ಕಚೇರಿಗೆ ಬಂದು ಗುಂಡು ಹಾರಿಸಿ ಇನ್ಸ್‌ಪೆಕ್ಟರ್‌ ಹತ್ಯೆ

Public TV
2 Min Read
INSPECTOR

ಚಂಡೀಗಢ: ಪಂಜಾಬ್‍ನ ಖರಾರ್ ಪಟ್ಟಣದಲ್ಲಿ ಕಚೇರಿಯ ಒಳಗೆ ಬಂದು ಮಹಿಳಾ ಡ್ರಗ್(ಜೌಷಧ) ಇನ್ಸ್ ಪೆಕ್ಟರ್ ನನ್ನು ಗುಂಡು ಹಾರಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಪಂಚ್ಕಲಾ ನಿವಾಸಿ ನೇಹಾ ಶೊರಿ(36) ಮೃತ ಇನ್ಸ್ ಪೆಕ್ಟರ್. ಇವರು 2016 ರಿಂದ ಖಾರರ್ ಕಚೇರಿಯಲ್ಲಿ ಆಹಾರ ಮತ್ತು ಜೌಷಧ ಕೆಮಿಕಲ್ ಲ್ಯಾಬೊರೇಟರಿಯಾಗಿ ಕೆಲಸ ಮಾಡುತ್ತಿದ್ದರು. ಆರೋಪಿಯನ್ನು 50 ವರ್ಷದ ಬಲ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಲೈಸೆನ್ಸ್ ಹೊಂದಿರುವ ರಿವಾಲ್ವರ್ ನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಬಳಿಕ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Capture 15

ನಡೆದಿದ್ದೇನು?
ಶುಕ್ರವಾರ ಬಲ್ವಿಂದರ್ ಸಿಂಗ್ ಎಫ್‍ಡಿಎ ಕಚೇರಿಗೆ ಮೋಟಾರ್ ಬೈಕಿನಲ್ಲಿ ಬಂದಿದ್ದಾನೆ. ನಂತರ ಅವನು ನೇರವಾಗಿ ನೇಹಾ ಶೊರಿ ಕಚೇರಿಗೆ ಹೋಗಿ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಅದರಲ್ಲಿ ಒಂದು ಗುಂಡು ನೇಹಾ ಶೊರಿ ಎದೆಗೆ ಬಿದ್ದಿದೆ. ತಕ್ಷಣ ಬಲ್ವಿಂದರ್ ಸಿಂಗ್ ಓಡಿಹೋಗಲು ಪ್ರಯತ್ನಿಸಿದ್ದಾನೆ. ಆದರೆ ಜನರು ಗೇಟಿನ ಬಳಿ ಅವನನ್ನು ಹಿಡಿದಿದ್ದಾರೆ. ಆಗ ತನ್ನ ರಿವಾಲ್ವರ್ ನಿಂದ ಹೆದರಿಸಲು ಪ್ರಯತ್ನಿಸಿದ್ದಾನೆ. ಕೊನೆಗೆ ತನ್ನ ಎದೆ ಮತ್ತು ತಲೆಗೆ ಸ್ವತಃ ಗುಂಡು ಹೊಡೆದುಕೊಂಡಿದ್ದಾನೆ ಎಂದು ಎಸ್‍ಎಸ್‍ಪಿ ಹರ್ಚರಣ್ ಸಿಂಗ್ ಭುಲ್ಲರ್ ತಿಳಿಸಿದ್ದಾರೆ.

ಶೊರಿ ಮತ್ತು ಬಲ್ವಿಂದರ್ ಇಬ್ಬರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನೇಹಾ ಶೊರಿ ಮೃತಪಟ್ಟಿದ್ದಾರೆ. ನೇಹಾ ಶೊರಿ ಅವರು 2006 ಸೆಪ್ಟೆಂಬರ್ ನಲ್ಲಿ ರೋಹಾರ್ ಜಿಲ್ಲೆಯ ನೇಹಾ ಅವರು ಡ್ರಗ್ ಇನ್ಸ ಪೆಕ್ಟರ್ ಆಗಿ ಪೋಸ್ಟ್ ಆಗಿದ್ದರು. ಆರೋಪಿ ಬಲ್ವಿಂದರ್ ಮೂಲತಃ ಮೊರಿಂಡಾದವನಾಗಿದ್ದು, ಔಷಧಿ ಅಂಗಡಿ ಇಟ್ಟುಕೊಂಡಿದ್ದನು.

2009ರಲ್ಲಿ ನೇಹಾ ಅವರು ಆತನ ಅಂಗಡಿಯ ಮೇಲೆ ದಾಳಿ ನಡೆಸಿದ್ದರು. ದಾಳಿಯ ಸಮಯದಲ್ಲಿ ಡ್ರಗ್ ವ್ಯಸನಿಗಳಿಗಳ 35 ವಿಧದ ಮಾತ್ರೆಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಬಾಲ್ವಿಂದರ್ ಅವುಗಳಿಗೆ ಸಂಬಂಧಿಸಿದಂತೆ ಯಾವುದೇ ಸರಿಯಾದ ದಾಖಲೆಯನ್ನು ತೋರಿಸಿಲಲ್ಲ. ಈ ಹಿನ್ನೆಲೆಯಲ್ಲಿ ಆತನ ಅಂಗಡಿ ಲೈಸೆನ್ಸ್ ನನ್ನು ನೇಹಾ ಶೊರಿ ರದ್ದುಗೊಳಿಸಿ ಆದೇಶ ಹೊರಡಿಸಿದ್ದರು.

ಮಹಿಳಾ ಅಧಿಕಾರಿ ಹತ್ಯೆ ಕುರಿತು ಶೀಘ್ರವೇ ತನಿಖೆ ನಡೆಸಬೇಕು. ಜೊತೆಗೆ ಆರೋಪಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *