ಪಾಟ್ನಾ: ಆಪರೇಷನ್ ಥಿಯೇಟರ್ ನಲ್ಲಿ ಪವರ್ ಕಟ್ ಆದ ಹಿನ್ನಲೆಯಲ್ಲಿ ಮಹಿಳೆಯೊಬ್ಬರಿಗೆ ಟಾರ್ಚ್ ಲೈಟ್‍ನಲ್ಲೇ ಶಸ್ತ್ರಚಿಕಿತ್ಸೆ ಮಾಡಿದ ಘಟನೆ ಬಿಹಾರದ ಸಹಸ್ರಾದ ಸದಾರ್ ಆಸ್ಪತ್ರೆಯಲ್ಲಿ ನಡೆದಿದೆ.
ಟಾರ್ಚ್ ಲೈಟಿನಲ್ಲಿ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿರೋ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಅವರ ಸುತ್ತಮುತ್ತ ಹಲವು ಜನ ಸುತ್ತುವರಿದು ಸ್ಟಿಚಸ್ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೇ ವೈದ್ಯರು ಬಿಳಿ ಬಟ್ಟೆ ಧರಿಸುವ ಬದಲು ಖಾಕಿ ಉಡುಪನ್ನು ಧರಿಸಿದ್ದಾರೆ.
Advertisement
Advertisement
ವರದಿಗಳ ಪ್ರಕಾರ ಈ ಆಸ್ಪತ್ರೆಯಲ್ಲಿ ಜನರೇಟರ್ ಸೌಲಭ್ಯ ಇಲ್ಲದ ಕಾರಣ ಮೊಬೈಲ್ ಫೋನ್ ಟಾರ್ಚ್‍ನಲ್ಲೇ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆದು ಕೆಲವು ದಿನಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Advertisement
ಈ ಹಿಂದೆ ಉತ್ತರಪ್ರದೇಶದ ಉನಾವೊ ಜಿಲ್ಲೆಯಲ್ಲಿ 32 ರೋಗಿಗಳಿಗೆ ಇದೇ ರೀತಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು ಎಂದು ವರದಿಯಾಗಿದೆ.
Advertisement
#WATCH: A woman is operated upon in torch light at Sadar Hospital in Saharsa as there was no electricity at that time in the hospital. #Bihar pic.twitter.com/HN6T5I2683
— ANI (@ANI) March 19, 2018