10 ತಿಂಗಳ ಹಸುಳೆಯನ್ನು ಅಪಹರಿಸಿದ ಮಹಿಳೆ – 24 ಗಂಟೆಯಲ್ಲಿ ಪೊಲೀಸರ ಅತಿಥಿ

Public TV
1 Min Read
baby 2 1

ನವದೆಹಲಿ: 10 ತಿಂಗಳ ಹಸುಳೆಯನ್ನು ಅಪಹರಿಸಿದ ಆರೋಪದ ಮೇಲೆ ಬಿಹಾರ ಮೂಲದ ಮಹಿಳೆಯೊಬ್ಬಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ವರದಿಯಾಗಿದೆ. ಪ್ರಕರಣ ಕುರಿತು ಮೊಹಮ್ಮದ್ ಸಿದ್ದಿಕ್ ದೂರನ್ನು ನೀಡಿದ್ದಾರೆ. ಈ ದೂರಿನಲ್ಲಿ, ಫಾತಿಮಾ(22) ಬಾಡಿಗೆ ಮನೆಯೊಂದರಲ್ಲಿ ತನ್ನ 10 ತಿಂಗಳ ಮಗನೊಂದಿಗೆ ವಾಸ ಮಾಡುತ್ತಿದ್ದಳು. ಆದರೆ ಜೂನ್ 6 ರಂದು ಸಂಜೆ ಮಗನನ್ನು ಮನೆಯಿಂದಲೇ ಮಹಿಳೆಯೊಬ್ಬಳು ಅಪಹರಿಸಿದ್ದಾಳೆ ಎಂದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ವ್ಯಕ್ತಿ ಕಾಲಿಡಿದು ಒಳಗೆ ಎಳೆದುಕೊಳ್ಳಲು ಯತ್ನಿಸಿದ ಗೊರಿಲ್ಲಾ – ಬೋನ್‌ದಲ್ಲಿದ್ರೂ ಫುಲ್ ಸ್ಟ್ರಾಂಗ್

police

ಕೂಡಲೇ ಪೊಲೀಸರು ಐಪಿಸಿ 363/370 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ ಮಹಿಳೆ ತನ್ನ ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಳು. ಈ ಹಿನ್ನೆಲೆ ತಾಂತ್ರಿಕ ಸಹಾಯದಿಂದ ಪೊಲೀಸರು ಆರೋಪಿಯ ಗುರುತನ್ನು ಪತ್ತೆ ಮಾಡಿದ್ದು, ಆಕೆ ಬಿಹಾರದ ಸಿಸ್ವಾ ಸಿತಾಮರ್ಹಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ನಂತರ ಪೊಲೀಸರು ಇಡೀ ಗ್ರಾಮವನ್ನು ಶೋಧ ಮಾಡಿ ಮಹಿಳೆಯನ್ನು ಬಂಧಿಸಿದ್ದಾರೆ.

Police Jeep

ಉತ್ತರ ಜಿಲ್ಲೆಯ ಪೊಲೀಸ್ ಠಾಣೆಯ ಸದರ್ ಬಜಾರ್‌ನ ಸಿಬ್ಬಂದಿ ಮಹಿಳೆ ಮತ್ತು ಅಪಹರಣಕಾರರನ್ನು ಬಂಧಿಸಿದ್ದು, 24 ಗಂಟೆಗಳಲ್ಲಿ ಶಿಶುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಪ್ರಸ್ತುತ ಮಗುವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು. ಇದನ್ನೂ ಓದಿ: ಬೀದಿ ನಾಯಿಯನ್ನ ದೊಣ್ಣೆಯಿಂದ ಹೊಡೆದು ಎರಡನೇ ಪ್ಲೋರ್‌ನಿಂದ ಬಿಸಾಕಿದ ಪಾಪಿ – ಪ್ರಕರಣ ದಾಖಲು

ಆರೋಪಿ ಮಹಿಳೆಯನ್ನು ವಿಚಾರಣೆ ಮಾಡಿದ್ದು, ನಾನು ಮದುವೆಯಾಗಿದ್ದೇನೆ. ಆದರೆ ನನ್ನ ಪತಿ ಮುಂಬೈನಲ್ಲಿ ಇದ್ದಾರೆ. ಆದ್ದರಿಂದ ದುಡ್ಡಿದ ಆಸೆಗೆ ಮಗುವನ್ನು ಅಪಹರಿಸಿದ್ದೆ ಎಂದು ಬಹಿರಂಗಪಡಿಸಿದಳು. ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *