ಭೋಪಾಲ್: ಜೀತದಾಳಾಗಿ ಕೆಲಸ ಮಾಡಲು ಒಪ್ಪದಿದ್ದಕ್ಕೆ ಮಹಿಳೆಯ ಮೂಗು ಕತ್ತರಿಸಿರೋ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ರೇನ್ವಜಾ ಗ್ರಾಮದಲ್ಲಿ ನಡೆದಿದೆ.
Advertisement
ಮಹಿಳೆ ಜಾನಕಿ ಧಾನಕ್ ಹಾಗೂ ಆಕೆಯ ಗಂಡ ಜೀತಕ್ಕೆ ದುಡಿಯಲು ನಿರಾಕರಿಸಿದ್ದರಿಂದ ಗ್ರಾಮದ ನರೇಂದ್ರ ರಜ್‍ಪೂತ್ ಹಾಗೂ ಸಾಹಬ್ ಸಿಂಗ್ ಆಕೆಯ ಮೂಗು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮನೆ ಹಾಗೂ ಜಮೀನಿನ ಕೆಲಸ ಮಾಡುವುದಿಲ್ಲ ಎಂದಿದ್ದಕ್ಕೆ ಆರೋಪಿಗಳು ಜಾನಕಿ ಅವರ ಪತಿ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಬಳಿಕ ಜಾನಕಿ ಪತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಆಕೆಯ ಮೂಗು ಕತ್ತರಿಸಿದ್ದಾರೆ. ಕೂಡಲೇ ಜಾನಕಿಯನ್ನು ಬುಂದೇಲ್‍ಖಂಡ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ.
Advertisement
Advertisement
ಮಹಿಳಾ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ದೂರುಗಳನ್ನ ಆಲಿಸಲು ಮಧ್ಯಪ್ರದೇಶ ಮಹಿಳಾ ಆಯೋಗ ಬುಧವಾರದಂದು ಆಯೋಜಿಸಿದ್ದ ಕ್ಯಾಂಪ್‍ವೊಂದಕ್ಕೆ ಮಹಿಳೆ ಹೋದಾಗ ಮೂಗು ಕತ್ತರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳಾ ಆಯೋಗವು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದು, ಸಾಗರ್ ಎಸ್‍ಪಿಗೆ ಈ ಬಗ್ಗೆ ತನಿಖೆ ಆರಂಭಿಸುವಂತೆ ಆದೇಶಿಸಿದೆ.
Advertisement
ಇದೊಂದು ಗಂಭೀರವಾದ ವಿಚಾರ. ಮಹಿಳೆಯನ್ನ ಬಲವಂತವಾಗಿ ಜೀವ ಪದ್ಧತಿಗೆ ತೆಗೆದುಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಹಿಳಾ ಆಯೋಗದ ಸದಸ್ಯೆ ಲತಾ ವಾಂಖೇಡೆ ಹೇಳಿದ್ದಾರೆ.