– ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ
ಹೈದರಾಬಾದ್: ಚಾರ್‌ಮಿನಾರ್(Charminar) ಬಳಿಯಿರುವ ಗುಲ್ಜಾರ್ ಹೌಸ್‌ನಲ್ಲಿ(Gulzar House) ಬೆಂಕಿ ಅವಘಡ ಸಂಭವಿಸಿ, 17 ಮಂದಿ ಸಜೀವ ದಹನವಾಗಿರುವ ಘಟನೆ ಹೈದರಾಬಾದ್‌ನಲ್ಲಿ(Hyderabad) ನಡೆದಿದೆ. ಈ ದುರ್ಘಟನೆ ವೇಳೆ ಒರ್ವ ಮಹಿಳೆ ತನ್ನ ಮಕ್ಕಳನ್ನ ಬೆಂಕಿಯಿಂದ ರಕ್ಷಿಸುವ ಕೊನೆಯ ಪ್ರಯತ್ನದಲ್ಲಿ ಅಪ್ಪಿಕೊಂಡಿದ್ದಳು. ಆದ್ರೆ ಆ ಕೊನೆಯ ಅಪ್ಪುಗೆಯಲ್ಲೇ ತಾಯಿ ಮಕ್ಕಳು ಸಜೀವ ದಹನವಾದ ಹೃದಯ ವಿದ್ರಾವಕ ಪ್ರಸಂಗವನ್ನ ಪ್ರತ್ಯಕ್ಷದರ್ಶಿಯೊಬ್ಬರು ಬಿಚ್ಚಿಟ್ಟರು.
ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡ ಸ್ವಲ್ಪ ಸಮಯದಲ್ಲೇ ತಾಯಿಯೊಬ್ಬಳು ತನ್ನ ಮಕ್ಕಳ ರಕ್ಷಣೆಗಾಗಿ ಓಡಿದ್ದಾಳೆ.. ಮಕ್ಕಳನ್ನ ಅಪ್ಪಿಕೊಂಡಿದ್ದಾಳೆ.. ಆದ್ರೆ ಅಪ್ಪಿಕೊಂಡೇ ಸುಟ್ಟು ಕರಕಲಾಗಿದ್ದಾಳೆ ಎಂದು ಪ್ರತ್ಯಕ್ಷದರ್ಶಿ ಜಹೀರ್ ಕಹಿ ಘಟನೆಯನ್ನ ವಿವರಿಸಿದ್ರು. ಇದನ್ನೂ ಓದಿ: Hyderabad | ಚಾರ್‌ಮಿನಾರ್ ಬಳಿಯ ಗುಲ್ಜಾರ್ ಹೌಸ್‌ನಲ್ಲಿ ಬೆಂಕಿ ಅವಘಡ – 17 ಮಂದಿ ಸಜೀವ ದಹನ
ಬೆಂಕಿಯ ಜ್ವಾಲೆಗೆ ಒಳಗೆ ಹೋಗುವುದು ತುಂಬಾ ಕಷ್ಟಕರವಾಗಿತ್ತು. ಹೊಗೆಯಿಂದಾಗಿ ನಮಗೆ ಏನೂ ಕಾಣಿಸುತ್ತಿರಲಿಲ್ಲ. ಗೋಡೆಗಳನ್ನು ಒಡೆದು ಒಳಗೆ ಹೋಗಲು ಹೋದೆವು. ಅಷ್ಟರಲ್ಲಾಗಲೇ ಕಟ್ಟಡದ ಒಳಗಿದ್ದವರು ಸುಟ್ಟುಹೋಗಿದ್ದರು ಎಂದು ಘಟನೆಯನ್ನು ವಿವರಿಸಿದರು. ಇದನ್ನೂ ಓದಿ: ಪಾಕಿಸ್ತಾನದ ಮುಂಡೆವನ್ನ ನಿಂಬೆಹಣ್ಣು ಹಿಂಡಿದ ಹಾಗೆ ಹಿಂಡಬಹುದು: ಸಿಎಂ ಇಬ್ರಾಹಿಂ
ಈ ಅಗ್ನಿ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು(Narendra Modi) ಎಕ್ಸ್ ಮೂಲಕ ಸಂತಾಪ ಸೂಚಿಸಿದ್ದಾರೆ. ತೆಲಂಗಾಣದ ಹೈದರಾಬಾದ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಜೀವಹಾನಿಯಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಮೃತರ ಕುಟುಂಕ್ಕೆ ಪಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ. ಇದನ್ನೂ ಓದಿ: ಮೇ 21 ರಂದು ವಿಧಾನಸೌಧದ ಮುಂದೆ ಆಂಧ್ರಕ್ಕೆ ಆನೆಗಳ ಹಸ್ತಾಂತರ
ಗುಲ್ಜಾರ್ ಹೌಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಘಟನೆಯ ಸಂಪೂರ್ಣ ವಿವರಗಳು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಕೇಂದ್ರ ಸಚಿವ ಕಿಷನ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.