ಹುಬ್ಬಳ್ಳಿ: ಪತಿಯನ್ನು ಕಳೆದುಕೊಂಡು ಮಾದಕ ವಸ್ತುಗಳನ್ನು ಸೇವಿಸಿ ಮಹಿಳೆಯರೊಂದಿಗೆ ಸಂಪರ್ಕ ಬೆಳೆಸುತ್ತಿದ್ದ ಮಹಿಳೆಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವಾಣಿಜ್ಯ ನಗರಿಯಲ್ಲಿ ನಡೆದಿದೆ.
ಲೀನಾ ಫರ್ನಾಂಡೀಸ್ ವಿರುದ್ಧ ಸಲಿಂಗಕಾಮದ ಆರೋಪ ಕೇಳಿಬಂದಿದ್ದು, ನಗರದ ಮಂಟೂರ ರಸ್ತೆಯ ಅಂಬೇಡ್ಕರ್ ಕಾಲೋನಿಯಲ್ಲಿ ಜನ ಹೊಡೆದಿದ್ದಾರೆ. ಪತಿ ಕಳೆದುಕೊಂಡಿದ್ದ ಬಳಿಕ ಈಕೆ ಹೆಚ್ಚು ಮಹಿಳೆಯರಿಗೆ ಬಲೆ ಬೀಸುತ್ತಿದ್ದಳು. ಮಾದಕ ವಸ್ತು ಸೇವನೆ ಮಾಡಿ ಅನೇಕ ಮಹಿಳೆಯರಿಗೂ ಈ ವಸ್ತುಗಳನ್ನು ಸೇವಿಸುವಂತೆ ಪ್ರಚೋದನೆ ನೀಡುತ್ತಿದ್ದಳು.
ನಗರದ ಮಹಿಳೆಯನ್ನು ಬಲೆಗೆ ಹಾಕಿಕೊಂಡಿದ್ದ ಲೀನಾ ಕಳೆದ ಒಂದು ವಾರದಿಂದ ಆಕೆಯನ್ನು ತನ್ನ ವಶದಲ್ಲಿಟ್ಟುಕೊಂಡಿದ್ದಳು. ಇದರಿಂದ ಬೇಸತ್ತು ಸಾರ್ವಜನಿಕರು ಲೀನಾಳನ್ನು ಮನೆಯಲ್ಲಿ ಕೂಡಿ ಹಾಕಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈಗ ಜನ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv