ಮುಂಬೈ: ಮಹಿಳೆಯೊಬ್ಬಳು (Woman) ಮದ್ಯಕ್ಕೆ (Alcohol) ಸಾಲ ನೀಡುವುದಿಲ್ಲ ಎಂದಿದ್ದಕ್ಕೆ ಆಕೆಯ ನೆರೆ ಮನೆಯಾತನೇ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವ್ಲಿ ಪ್ರದೇಶದಲ್ಲಿ ನಡೆದಿದೆ.
ಹತ್ಯೆಗೀಡಾದ ಮಹಿಳೆಯನ್ನು ವೈಶಾಲಿ ಮಸ್ದೂದ್ (44) ಎಂದು ಗುರುತಿಸಲಾಗಿದೆ. ವೈಶಾಲಿ ಬಳಿ ಆಗಾಗ ಆರೋಪಿಯು ಮದ್ಯಕ್ಕಾಗಿ ಹಣವನ್ನು (Money) ಎರವಲು ಪಡೆಯುತ್ತಿದ್ದ.
Advertisement
Advertisement
ಈ ಹಿನ್ನೆಲೆಯಲ್ಲಿ ಮದ್ಯಕ್ಕಾಗಿ ಹಣ ಬೇಕು ಎಂದು ಆರೋಪಿಯು ಬುಧವಾರ ವೈಶಾಲಿ ಮನೆಗೆ ಬಂದಿದ್ದಾನೆ. ಆದರೆ ಈ ವೇಳೆ ವೈಶಾಲಿ ಮದ್ಯಕ್ಕಾಗಿ ಹಣ ನೀಡುವುದಿಲ್ಲ ಎಂದು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆತ ತನ್ನ ಬಳಿ ಇದ್ದ ಚಾಕುವಿನಿಂದ ವೈಶಾಲಿಗೆ ಹಲವು ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಜಿಂದಾಬಾದ್ ಗಿರಾಕಿಗಳಿಗೆ ಕಡಿವಾಣ ಹಾಕುವಂತೆ ಹೈಕಮಾಂಡ್ ಸೂಚನೆ
Advertisement
Advertisement
ಘಟನೆಗೆ ಸಂಬಂಧಿಸಿ ಮಾನ್ಪಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೇರಳ ಕುಟ್ಟಿ ಫೋಟೋಗೆ ಮನಸೋತ ಶಿಕ್ಷಕ – ಮ್ಯಾಟ್ರಿಮೊನಿ ಹೆಸರಲ್ಲಿ ಲಕ್ಷ ಲಕ್ಷ ಪೀಕಿದ ಯುವತಿ