– ಪತಿಯೂ ಕಾನ್‍ಸ್ಟೇಬಲ್ ಡ್ಯೂಟಿ ಮಾಡ್ತಿದ್ದಾರೆ
ಗಾಂಧಿನಗರ: ಕೊರೊನಾ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದೆ. ಈ ವೇಳೆ ಪೊಲೀಸರು ತಮ್ಮ ಕುಟುಂಬದವರಿಂದ ದೂರ ಉಳಿದು ಜನರ ಜೀವವನ್ನು ಕಾಪಾಡುವ ದೃಷ್ಟಿಯಿಂದ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಮಹಿಳಾ ಪೇದೆಯೊಬ್ಬರು ತಮ್ಮ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗುಜರಾತ್‍ನ ಕಚ್‍ನಲ್ಲಿ ಮಹಿಳಾ ಪೇದೆಯೊಬ್ಬರು 14 ತಿಂಗಳ ಕಂದನನ್ನು ಕಂಕುಳಲ್ಲಿ ಕೂರಿಸಿಕೊಂಡು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಕಾ ದೇಸಾಯಿ ಪೇದೆ ಕುಚ್‍ನ ಭುಜ್ ಪ್ರದೇಶದಲ್ಲಿ ಡ್ಯೂಟಿ ನಿರ್ವಹಿಸುತ್ತಿದ್ದಾರೆ.
Advertisement
Advertisement
ಅಲ್ಕಾ ದೇಸಾಯಿ ಪತಿ ಕೂಡ ಪೊಲೀಸ್ ಕಾನ್‍ಸ್ಟೇಬಲ್ ಆಗಿದ್ದು, ಎಸ್‍ಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಮಗುವನ್ನು ಎತ್ತಿಕೊಂಡೇ ಅನಿವಾರ್ಯ ಪರಿಸ್ಥಿತಿಯಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ.
Advertisement
ನನ್ನ ಪತಿ ಮನೆಯಲ್ಲಿದ್ದಾಗ ಅವರೇ ಮಗುವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಪತಿ ಕೂಡ ಕೆಲಸದಲ್ಲಿದ್ದಾರೆ. ಆದ್ದರಿಂದ ನನ್ನ ಜೊತೆಯಲ್ಲಿ ಮಗುವನ್ನು ಕರೆದುಕೊಂಡು ಬರಬೇಕಾಗಿದೆ. ಇಬ್ಬರು ಡ್ಯೂಟಿ ಮೇಲೆ ಇರುವುದರಿಂದ ಮಗುವನ್ನು ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
Advertisement
ಮಗುವಿನ ಎತ್ತಿಕೊಂಡು ಕರ್ತವ್ಯ ನಿಷ್ಠೆಯನ್ನು ಮೆರೆದಿರುವ ಅಲ್ಕಾ ದೇಸಾಯಿ ಅವರಿಗೆ ಜನರು ಮೆಚ್ಚಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯಕ್ಕೆ ಈ ಸುದ್ದಿ ವೈರಲ್ ಆದ ನಂತರ ಐಜಿಪಿ ಅವರು ಮಹಿಳಾ ಪೇದೆಗೆ ಪೊಲೀಸ್ ಠಾಣೆಯಲ್ಲೇ ಡ್ಯೂಟಿ ಮಾಡುವಂತೆ ಆದೇಶ ನೀಡಲಾಗಿದೆ ಎಂದು ವರದಿಯಾಗಿದೆ.