LatestMain PostNational

ಫ್ಲ್ಯಾಶ್‌ಲೈಟ್‌ನಲ್ಲಿ ಇಸಿಜಿ ಟೆಸ್ಟ್ ಮಾಡಿದ ಸರ್ಕಾರಿ ಆಸ್ಪತ್ರೆ ವೈದ್ಯರು

Advertisements

ರಾಂಚಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಬೇಕಾಗಿರುವ ಸೌಲಭ್ಯಗಳು ಸಿಗುತ್ತಿಲ್ಲ ಎಂಬುದಕ್ಕೆ ಇಂದೊಂದು ದೊಡ್ಡ ಉದಾಹರಣೆಯಾಗಿದೆ. ಜಾರ್ಖಂಡ್‍ನ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ವಿದ್ಯುತ್ ಇಲ್ಲದೇ ಫ್ಲ್ಯಾಶ್‌ಲೈಟ್‌ನಲ್ಲಿ ಯೇ ಇಸಿಜಿ ಟೆಸ್ಟ್ ಮಾಡಿರುವ ಸುದ್ದಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಜಾರ್ಖಂಡ್‍ನ ಶೇಖ್ ಭಿಖಾರಿ ಆಸ್ಪತ್ರೆಯ ವೈದ್ಯರು ಕಟ್ಟಡದಲ್ಲಿನ ವಿದ್ಯುತ್ ಸ್ಥಗಿತಗೊಂಡ ನಂತರ ಮೊಬೈಲ್ ಬ್ಯಾಟರಿ ಬೆಳಕಿನಲ್ಲಿ ಎಲೆಕ್ಟ್ರೋಕಾರ್ಡಿಯೋಗ್ರಾಮ್(ಇಸಿಜಿ) ಪರೀಕ್ಷೆಯನ್ನು ಮಾಡಿದ್ದಾರೆ. ಪರೀಕ್ಷೆ ಮಾಡುತ್ತಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ಫೋಟೋ ನೋಡಿದ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ‘ಚಿಕನ್ ಕಥಿ’ ಆಯ್ತು.. ಇಂದು ‘ಚಿಕನ್ ಕಾಲು ಸೂಪ್’ ಮಾಡಿ ಸವಿಯಿರಿ 

ಮಹುಗಾಂವ್ ಗ್ರಾಮದ ನಿವಾಸಿ ಸಾಗರ್ ಕುಮಾರ್ ಯಾದವ್ ಅವರನ್ನು ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ. ತುರ್ತು ಪರಿಸ್ಥಿತಿಯ ಹಿನ್ನೆಲೆ ಕರೆಟ್ ಇಲ್ಲದ ಕಾರಣ ಬೇರೆ ವಿಧಿಯಿಲ್ಲದೇ ವೈದ್ಯರು ಫ್ಲ್ಯಾಶ್‌ಲೈಟ್‌ ಬೆಳಕಿನಲ್ಲಿ ಪರೀಕ್ಷೆ ನಡೆಸಬೇಕಾಯಿತು.

ಆದರೆ ಮಾಹಿತಿಗಳ ಪ್ರಕಾರ ಈ ಆಸ್ಪತ್ರೆಯು ಬ್ಯಾಕ್‍ಅಪ್‍ಗಾಗಿ ಎರಡು ಜನರೇಟರ್‌ಗಳನ್ನು ಹೊಂದಿರುವುದರಿಂದ ವಿದ್ಯುತ್ ಕೊರತೆಯಿಲ್ಲ. ಜನರೇಟರ್‌ಗಳಿಗಾಗಿ ಪ್ರತಿದಿನ 100 ರಿಂದ 150 ಲೀಟರ್ ಡೀಸೆಲ್ ಬಳಸಲಾಗುತ್ತೆ. ಈ ಹಿಂದೆಯೂ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲಾಗಿತ್ತು. ಆಸ್ಪತ್ರೆಯಲ್ಲಿ ಇನ್ವರ್ಟರ್ ಕೂಡ ಇದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಆರೋಪಿ ಪರಾರಿ 

Live Tv

Leave a Reply

Your email address will not be published.

Back to top button