ಚಂಡೀಗಢ: ಮಹಿಳೆಯ (Woman) ಬೆತ್ತಲೆ ದೇಹ ಸೂಟ್‍ಕೇಸ್‍ನಲ್ಲಿ (Suitcase) ಪತ್ತೆಯಾಗಿರುವ ಘಟನೆ ಹರಿಯಾಣದ ಐಎಫ್‍ಎಫ್‍ಸಿಒ ಚೌಕ್ (IFFCO chowk) ಬಳಿ ನಡೆದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರ (Police) ಪ್ರಕಾರ ಮಹಿಳೆಯನ್ನು ರೇಪ್ ಮಾಡಿ ಬಳಿಕ ಸೂಟ್‍ಕೇಸ್‍ನಲ್ಲಿ ಹಾಕಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಈಗಾಗಲೇ ವೈದ್ಯರು ಸ್ಥಳಕ್ಕೆ ಆಗಮಿಸಿ ಮರಣೋತ್ತರ ಪರೀಕ್ಷೆ (Post-mortem) ನಡೆಸಿದ್ದಾರೆ. ಇದನ್ನೂ ಓದಿ: ಸಾವನ್ನಪ್ಪುವ ಮೊದಲು ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ತೆರಳಿದ್ದ ಮೇಸ್ತಾ – ಸಿಬಿಐ ವರದಿಯಲ್ಲಿ ಬಯಲು
ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆ ಸೂಟ್‍ಕೇಸ್‍ನಲ್ಲಿ ಉಸಿರು ಗಟ್ಟಿ ಸತ್ತಿರುವ ಕುರಿತು ತಿಳಿದುಬಂದಿದೆ. ರೇಪ್ ಮಾಡಿ ಈ ರೀತಿ ಕೃತ್ಯ ನಡೆಸಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಮಹಿಳೆಯ ದೇಹದಲ್ಲಿ ಸುಟ್ಟಿರುವ ಮತ್ತು ಗಾಯದ ಗುರುತುಗಳು ಪತ್ತೆಯಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರೈನೇಜ್ ಬ್ಲಾಕ್ ದಂಧೆ – ಹಣಕ್ಕಾಗಿ ಮಿಡ್‌ನೈಟ್ ಆಪರೇಷನ್
ಆಟೋ ರಿಕ್ಷಾ ಚಾಲಕ ಬೆಳಗ್ಗೆ 4 ಗಂಟೆ ಸುಮಾರಿಗೆ ಐಎಫ್‍ಎಫ್‍ಸಿಒ ಚೌಕ್ ಬಳಿ ರಸ್ತೆಯಲ್ಲಿ ಅನುಮಾನಾಸ್ಪದ ಸೂಟ್‍ಕೇಸ್ ಇರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬಂದು ಪರಿಶೀಲಿಸಿದಾಗ ಸೂಟ್‍ಕೇಸ್‍ನಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.