ಲಕ್ನೋ: ಮಹಿಳೆಯ ಮೇಲೆ ನಾಲ್ವರು ಅತ್ಯಾಚಾರ ಮಾಡಿ, ಅದನ್ನು ವೀಡಿಯೋ ಮಾಡಿರುವ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ.
ಮಹಿಳೆಯೊಬ್ಬಳು ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಅರ್ಜಿ ತುಂಬಲು ಸಾರ್ವಜನಿಕ ಸೇವಾ ಕೇಂದ್ರಕ್ಕೆ ಹೋಗುತ್ತಿದ್ದಾಗ ಕೇಂದ್ರದ ನಿರ್ವಾಹಕರು, ಕಂಪ್ಯೂಟರ್ ಆಪರೇಟರ್, ಅಂಗಡಿ ಮಾಲೀಕರು ಹಾಗೂ ಮತ್ತೊಬ್ಬರು ಸೇರಿ ಆಕೆಯ ಮೇಲೆ ಅತ್ಯಾಚಾರ ಮಾಡಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವೀಡಿಯೋವನ್ನು ಮಾಡಿಕೊಂಡಿದ್ದು, ಆರೋಪಿಗಳಲ್ಲಿ ಒಬ್ಬಾತ ಆ ವೀಡಿಯೋವನ್ನು ಆಕೆಯ ಅತ್ತೆಗೆ ಕಳುಹಿಸಿದ್ದಾನೆ. ಆಗ ಈ ವಿಷಯ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಫ್ಲ್ಯಾಶ್‌ಲೈಟ್‌ನಲ್ಲಿ ಇಸಿಜಿ ಟೆಸ್ಟ್ ಮಾಡಿದ ಸರ್ಕಾರಿ ಆಸ್ಪತ್ರೆ ವೈದ್ಯರು
ಘಟನೆ ಸಂಬಂಧಿಸಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ನಾಲ್ವರಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಘಟನೆಯಲ್ಲಿ ಭಾಗಿಯಾಗಿದ್ದ ಆರೋಪಿಗಳೆಲ್ಲರೂ ಮಹಿಳೆಯ ಪೋಷಕರು ವಾಸಿಸುತ್ತಿದ್ದ ಅಲಿಗಢ ಜಿಲ್ಲೆಗೆ ಸೇರಿದ ಹಳ್ಳಿಯವರಾಗಿದ್ದಾರೆ. ಮಹಿಳೆ ಹಾಗೂ ಆರೋಪಿಗಳು ಒಟ್ಟಿಗೆ ಓದಿದ್ದರು ಎಂಬುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಗುಂಡನನ್ನು ಹುಡುಕಿಕೊಟ್ಟವರಿಗೆ 30 ಸಾವಿರ ರೂ. ಬಹುಮಾನ – ಮಗನಂತೆ ಸಾಕಿದ್ದ ಶ್ವಾನಕ್ಕಾಗಿ ಮಹಿಳೆ ಕಣ್ಣೀರು