4 ಮಕ್ಕಳೊಂದಿಗೆ ಬಾವಿಗೆ ಹಾರಿದ ಮಹಿಳೆ – ಸಾವಿಗೆ ಹೆದರಿ ಹಿರಿಯ ಮಗಳೊಂದಿಗೆ ಮೇಲೆ ಬಂದ್ಲು

Public TV
1 Min Read
WELL
ಸಾಂದರ್ಭಿಕ ಚಿತ್ರ

– ಅಮ್ಮನ ದುಡುಕು ನಿರ್ಧಾರಕ್ಕೆ 3 ಮಕ್ಕಳು ಬಲಿ

ಭೋಪಾಲ್: ಮಹಿಳೆಯೊಬ್ಬಳು (Woman) ಆತ್ಮಹತ್ಯೆಯ (Suicide) ನಿರ್ಧಾರ ಮಾಡಿ ತನ್ನ 4 ಮಕ್ಕಳೊಂದಿಗೆ (Children) ಬಾವಿಗೆ (Well) ಹಾರಿ, ಬಳಿಕ ಸಾವಿಗೆ ಹೆದರಿ ಒಬ್ಬ ಮಗಳೊಂದಿಗೆ ಮೇಲೆ ಬಂದಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ. ತಾಯಿಯ ದುಡುಕು ನಿರ್ಧಾರಕ್ಕೆ ಮೂವರು ಮಕ್ಕಳು ಬಲಿಯಾಗಿದ್ದಾರೆ.

ಘಟನೆ ಬುರ್ಹಾನ್‌ಪುರ ಜಿಲ್ಲೆಯ ಬಾಲ್ಡಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ನಿರ್ಧಾರ ಮಾಡಿದ್ದ ಮಹಿಳೆಯನ್ನು ಪ್ರಮೀಳಾ ಭಿಲಾಲ (30) ಎಂದು ಗುರುತಿಸಲಾಗಿದೆ. ಆಕೆ ತನ್ನ ಪತಿ ರಮೇಶ್‌ನೊಂದಿಗೆ ಜಗಳವಾಡಿ, ನೊಂದು ಆತ್ಮಹತ್ಯೆಯ ನಿರ್ಧಾರ ಮಾಡಿದ್ದಳು ಎನ್ನಲಾಗಿದೆ.

police jeep

ಪ್ರಮೀಳಾ ಹಾಗೂ ರಮೇಶ್ ದಂಪತಿಗೆ 4 ಮಕ್ಕಳಿದ್ದರು. ಪ್ರಮೀಳಾ ತನ್ನ ನಾಲ್ಕೂ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಳು. ಅದರಂತೆಯೇ ಆಕೆ ತನ್ನ 4 ಮಕ್ಕಳನ್ನು ಮೊದಲು ಬಾವಿಗೆ ದೂಡಿ, ಬಳಿಕ ತಾನೂ ಬಾವಿಗೆ ಹಾರಿದ್ದಾಳೆ. ಇದನ್ನೂ ಓದಿ: ಮಾಂಸ ತರದ್ದಕ್ಕೆ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ

ಆದರೆ ಕೊನೆ ಕ್ಷಣದಲ್ಲಿ ಮಹಿಳೆ ಸಾವಿಗೆ ಹೆದರಿದ್ದಾಳೆ. ಆಗ ಬಾವಿಯಲ್ಲಿ ನೇತಾಡುತ್ತಿದ್ದ ಹಗ್ಗ ಹಿಡಿದು ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾಳೆ. ಬಳಿಕ ತನ್ನ 7 ವರ್ಷದ ಹಿರಿಯ ಮಗಳನ್ನು ರಕ್ಷಿಸುವಲ್ಲಿ ಸಫಲಳಾಗಿದ್ದಾಳೆ. ಆದರೆ ತನ್ನ ಒಂದೂವರೆ ವರ್ಷದ ಮಗು ಸೇರಿದಂತೆ ಮೂವರು ಪುಟ್ಟ ಮಕ್ಕಳನ್ನು ಆಕೆಯಿಂದ ರಕ್ಷಿಸಲು ಸಾಧ್ಯವಾಗಿಲ್ಲ.

POLICE 3

 

ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತದೇಹಗಳನ್ನು ಬಾವಿಯಿಂದ ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಪ್ರಮೀಳಾ ಹಾಗೂ ಆಕೆಯ ಮಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಇಬ್ಬರ ಸ್ಥಿತಿಯೂ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗಂಡು ಮಗುವಾಗಿಲ್ಲವೆಂದು ಪತ್ನಿ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ

 

Share This Article