– ವೀಕೆಂಡ್ ಪಾರ್ಟಿಗೆ ಮದ್ಯಕ್ಕೆ ಆರ್ಡರ್
– ಕೋಲ್ಕತ್ತಾದಿಂದ ಪುಣೆಗೆ ಬಂದಿದ್ದ ಟೆಕ್ಕಿ
– ಮದ್ಯ ನಿಷೇಧದಂದೇ ಪೇಚಿಗೆ ಸಿಲುಕಿದ ಮಹಿಳೆ
ಪುಣೆ: ಅಯೋಧ್ಯೆ ತೀರ್ಪಿನಂದು ದೇಶಾದ್ಯಂತ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಆದರೆ ಮಹಿಳಾ ಟೆಕ್ಕಿಯೊಬ್ಬರು ಮದ್ಯವನ್ನು ಆನ್ ಲೈನ್‍ನಲ್ಲಿ ಆರ್ಡರ್ ಮಾಡಿ ಸುಮಾರು 51 ಸಾವಿರ ಕಳೆದುಕೊಂಡಿದ್ದಾರೆ.
ಹೌದು. ಕೋಲ್ಕತ್ತಾದ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ 32 ವರ್ಷದ ಮಹಿಳೆ 50,778 ರೂ. ಮೌಲ್ಯದ ಮದ್ಯವನ್ನು ಆರ್ಡರ್ ಮಾಡಿದ್ದರು. ಆ ದಿನ ಮಾಮೂಲಿ ದಿನಕ್ಕಿಂತ ಸ್ವಲ್ಪ ಹೆಚ್ಚಿಗೆ ಹಣ ಇದ್ದರೂ ಮಹಿಳೆ ಆರ್ಡರ್ ಮಾಡಿಯೇ ಬಿಟ್ಟಿದ್ದಾರೆ.
Advertisement
Advertisement
ಸುಮಾರು 4 ದಿನಗಳ ಹಿಂದೆ ಟೆಕ್ಕಿ ಕೋಲ್ಕತ್ತಾದಿಂದ ಪುಣೆಗೆ ಬಂದಿದ್ದರು. ಈ ವೇಳೆ ಗೆಳೆಯ-ಗೆಳತಿಯನ್ನು ಭೇಟಿ ಮಾಡಿದ್ದಾರೆ. ಆ ಬಳಿಕ ವೀಕೆಂಡ್ ಇದೆ ಪಾರ್ಟಿ ಮಾಡೋಣವೆಂದು ನಿರ್ಧಾರ ಮಾಡಿದರು. ಆದರೆ ಆಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಪುಣೆಯ ಜಿಲ್ಲಾಧಿಕಾರಿ ಶನಿವಾರ ಹಾಗೂ ಭಾನುವಾರ ಮದ್ಯ ಮಾರಾಟ ನಿಷೇಧಿಸುವಂತೆ ಆದೇಶ ಹೊರಡಿಸಿದ್ದರು.
Advertisement
ಇದರಿಂದ ಏನು ಮಾಡುವುದೆಂದು ಯೋಚನೆ ಮಾಡಿದ ಟೆಕ್ಕಿಗೆ ಒಂದು ಉಪಾಯ ಹೊಳೆದಿದೆ. ಅದೇ ಆನ್ ಲೈನ್ ಆರ್ಡರ್. ಕೂಡಲೇ ಟಿಕ್ಕಿ, ಹಲವು ಮದ್ಯದಂಗಡಿಗಳಿಗೆ ಕರೆ ಮಾಡಿದ್ದಾರೆ. ಆದರೆ ಎಲ್ಲರೂ ಟೆಕ್ಕಿಗೆ ಮದ್ಯ ನೀಡಲು ನಿರಾಕರಿಸಿದರು. ಇದರಿಂದ ಟೆಕ್ಕಿ ಬೇಸರಗೊಂಡಿದ್ದರು. ಇದೇ ವೇಳೆ ಶನಿವಾರ ಟೆಕ್ಕಿಗೆ ಇಂಟರ್ನೆಟ್ ನಲ್ಲಿ ಒಂದು ಫೋನ್ ನಂಬರ್ ಸಿಕ್ಕಿದೆ. ಕೂಡಲೇ ಆಕೆ ಆ ನಂಬರಿಗೆ ಕರೆ ಮಾಡಿದರು. ಆ ಕಡೆ ವ್ಯಕ್ತಿಯೊಬ್ಬ ಕರೆ ಸ್ವೀಕರಿಸಿ, ಮನೆಗೆ ಮದ್ಯ ತಂದು ಕೊಡಲು ಒಪ್ಪಿಕೊಂಡಿದ್ದಾನೆ.
Advertisement
ಅಂತೆಯೇ ವ್ಯಕ್ತಿಯು ಟೆಕ್ಕಿ ಬಳಿ ಓಟಿಪಿ ಕಳುಹಿಸುವಂತೆ ಹೇಳಿದ್ದಾನೆ. ಟೆಕ್ಕಿಯೂ ಆತನನ್ನು ನಂಬಿ ತನಗೆ ಬಂದ ಒಟಿಪಿ ನಂಬರ್ ಕಳುಹಿಸಿದ್ದಾರೆ. ಇದಾದ ಕೆಲಸ ನಿಮಿಷಗಳಲ್ಲಿ ಮಹಿಳೆಯ ಬ್ಯಾಂಕ್ ಅಕೌಂಟಿನಿಂದ 31,777 ರೂ. ವಿಥ್‍ಡ್ರಾ ಆಗಿದೆ. ಇದರಿಂದ ಗಾಬರಿಗೊಂಡ ಟೆಕ್ಕಿ, ಕೂಡಲೇ ವ್ಯಕ್ತಿಗೆ ಕರೆ ಮಾಡಿದ್ದಾರೆ. ಆಗ ಆತ ಗಾಬರಿಯಾಗಬೇಡಿ ನಿಮ್ಮ ಹಣ ಮತ್ತೆ ನಿಮಗೆ ಕ್ರೆಡಿಟ್ ಆಗುತ್ತೆ. ಅದಕ್ಕಾಗಿ ನೀವು ಮತ್ತೊಮ್ಮೆ ಓಟಿಪಿ ನಂಬರ್ ಕಳುಹಿಸಿ ಎಂದಿದ್ದಾನೆ.
ಟೆಕ್ಕಿ ಮತ್ತೆ ಓಟಿಪಿ ನಂಬರ್ ಕಳುಹಿಸಿದ್ದಾರೆ. ಈ ವೇಳೆ ಟೆಕ್ಕಿ ಮತ್ತೆ ತನ್ನ ಅಕೌಂಟಿನಿಂದ 19,001 ರೂ. ಕಳೆದುಕೊಂಡರು. ಇದರಿಂದ ಮತ್ತೆ ಗಾಬರಿಗೊಂಡ ಟೆಕ್ಕಿ, ವ್ಯಕ್ತಿಗೆ ಕರೆ ಮಾಡಿದ್ದಾರೆ. ಆದರೆ ಈ ವೇಳೆ ಆತನನ್ನು ಸಂಪರ್ಕಿಸಲು ಟೆಕ್ಕಿಗೆ ಸಾಧ್ಯವಾಗಲಿಲ್ಲ.
ಈ ಹಿನ್ನೆಲೆಯಲ್ಲಿ ಮಹಿಳಾ ಟೆಕ್ಕಿ ಕೂಡಲೇ ಹಿಂಜೇವಾಡಿ ಪೊಲೀಸ್ ಠಾಣೆಗೆ ತೆರಳಿ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ.