ಭೋಪಾಲ್: ಪತಿ ಸರಿಯಾಗಿ ಶೇವಿಂಗ್ ಮತ್ತು ಸ್ನಾನ ಮಾಡುತ್ತಿಲ್ಲ ಎಂದು 23 ವರ್ಷದ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಈ ದಂಪತಿ ಕಳೆದ ವರ್ಷ ಮದುವೆಯಾಗಿದ್ದರು. ಭೋಪಾಲ್ ಕುಟುಂಬ ನ್ಯಾಯಾಲಯದ ನ್ಯಾಯಾಧೀಶ ಆರ್.ಎನ್.ಚಂದ್ ಈ ದಂಪತಿಗೆ ಆರು ತಿಂಗಳ ಕಾಲ ಪ್ರತ್ಯೇಕವಾಗಿ ಇರಬೇಕೆಂದು ಆದೇಶಿಸಿದ್ದಾರೆ. ನಂತರ ವಿಚ್ಛೇದನ ತೀರ್ಪು ನೀಡಲಾಗುವುದು ಎಂದು ಕೌನ್ಸಿಲರ್ ಶೈಲ್ ಅವಸ್ಥಿ ತಿಳಿಸಿದ್ದಾರೆ.
Advertisement
ನನ್ನ ಪತಿ ತನ್ನ ಗಡ್ಡವನ್ನು ಕ್ಷೌರ ಮಾಡುವುದಿಲ್ಲ ಮತ್ತು 7-8 ದಿನಗಳವರೆಗೂ ಸ್ನಾನ ಮಾಡುವುದಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಹೀಗಾಗಿ ಮಹಿಳೆ ಮತ್ತು ಪತಿ ವಿಚ್ಛೇದನಕ್ಕಾಗಿ ಪರಸ್ಪರ ಒಪ್ಪಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅವಸ್ಥಿ ಹೇಳಿದ್ದಾರೆ.
Advertisement
Advertisement
ಮಹಿಳೆ ಭೋಪಾಲ್ ಸಮೀಪದ ಬಾರಿಗಢ ನಿವಾಸಿಯಾಗಿದ್ದು, ಪತಿಯನ್ನು ಸ್ನಾನ ಮಾಡುವಂತೆ ಹೇಳಿದ್ರೆ ವಾಸನೆ ಹೋಗಿಸಲು ಆತ ಪರ್ಫ್ಯೂಮ್ ಹಾಕಿಕೊಳ್ಳುತ್ತಾನೆ ಎಂದು ತಿಳಿಸಿದ್ದಾರೆ. ಪತಿ ಸಿಂಧಿ ಸಮುದಾಯದವರಾಗಿದ್ದು, ಪುಟ್ಟ ಅಂಗಡಿಯಿಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಬ್ಬರೂ ಬೇರೆ ಬೇರೆ ಸಮುದಾಯದವರಾಗಿದ್ರೂ ಕುಟುಂಬದವರು ಒಪ್ಪಿಯೇ ಮದುವೆ ಮಾಡಿಸಿದ್ದಾರೆ.
Advertisement
ಈ ದಂಪತಿಗೆ ಇನ್ನೂ ಮಕ್ಕಳಾಗಿಲ್ಲ. ಮಹಿಳಾ ಕುಟುಂಬದ ಸದಸ್ಯರು ಪತಿಗೆ ವಿಚ್ಛೇದನ ಕೊಡಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೂ ಮಹಿಳೆ ಒಪ್ಪಲಿಲ್ಲ ಎಂದು ಅವಸ್ಥಿ ಹೇಳಿದ್ದಾರೆ.