ಚಂಡೀಗಢ: ಹರಿಯಾಣ (Haryana) ರೈಲಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯನ್ನು ರೈಲ್ವೆ ಹಳಿಗಳ ಮೇಲೆ ಎಸೆದ ಘಟನೆ ನಡೆದಿದೆ. ರೈಲು ಹರಿದು ಮಹಿಳೆ ಕಾಲು ಕಟ್ ಆಗಿದೆ.
ಪತಿಯೊಂದಿಗೆ ಜಗಳವಾಡಿ ಜೂ.24 ರಂದು ಮಹಿಳೆ ನಾಪತ್ತೆಯಾಗಿದ್ದರು. ಹರಿಯಾಣದ ಪಾಣಿಪತ್ ರೈಲ್ವೆ ನಿಲ್ದಾಣದಲ್ಲಿ ಖಾಲಿ ಬೋಗಿಗೆ ಕರೆದೊಯ್ದು ಆಕೆಯ ಮೇಲೆ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇದನ್ನೂ ಓದಿ: ಹಿಮಾಚಲದಲ್ಲಿ ಮೇಘಸ್ಫೋಟ| ಮಧ್ಯರಾತ್ರಿ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ
ಅತ್ಯಾಚಾರ ಬಳಿಕ ಸೋನಿಪತ್‌ನಲ್ಲಿ ಹಳಿಗಳ ಮೇಲೆ ಎಸೆದಿದ್ದು, ಮಹಿಳೆ ಕಾಲು ಕಳೆದುಕೊಂಡಿದ್ದಾಳೆ. ರೈಲ್ವೆ ಹಳಿಗಳ ಮೇಲೆ ಮಹಿಳೆ ಅಳುವುದನ್ನ ನೋಡಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಸಿಸಿಟಿವಿಗಳ ಪರಿಶೀಲನೆ ನಡೆಸಲಾಗಿದೆ. ಆರೋಪಿಗಳಿಗಾಗಿ ರೈಲ್ವೆ ಪೊಲೀಸರ ಶೋಧಕಾರ್ಯ ಕೈಗೊಂಡಿದ್ದಾರೆ. ಅತ್ಯಾಚಾರ ಬಗ್ಗೆ ಪೊಲೀಸರ ಬಳಿ ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ. ಈ ಹಿಂದೆಯೂ ಮನೆಯಿಂದ ನಾಪತ್ತೆಯಾಗಿ ಮಹಿಳೆ ಬಳಿಕ ಮನೆಗೆ ವಾಪಸ್ ಬಂದಿದ್ದರು. ಇದನ್ನೂ ಓದಿ: ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಹತ್ಯೆ – ಪ್ರಮುಖ ಆರೋಪಿ ಎನ್‌ಕೌಂಟರ್‌ಗೆ ಬಲಿ