ಕೋಲ್ಕತ್ತಾ: ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಮಹಿಳೆಯೊಬ್ಬರು ಚಪ್ಪಲಿ ಎಸೆದಿರುವ ಘಟನೆ ಇಎಸ್‍ಐ ಆಸ್ಪತ್ರೆಯ ಹೊರಗೆ ನಡೆದಿದೆ.
ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಪಾರ್ಥ ಮತ್ತು ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಜೋಕಾದಲ್ಲಿರುವ ಆಸ್ಪತ್ರೆಗೆ ಕರೆದೊಯ್ದ ವೇಳೆ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಅಭಿಮಾನಿಯಿಂದ ಒಂದೂವರೆ ಕೆ.ಜಿ ತೂಕದ ಬೆಳ್ಳಿ ಮೂರ್ತಿ ಗಿಫ್ಟ್!
Advertisement
Advertisement
ಚಪ್ಪಲಿ ಎಸೆದ ನಂತರ ಇಂತಹ ನಾಯಕರು ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ನಾನು ಶೂ ಎಸೆದಿದ್ದೇನೆ. ಔಷಧಿ ಖರೀದಿಸಕಲು ನಾನು ಇಲ್ಲಿಗೆ ಬಂದಿದ್ದೇನೆ. ಆದರೆ ಇವರು ಫ್ಲಾಟ್‍ಗಳು ಮತ್ತು ಎಸಿ ಕಾರುಗಳನ್ನು ಖರೀಸಲು ಬಡವರ ಹಣ ಲೂಟಿ ಮಾಡುತ್ತಿದ್ದಾರೆ. ಅವನನ್ನು ಕಟ್ಟಿ ಹಾಕಿ ಬೀದಿಗೆ ಎಳೆಯಬೇಕು. ಈಗ ನಾನು ನನ್ನ ಬೂಟುಗಳಿಲ್ಲದೇ ಮನೆಗೆ ಹೋಗುತ್ತೇನೆ ಎಂದಿದ್ದಾರೆ.
Advertisement
Advertisement
ಸೋಮವಾರ ತಮ್ಮ ಫ್ಲಾಟ್‍ನಲ್ಲಿ ದೊರೆತ ಹಣದ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅರ್ಪಿತಾ ಮುಖರ್ಜಿ ಅವರು, ಹಣ ನನ್ನದಲ್ಲ. ಆದರೆ ನನ್ನ ಅನುಪಸ್ಥಿತಿಯಲ್ಲಿ ಹಣವನ್ನು ಅಲ್ಲಿ ಇರಿಸಲಾಗಿತ್ತು ಎಂದು ತಿಳಿಸಿದ್ದರು. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥನ ಹತ್ಯೆ – ಅಮೆರಿಕದ ಡ್ರೋನ್ ದಾಳಿ ಖಂಡಿಸಿದ ತಾಲಿಬಾನ್
ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಫ್ಲ್ಯಾಟ್‍ಗಳಲ್ಲಿ 50 ಕೋಟಿಯಷ್ಟು ನಗದು ಪತ್ತೆಯಾಗಿದ್ದು ಇಬ್ಬರನ್ನೂ ಬಂಧಿಸಲಾಗಿದೆ. ಆದರೆ ಪಾರ್ಥ ಅವರು ಹಣ ತಮ್ಮದಲ್ಲ ಎಂದು ಪಟ್ಟು ಹಿಡಿದು ನಿಂತಿದ್ದಾರೆ. ಬಂಗಾಳದ ವಜಾಗೊಂಡ ಸಚಿವ ಪಾರ್ಥ ಚಟರ್ಜಿ ಭಾನುವಾರ ತಮ್ಮ ಆಪ್ತೆ ಅರ್ಪಿತಾ ಮುಖರ್ಜಿಯ ಎರಡು ಅಪಾರ್ಟ್‍ಮೆಂಟ್‍ಗಳಿಂದ ವಶಪಡಿಸಿಕೊಂಡ ಸುಮಾರು 50 ಕೋಟಿ ರೂಪಾಯಿ ಹಣವನ್ನು ನಾಟಕೀಯವಾಗಿ ಅಮರ್ ನೋಯ್, ಅಮರ್ ನಾಯ್, ಅಮರ್ ನೋಯ್ (ನನ್ನದಲ್ಲ, ನನ್ನದಲ್ಲ, ನನ್ನದಲ್ಲ, ನನ್ನದಲ್ಲ) ಎಂದು ನಿರಾಕರಿಸಿದ್ದಾರೆ.
ಇದೀಗ ಕೋಲ್ಕತ್ತಾದಲ್ಲಿರುವ ಅರ್ಪಿತಾ ಮನೆಯಿಂದ ಜಾರಿ ನಿರ್ದೇಶನಾಲಯ (ಇಡಿ) 50ಕ್ಕೂ ಹೆಚ್ಚು ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದು, ಪಶ್ಚಿಮ ಬಂಗಾಳದ ಎಸ್‍ಎಸ್‍ಸಿ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಥ ಮತ್ತು ಅರ್ಪಿತಾ ಇಬ್ಬರನ್ನೂ ಆಗಸ್ಟ್ 3 ರವರೆಗೆ ಇಡಿ ಕಸ್ಟಡಿಗೆ ಕಳುಹಿಸಲಾಗಿದೆ.