ಪಾಟ್ನಾ: ಬಿಹಾರದ ಗೋಪಾಲಗಂಜ್ ಜಿಲ್ಲೆಯ ಕರ್ಣಾಪುರ ಪಂಚಾಯ್ತಿ ವ್ಯಾಪ್ತಿಯ ಗ್ರಾಮದ ಮಹಿಳೆಯರು ತಮ್ಮ ಮನೆಗಳಲ್ಲಿ ಹೊಸದಾಗಿ ಕಟ್ಟಿಸಿರುವ ಶೌಚಾಲಯಕ್ಕೆ ಪೂಜೆ ಸಲ್ಲಿಸಿದ್ದಾರೆ.
ಹೊಸ ಶೌಚಾಲಯದ ಮುಂದೆ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದು, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇಲ್ಲಿನ ಮಹಿಳೆಯರು ಶೌಚಾಲಯವನ್ನು `ಇಜ್ಜತ್ ಘರ್’ (ಮರ್ಯಾದಾ ಗೃಹ) ಎಂದು ಕರೆದಿದ್ದು, ಮಹಿಳೆಯರಿಗೆ ಘನತೆ ಮತ್ತು ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆ ಎಂದಿದ್ದಾರೆ.
Advertisement
ಕೆಲವು ದಿನಗಳ ಹಿಂದಷ್ಟೇ ಪಟ್ನಾದಿಂದ 35 ಕಿ,ಮೀ ದೂರದಲ್ಲಿರೋ ಬಲಿಯಾವನ್ ಗ್ರಾಮದಲ್ಲಿ ಮಹಿಳೆಯೊಬ್ಬರು ಬಹಿರ್ದೆಸೆಗೆ ಹೋಗಿದ್ದಾಗ ಅವರ ಮೇಲೆ ಅತ್ಯಾಚಾರ ನಡೆದಿತ್ತು.
Advertisement
Advertisement
ಗೋಪಾಲಗಂಜ್ ಜಿಲ್ಲೆಯ ಜಿಲ್ಲಾಧಿಕಾರಿ ಸೈಕಲ್‍ನಲ್ಲಿ ಗ್ರಾಮದತ್ತ ಬಂದಾಗ ರಸ್ತೆಯ ಎರಡು ಬದಿಗಳಲ್ಲಿ ಮಹಿಳೆಯರು ಕೈಯಲ್ಲಿ ದೀಪ ಹಿಡಿದು ನಿಂತಿದ್ದರು. ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ಶೌಚಾಲಯ ನಿರ್ಮಾಣ ಪೂರ್ಣಗೊಳ್ಳಬೇಕೆಂದು ಕಷ್ಟಪಟ್ಟು ದುಡಿದ ಮಹಿಳೆಯರ ಶ್ರಮವನ್ನ ಶ್ಲಾಘಿಸಿದ್ರು.
Advertisement
ಗ್ರಾಮದ ಮಹಿಳೆಯೊಬ್ಬರು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ಎರಡಂತಸ್ತಿನ ದೊಡ್ಡ ಮನೆಯಲ್ಲಿ ವಾಸವಾಗಿದ್ರೂ ತನ್ನ ಮನೆಯಲ್ಲಿ ಶೌಚಾಲಯವಿರಲಿಲ್ಲ ಎಂದಿದ್ದಾರೆ.
ನನ್ನ ಪತಿ ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮದುವೆಗೆ ಮುಂಚೆ ನಾನು ಇವರ ಮನೆಯಲ್ಲಿ ಶೌಚಾಲಯ ಇರುತ್ತದೆ ಎಂದುಕೊಂಡಿದ್ದೆ. ಯಾಕಂದ್ರೆ ಈ ಮನೆ ಕಟ್ಟಲು ತುಂಬಾ ಹಣ ಖರ್ಚು ಮಾಡಿದ್ದರು. ಆದ್ರೆ ಮೊದಲ ದಿನ ಮನೆಗೆ ಬಂದಾಗ ಮನೆಯಲ್ಲಿ ಶೌಚಾಲಯವೇ ಇಲ್ಲದಿರುವುದು ನೋಡಿ ನನಗೆ ಆಶ್ಚರ್ಯವಾಗಿತ್ತು ಅಂತ ಹೇಳಿದ್ರು.