ಚಿಕ್ಕಬಳ್ಳಾಪುರ: ಮಹಿಳೆಯೊಬ್ಬರು ಆಂಬುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ನಡೆದಿದೆ.
ಸಿದ್ದೇಪಲ್ಲಿ ಗ್ರಾಮದ ವೆಂಕಟರತ್ನಮ್ಮ ಎಂಬವರನ್ನು ಚಿಂತಾಮಣಿಯಿಂದ ಕೋಲಾರ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆಯೇ ಹೆರಿಗೆಯಾಗಿದೆ. ಮೊದಲು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದ ವೆಂಕಟರತ್ನಮ್ಮರಿಗೆ ಇಲ್ಲಿ ಸಹಜ ಹೆರಿಗೆಯಾಗೋದು ಕಷ್ಟ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚನೆ ನೀಡಿದ್ದರು. ಹೀಗಾಗಿ ಆಂಬುಲೆನ್ಸ್ ಮೂಲಕ ಕೋಲಾರ ಜಿಲ್ಲಾ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಹೆರಿಗೆ ನೋವು ಜಾಸ್ತಿಯಾಗಿ ವೆಂಕಟರತ್ನಮ್ಮರಿಗೆ ಸಹಜವಾಗಿಯೇ ಹೆರಿಗೆಯಾಗಿದ್ದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
Advertisement
Advertisement
ಸದ್ಯ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದು ಮತ್ತೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ರೆ ಸಹಜ ಹೆರಿಗೆ ಕಷ್ಟ ಅಂತ ನೆಪ ಹೇಳಿ ಕೋಲಾರ ಆಸ್ಪತ್ರೆಗೆ ಸಾಗಹಾಕಿದ್ದ ವೈದ್ಯರು ಹಾಗೂ ಶುಶ್ರೂಕಿಯರನ್ನ ವೆಂಕಟರತ್ನಮ್ಮ ಸಂಬಂಧಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ಮತ್ತೊಂದೆಡೆ ವೈದ್ಯರು ಕೈ ಕೊಟ್ರೂ ಹೆರಿಗೆಗೆ ಸಹಕರಿಸಿ ಸಹಜ ಹೆರಿಗೆ ಮಾಡಿಸಿದ ಆಂಬ್ಯುಲೆನ್ಸ್ ಸಿಬ್ಬಂದಿಗೆ ವೆಂಕಟರತ್ನಮ್ಮ ಸಂಬಂಧಿಕರು ಧನ್ಯವಾದಗಳನ್ನ ಅರ್ಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.