ಮನುಷ್ಯ ಎಂದರೆ ಹುಟ್ಟು, ಸಾವು ಸಹಜ. ಹುಟ್ಟು ಸಾವು ಎರಡೂ ಯಾವ ಕ್ಷಣದಲ್ಲಿ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಒಂದು ಘಟನೆ ನಡೆದಿದೆ. ಬಸ್ನಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಬ್ರೆಜಿಲ್ನ ರಿಯೋ ಡಿ ಜನೈರೋದಲ್ಲಿ ಸುದ್ದಿಯಾಗಿದೆ.
ಮಹಿಳೆಯೊಬ್ಬರು ಬಸ್ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳೆಗೆ ಹೆರಿಗೆ ನೋವು ಆರಂಭವಾಗುತ್ತಲೇ ಡ್ರೈವರ್ ಬಸ್ ಅನ್ನು ಆಸ್ಪತ್ರೆಯ ಕಡೆಗೆ ತೆಗೆದುಕೊಂಡು ಹೋಗಿದ್ದಾನೆ. ಸಿಬ್ಬಂದಿಯ ಸಹಾಯ ಪಡೆದು ಸುಸೂತ್ರವಾಗಿ ಹೆರಿಗೆ ಮಾಡಿಸಲಾಗಿದೆ. ಬಸ್ನಲ್ಲಿದ್ದ ಸಹ ಪ್ರಯಾಣಿಕರು ಕೂಡ ಮಹಿಳೆಗೆ ಸಹಾಯಮಾಡಿದ್ದಾರೆ. ಇದನ್ನೂ ಓದಿ: ಪಿಜ್ಜಾ ಆರ್ಡರ್ ಮಾಡುವಾಗ 9,000 ಹೋಯ್ತು – ವಾಪಸ್ ಪಡೆಯಲು ಹೋಗಿ 11 ಲಕ್ಷ ಕಳ್ಕೊಂಡ ವೃದ್ಧೆ
View this post on Instagram
ಇನ್ಸ್ಟಾಗ್ರಾಮ್ನ ಗುಡ್ನ್ಯೂಸ್ ಮೂಮೆಂಟ್ ಎನ್ನುವ ಪೇಜ್ ಈ ವೀಡಿಯೋವನ್ನು ಹಂಚಿಕೊಂಡಿದೆ. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆರೋಗ್ಯ ಇಲಾಖೆಯ ಹೇಳಿಕೆ ಉಲ್ಲೇಖಿಸಿ ತಾಯಿ ಮತ್ತು ಶಿಶು ಸುರಕ್ಷಿತವಾಗಿದ್ದಾರೆ ಎಂಬುದಾಗಿಯೂ ಗುಡ್ನ್ಯೂಸ್ ಮೂಮೆಂಟ್ ಮಾಹಿತಿ ಹಂಚಿಕೊಂಡಿದೆ.