ಗುವಾಹಟಿ: ಮಗಳ (Daughter) ಕನಸನ್ನು ನನಸು ಮಾಡಲು ಹೊರಟ ದಂಪತಿಯು ಮಹಿಳೆಯನ್ನು (Woman) ಕೊಲೆ ಮಾಡಿ ಆಕೆಯ 10 ತಿಂಗಳ ಮಗುವನ್ನು (Baby) ಅಪಹರಿಸಿದ ಘಟನೆ ಅಸ್ಸಾಂನ ಶಿವಸಾಗರ್ ಜಿಲ್ಲೆಯಲ್ಲಿ ನಡೆದಿದೆ.
ನಿಟುಮೋನಿ ಮೃತ ಮಹಿಳೆಯಾಗಿದ್ದು, ದಂಪತಿಯಾದ ತೆಂಗಪುಖೂರಿನ ಪ್ರನಾಲಿ ಗೊಗೊಯ್ ಅಲಿಯಾಸ್ ಹಿರಾಮಾಯಿ ಮತ್ತು ಬಸಂತ ಗೊಗೊಯ್ ಬಂಧಿತ ಆರೋಪಿಗಳು. ಶಿವಸಾಗರದ ರಾಜ್‍ಬರಿ ಟೀ ಎಸ್ಟೇಟ್‍ನ ನಿವಾಸಿ ನಿತುಮೋನಿಯ ಶವವು ಲುಖ್ರಾಕೋನ್ ಚರಂಡಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಪೊಲೀಸರಿಗೆ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಅಷ್ಟೇ ಅಲ್ಲದೇ ತಿಳಿದ ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ಆಕೆಯ ಮಗಳು ಕಾಣೆಯಾಗಿದ್ದಾಳೆ ಎಂಬುದು ಬಯಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮಗುವನ್ನು ಅಪಹರಿಸಿರುವುದು ಬೆಳಕಿಗೆ ಬಂದಿದೆ.
ಹಿರಾಮಾಯಿ ಮತ್ತು ಬಸಂತ ಗೊಗೊಯ್ ದಂಪತಿ ತಮ್ಮ ಮಗಳಿಗೆ (Daughter) ಮಕ್ಕಳಿಲ್ಲ ಇಲ್ಲ ಎಂದು ಕೊರಗುತ್ತಿದ್ದನ್ನು ನೋಡಿ, ಅವಳ ಕನಸನ್ನು ನನಸು ಮಾಡಬೇಕು ಎಂದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಿಟುಮೋನಿ ಮತ್ತು ಆಕೆಯ ಮಗುವನ್ನು ಕೆಲಸದ ನೆಪದಲ್ಲಿ ತಮ್ಮ ಮನೆಗೆ ಆಹ್ವಾನಿಸಿದ್ದರು. ಈ ವೇಳೆ ದಂಪತಿ ನಿಟುಮೋನಿಯ ಬಳಿ ಇದ್ದ ಮಗುವನ್ನು ಕಸಿದುಕೊಳ್ಳಲು ಯತ್ನಿಸಿದ್ದರು. ಆದರೆ ನಿಟುಮೋನಿ ಇದನ್ನು ವಿರೋಧಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದರು. ಇದನ್ನೂ ಓದಿ: ಹಳೇ ಮೈಸೂರು ಭಾಗದ ಮೇಲೆ ಕಣ್ಣು- ಡಿ.30ಕ್ಕೆ ಮಂಡ್ಯದಲ್ಲಿ ಅಮಿತ್ ಶಾ ಸಮಾವೇಶ
ಅದಾದ ಬಳಿಕ ದಂಪತಿ ನಿಟುಮೋನಿಯ ಮಗುವನ್ನು ಹಿಮಾಚಲ ಪ್ರದೇಶದಲ್ಲಿ ವಾಸಿಸುವ ತಮ್ಮ ಮಗಳಿಗೆ ಹಸ್ತಾಂತರಿಸಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಗ ಪ್ರಶಾಂತ ಗೊಗೊಯ್‍ಯ ಸಹಾಯ ಪಡೆದು ಮಗುವನ್ನು ಹಿಮಾಚಲಕ್ಕೆ ಕಳುಹಿಸಲು ಎಲ್ಲ ವ್ಯವಸ್ಥೆ ಮಾಡಿದ್ದಾರೆ. ಆದರೆ ಪೊಲೀಸರು ಕೊಲೆಯನ್ನು ಗಂಭೀರವಾಗಿ ಪರಿಗಣಿಸಿ ದಂಪತಿ ಹಾಗೂ ಮಗನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನಿಖರವಾಗಿ ಹೇಳುವುದು ಕಷ್ಟ, ಆದರೆ ಸೇತುವೆ ರೂಪದ ರಚನೆ ಇದೆ – ರಾಮ ಸೇತು ಬಗ್ಗೆ ಕೇಂದ್ರ ಉತ್ತರ