ಬೆಂಗಳೂರು: ಮಾಜಿ ಸಚಿವ ಹೆಚ್‌ಡಿ ರೇವಣ್ಣ (HD Revanna) ಜೈಲುಪಾಲಾಗಿದ್ದಾರೆ.
ಕೆಆರ್ ನಗರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರನ್ನು 7 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಪ್ರಕಟಿಸಿದೆ.
Advertisement
ರೇವಣ್ಣ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ಇಂದು 17ನೇ ಎಸಿಎಂಎಂ ಕೋರ್ಟ್‌ನಲ್ಲಿ ನಡೆಯಿತು. ಎಸ್‌ಐಟಿ ಪರ ವಾದ ಜಗದೀಶ್ ವಾದ ಮಂಡಿಸಿ, ಎಸ್‌ಐಟಿ ಕಸ್ಟಡಿಯ ವೇಳೆ ರೇವಣ್ಣ ಉತ್ತರ ನೀಡಿಲ್ಲ. ತನಿಖೆಗೆ ಸಹಕಾರವನ್ನು ನೀಡಿಲ್ಲ. ಪ್ರಕರಣದ ತನಿಖೆ ಇನ್ನೂ ಮುಂದುವರೆದಿದೆ. ಪ್ರಕರಣದ ಪ್ರಮುಖ ಆರೋಪಿ ನಮಗೆ ಇನ್ನೂ ಸಿಕ್ಕಿಲ್ಲ. ತನಿಖಾಧಿಕಾರಿ ಕೇಳಿದ ಪ್ರಶ್ನೆಗಳಿಗೆ ರೇವಣ್ಣ ಸರಿಯಾದ ಉತ್ತರ ನೀಡಿಲ್ಲ. ಬರೀ ನಕಾರಾತ್ಮಕ ಉತ್ತರ ನೀಡಿದ್ದಾರೆ . ದೂರುದಾರರ ದೂರಿನಲ್ಲಿ ಪ್ರಾಣ ಬೆದರಿಕೆ ಆರೋಪವಿದೆ. ಕೋರ್ಟ್‌ನಲ್ಲಿ ಸಾಕ್ಷಿ ಇಲ್ಲ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಹೀಗಾಗಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.
Advertisement
ಈ ವೇಳೆ ಕೋರ್ಟ್‌ಗೆ ಹಾಜರಾಗಿದ್ದ ರೇವಣ್ಣ, ಮೂರು ದಿನದಿಂದ ವಿಚಾರಣೆ ನಡೆಸುತ್ತಿದ್ದಾರೆ. ಅನಾರೋಗ್ಯ ಇದ್ದರೂ ವಿಚಾರಣೆಗೆ ಸಹಕರಿಸಿದ್ದೇನೆ. ನನಗೆ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನೀಡಿದ್ದೇನೆ. ಮೂರು ರಾತ್ರಿ ನಿದ್ರೆ ಮಾಡಲು ಬಿಟ್ಟಿಲ್ಲ. ನನ್ನ ತಂದೆಯ ಮನೆಯಲ್ಲಿ ಇದ್ದೆ. ನನಗೆ ಈ ಕೇಸ್ ಬಗ್ಗೆ ಏನೂ ಗೊತ್ತಿಲ್ಲ. ನನಗೆ ಚಿಕಿತ್ಸೆಯ ಅವಶ್ಯಕತೆಯಿದೆ ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.
Advertisement
ರೇವಣ್ಣ ಮನವಿಗೆ ಸ್ಪಂದಿಸದ ಕೋರ್ಟ್ ಮೇ 14 ರವರೆಗೆ ನ್ಯಾಯಾಂಗ ಬಂಧನ ವಿಧಿಸಿತು. ಈ ಆದೇಶದ ಅನ್ವಯ 7 ದಿನ ರೇವಣ್ಣ ಪರಪ್ಪನ ಅಗ್ರಹಾರದಲ್ಲಿ ಇರಬೇಕಾಗುತ್ತದೆ.