ತಿರುವಂತನಪುರಂ: ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದ 30 ವರ್ಷದ ಮಹಿಳೆಯ ಮೃತದೇಹ ತಿರುವನಂತಪುರದ ಅಂಬೂರಿಯಲ್ಲಿ ಖಾಲಿ ಜಾಗದಲ್ಲಿ ಕೊಲೆ ಮಾಡಿ ಹೂತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ರಾಖಿ ಮೃತ ಮಹಿಳೆ. ಪೊಲೀಸರು ನಿರಂತರವಾಗಿ ಒಂದು ತಿಂಗಳ ಕಾಲ ಕಾರ್ಯಾಚರಣೆ ಮಾಡಿ ಮೃತ ಮಹಿಳೆಯ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಖಿಯ ಮಾಜಿ ಸಹೋದ್ಯೋಗಿ, ಸೇನಾ ವ್ಯಕ್ತಿ ಅಖಿಲ್ ಸೇರಿದಂತೆ ಮೂವರು ಸೇರಿ ಕೊಲೆ ಮಾಡಿದ್ದಾರೆ. ಸದ್ಯಕ್ಕೆ ಪೊಲೀಸರು ಓರ್ವವನ್ನು ಬಂಧಿಸಿದ್ದು, ಮತ್ತಿಬ್ಬರಿಗಾಗಿ ಹುಡುಕಾಟ ಮಾಡುತ್ತಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಮೃತ ರಾಖಿ ಕೊಚ್ಚಿಯ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಜೂನ್ 21 ರಂದು ತನ್ನ ಕಚೇರಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದಳು. ನಂತರ ಆಕೆಯಿಂದ ಯಾವುದೇ ಫೋನ್ ಬಂದಿಲ್ಲ, ಮನೆಗೂ ವಾಪಸ್ ಬಂದಿಲ್ಲ. ಕೊನೆಗೆ ರಾಖಿಯ ಪೋಷಕರು ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರನ್ನು ದಾಖಲಿಸಿದ್ದರು. ಆದರೆ ಒಂದು ತಿಂಗಳ ನಂತರ ಅಂಬೂರಿಯಲ್ಲಿರುವ ಅಖಿಲ್ ಮನೆಯ ಪಕ್ಕದಲ್ಲಿ ಖಾಲಿ ಇರುವ ಜಾಗದಿಂದ ಪೊಲೀಸರು ಮೃತ ದೇಹವನ್ನು ವಶಪಡಿಸಿಕೊಂಡಿದ್ದಾರೆ.
Advertisement
ಮೃತ ರಾಖಿ ಮತ್ತು ಅಖಿಲ್ ಕೆಲವು ವರ್ಷಗಳ ಹಿಂದೆ ರಿಲೇಷನ್‍ಶಿಪ್‍ನಲ್ಲಿದ್ದರು. ಅಖಿಲ್ ಇಬ್ಬರ ಸಂಬಂಧವನ್ನು ಮುಂದವರಿಸುವುದು ಬೇಡ ಎಂದು ಹೇಳಿದ್ದಾನೆ. ಇದಕ್ಕೆ ರಾಖಿ ಒಪ್ಪಲಿಲ್ಲ. ಅಷ್ಟೇ ಅಲ್ಲದೇ ಆತ ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು. ಈ ಕಾರಣದಿಂದಲೇ ರಾಖಿಯನ್ನು ಕೊಲೆ ಮಾಡಲು ಅಖಿಲ್ ಪ್ಲ್ಯಾನ್ ಮಾಡಿಕೊಂಡಿದ್ದನು. ಅಖಿಲ್ ಹೊಸ ಮನೆ ನಿರ್ಮಿಸುತ್ತಿದ್ದು, ರಾಖಿಯನ್ನು ಮನೆ ನೋಡಲು ಕರೆದಿದ್ದನು. ಆಕೆ ಮನೆಗೆ ಬರುವುದಕ್ಕೂ ಮೊದಲೇ ಅಖಿಲ್, ಸ್ನೇಹಿತ ಆದರ್ಶ್ ಮತ್ತು ಸಹೋದರ ರಾಹುಲ್ ಮೂವರು ರಾಖಿಯನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು.
Advertisement
ಕೊಲೆ:
ಅದರಂತೆಯೇ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಅಖಿಲ್‍ನನ್ನು ಬಿಡುವಂತೆ ಕೇಳಿಕೊಂಡಿದ್ದಾರೆ. ಆದರೆ ಮೃತ ರಾಖಿ ಇದಕ್ಕೆ ಒಪ್ಪಿಕೊಂಡಿಲ್ಲ. ಕೊನೆಗೆ ರಾಖಿ ಕೂಗಾಟ ಯಾರಿಗೂ ಕೇಳಿಸಬಾರದೆಂದು ವಾಹನದ ಎಕ್ಸಿಲೇಟರ್ ಅಧಿಕ ಮಾಡಿದ್ದಾರೆ. ನಂತರ ಓರ್ವ ಆಕೆಯ ಕತ್ತನ್ನು ಹಿಸುಕಿ ಕೊಲೆ ಮಾಡಿದ್ದು, ಅಖಿಲ್ ಮನೆ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಹೂತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೋಷಕರು ನೀಡಿದ ದೂರಿನ ಅನ್ವಯ ನಾವು ತನಿಖೆ ಶುರು ಮಾಡಿದ್ದೇವು. ಆಗ ಮೃತ ರಾಖಿ ಫೋನ್ ಟ್ರೇಸ್ ಮಾಡಿದೆವು. ಜೊತೆಗೆ ಆರೋಪಿ ಆದರ್ಶ್ ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮೃತದೇಹವಿದ್ದ ಸ್ಥಳ ಪತ್ತೆಯಾಗಿದೆ. ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದೇವೆ. ಕೆಲವು ದಿನಗಳ ಹಿಂದೆಯೇ ರಾಖಿಯನ್ನು ಕೊಲೆ ಮಾಡಿರಬಹುದು. ಈ ಸಂಬಂಧ ಅಖಿಲ್‍ನ ಸ್ನೇಹಿತ ಆದರ್ಶ್ ನನ್ನು ಬಂಧಿಸಿದ್ದು, ಇತರ ಇಬ್ಬರು ಆರೋಪಿಗಾಗಿ ಹುಡುಕಾಡುತ್ತಿದ್ದೇವೆ ಎಂದು ಇನ್ಸ್ ಪೆಕ್ಟರ್ ಹೇಳಿದರು.