisement
ಘಟನೆ ಬಳಿಕ ಮಾತನಾಡಿದ ಭದ್ರತಾ ಸಿಬ್ಬಂದಿ ಸಚಿನ್, ನಾವು ಆರ್‌ಎಫ್‌ಐಡಿ (RFID) ಕೆಲಸ ಮಾಡುತ್ತಿದೆವು. ಈ ವೇಳೆ ಮಹಿಳೆ ಆಕೆಯ ಕಾರಿನ ಸಂಖ್ಯೆಯನ್ನು ತೋರಿಸಲಿಲ್ಲ. ಆದರೂ ನಾವು ಕಾರನ್ನು ಒಳಗೆ ಹೋಗಲು ಅನುಮತಿಸಿದೆವು. ನಂತರ ಆಕೆ ಕಾರನ್ನು ನಿಲ್ಲಿಸಿ ಬಂದು ಬಾಯಿಗೆ ಬಂದಂತೆ ನಿಂದಿಸಲು ಶುರು ಮಾಡಿದ್ಲು. ಜೊತೆಗೆ ಕಪಾಳಮೋಕ್ಷ ಮಾಡಿದಳು. ತಕ್ಷಣ ನಾವು ಪೊಲೀಸರಿಗೆ (Police) ದೂರವಾಣಿ ಕರೆ ಮಾಡಿ ಘಟನೆ ವಿವರಿಸಿದೆವು. ಇದನ್ನೂ ಓದಿ: ಕ್ರಾಂತಿಕಾರಿ ಸಾಧು ಎಂದೇ ಹೆಸರಾಗಿದ್ದ ಸ್ವಾಮಿ ಸ್ವರೂಪಾನಂದ ಸರಸ್ವತಿ ನಿಧನ
Advertisement
Advertisement
ಭದ್ರತಾ ಸಿಬ್ಬಂದಿ ಗೇಟ್ ತೆರೆಯುವುದು ತಡ ಮಾಡಿದ್ದಕ್ಕೇ ಪ್ರಾಧ್ಯಾಪಕಿ ಕಪಾಳಮೋಕ್ಷ ಮಾಡಿದ್ದಾರೆ. ಮಹಿಳೆ, ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿ ನಿಂದಿಸುತ್ತಿದ್ದರೂ ಯಾರೊಬ್ಬರೂ ಮಧ್ಯ ಪ್ರವೇಶಿಸಲಿಲ್ಲ. ಆದರೆ ಸಹ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ಘಟನೆಯನ್ನು ರೆಕಾರ್ಡ್ ಮಾಡುತ್ತಿದ್ದರು. ಈ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭದ್ರತಾ ಸಿಬ್ಬಂದಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅದಾದ ಕೆಲವೇ ಕ್ಷಣಗಳಲ್ಲಿ ಆಕೆಗೆ ಜಾಮೀನು ನೀಡಲಾಯಿತು ಎಂದು ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಸೆಕ್ಯೂರಿಟಿ ಕಾಲರ್ ಹಿಡಿದು ಎಳೆದಾಡಿದ ಮಹಿಳೆ – ರಂಪಾಟದ ವೀಡಿಯೋ ವೈರಲ್
ಕಳೆದ ತಿಂಗಳು ಇದೇ ರೀತಿ ಘಟನೆಯೊಂದು ನಡೆದಿತ್ತು. ಸೆಕ್ಯೂರಿಟಿ ಕಾಲರ್ ಹಿಡಿದು ಎಳೆದಾಡಿ ತನ್ನ ದರ್ಪ ತೋರಿಸಿದ್ದು, ಹಲ್ಲೆಗೂ ಮುಂದಾಗಿರುವ ಘಟನೆ ನೊಯ್ಡಾದ ಜೇಪೆ ಗ್ರೂಪ್ ಸೊಸೈಟಿ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.