ಮಹಿಳೆ ಮೇಲೆ ಮೂವರಿಂದ ಗ್ಯಾಂಗ್ ರೇಪ್- ಸಿಗರೇಟ್‍ನಿಂದ ಗುಪ್ತಾಂಗ ಸುಟ್ಟರು

Public TV
1 Min Read
RApe 1

ಮುಂಬೈ: ಮಹಿಳೆಯೊಬ್ಬಳ (Woman) ಮನೆಗೆ ಮೂವರು ವ್ಯಕ್ತಿಗಳು ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಿ, ನಂತರ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.

ಮಹಾರಾಷ್ಟ್ರದ ಮುಂಬೈನ ಕುರ್ಲಾದಲ್ಲಿ ಈ ಘಟನೆ ನಡೆದಿದೆ. 47 ವರ್ಷದ ಮಹಿಳೆಯೊಬ್ಬಳ ಮನೆಗೆ ಏಕಾಏಕಿ ಮೂವರು ಕಾಮುಕರು ನುಗ್ಗಿದ್ದಾರೆ. ಅದಾದ ಬಳಿಕ ಆಕೆಯ ಮೇಲೆ ಮೂವರು ವ್ಯಕ್ತಿಗಳು ಅತ್ಯಾಚಾರ ನಡೆಸಿದ್ದಾರೆ. ಆ ನಂತರ ಆಕೆಯ ಖಾಸಗಿ ಅಂಗವನ್ನು ಸಿಗರೇಟಿನಿಂದ ಸುಟ್ಟಿದ್ದು, ಎದೆ ಹಾಗೂ ಎರಡು ಕೈಗಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ವಿಕೃತಿಯನ್ನು ಮೆರೆದಿದ್ದಾರೆ. ಅದಾದ ಬಳಿಕ ಕಾಮುಕರಲ್ಲಿ ಒಬ್ಬಾತ ಘಟನೆಯನ್ನು ವೀಡಿಯೋ ಮಾಡಿ ಆಕೆಗೆ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಮದುವೆಗೆಂದು ವಿಮಾನವನ್ನೇ ಬುಕ್ ಮಾಡಿದ ಜೋಡಿ

police jeep 1

ಘಟನೆಗೆ ಸಂಬಂಧಿಸಿ ಮಹಿಳೆಯು ನೆರೆಹೊರೆಯವರ ಸಹಾಯದಿಂದ ಎನ್‍ಜಿಓವೊಂದನ್ನು ಸಂಪರ್ಕಿಸಿದ್ದಾರೆ. ಅದಾದ ಬಳಿಕ ಎನ್‍ಜಿಓ ಸಹಾಯದಿಂದ ಸ್ಥಳೀಯ ಪೊಲೀಸರಿಗೆ ದೂರು ದಾಖಲಿಸಿದ್ದಾಳೆ. ಮೂವರು ಆರೋಪಿಗಳು ಅದೇ ಏರಿಯಾದವರೇ ಆಗಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವೃದ್ಧೆಯನ್ನು ಕೊಂದು, ಕಬೋರ್ಡ್‌ನಲ್ಲಿ ಸುತ್ತಿಟ್ಟು ಅನ್ಯಕೋಮಿನ ಮಹಿಳೆ ಎಸ್ಕೇಪ್

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *