ದರೋಡೆಗೆ ಯತ್ನಿಸಿದವನಿಗೆ ನ್ಯಾಪ್ಕಿನ್‍ನಲ್ಲೆ ಹೊಡೆದು ಓಡಿಸಿದ್ಲು

ಅಂಗಡಿಗೆ ನುಗ್ಗಿ ದರೋಡೆಗೆ ಯತ್ನಿಸಿದ ಖದೀಮನಿಗೆ ಮಹಿಳೆಯೊಬ್ಬರು ನ್ಯಾಪ್ಕಿನ್‍ನಲ್ಲೆ ಹೊಡೆದು ಹೊರದಬ್ಬಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೌದು, ಸಾಮಾನ್ಯವಾಗಿ ಕಳ್ಳನಿಂದ ಬಚಾವ್ ಆಗಲು ಮಹಿಳೆಯರು ಚಾಕು ಅಥವಾ ಪೆಪ್ಪರ್ ಸ್ಪ್ರೇ ಇಟ್ಟುಕೊಂಡಿರುತ್ತಾರೆ. ಆದರೆ ನೆದರ್‌ಲ್ಯಾಂಡ್‍ನ ಡೆವೆಂಟರ್‌ನ ಬೇಕರಿಯೊಂದರಲ್ಲಿ ಮಹಿಳೆಯೊಬ್ಬಳು ನ್ಯಾಪ್ಕಿನ್‍ನಲ್ಲಿಯೇ ಕಳ್ಳನಿಗೆ ತಕ್ಕ ಪಾಠ ಕಲಿಸಿದ್ದಾಳೆ.
Latife Peker, a turkish baker in the Netherlands, chased the thief, using a cleaning cloth in self-defense; don’t underestimate the power of cleaning cloth👏 pic.twitter.com/4togC4JH5M
— Tansu YEĞEN (@TansuYegen) July 28, 2022
ಈ ಘಟನೆಯು ಮೆವ್ಲಾನಾ ಎಂಬ ಬೇಕರಿಯಲ್ಲಿ ನಡೆದಿದೆ. ಲತೀಫ್ ಪೆಕರ್ ಅವರು ತಮ್ಮ ಮಗನ ಬೇಕರಿಯನ್ನು ನ್ಯಾಪ್ಕಿನ್‍ನಲ್ಲಿ ಕ್ಲೀನ್ ಮಾಡುತ್ತಿದ್ದರು. ಈ ವೇಳೆ ಕಪ್ಪು ಬಣ್ಣದ ಮುಖವಾಡ ಧರಿಸಿ, ಕೈಯಲ್ಲಿ ಮಾರಕಾಸ್ತ್ರ ಹಿಡಿದು ಏಕಾಏಕಿ ಖದೀಮ ಅಂಗಡಿಗೆ ನುಗ್ಗಿದ್ದಾನೆ. ನಂತರ ಲಾಕರ್‌ನಲ್ಲಿ ಹಣ ಕದಿಯಲು ಯತ್ನಿಸಿದ್ದಾನೆ. ಆದರೆ ಇದ್ಯಾವುದಕ್ಕೂ ಧೃತಿಗೆಡದೇ ಲತೀಫ್ ಅಂಗಡಿಯನ್ನು ಕ್ಲೀನ್ ಮಾಡುತ್ತಿದ್ದ ನ್ಯಾಪ್ಕಿನ್‍ನಲ್ಲಿ ಕಳ್ಳನಿಗೆ ಹಿಗ್ಗಾಮುಗ್ಗಾ ಥಳಿಸುತ್ತಾ ಅಂಗಡಿಯಿಂದ ತಳ್ಳಲು ಯತ್ನಿಸುತ್ತಿರುತ್ತಾರೆ. ಅಷ್ಟರಲ್ಲಿ ವ್ಯಕ್ತಿಯೋರ್ವ ಅಂಗಡಿಗೆ ಬಂದಿದ್ದನ್ನು ಕಂಡು ಕಳ್ಳ ಓಡಿಹೋಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಈ ವೀಡಿಯೋವನ್ನು ತನ್ಸು ಯೆಗೆನ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಲತೀಫ್ ಪೆಕರ್ ಅವರು ಕ್ಲೀನ್ ಮಾಡುವ ಬಟ್ಟೆಯನ್ನು ಬಳಸಿ ಕಳ್ಳನನ್ನು ಓಡಿಸಿದ್ದಾರೆ. ಶುಚಿಗೊಳಿಸುವ ಬಟ್ಟೆಯ ಶಕ್ತಿ ಕಡಿಮೆ ಎಂದು ಅಂದಾಜು ಮಾಡಬೇಡಿ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇಲ್ಲಿಯವರೆಗೂ ಈ ವೀಡಿಯೋವನ್ನು ಸುಮಾರು 34,000 ಮಂದಿ ವೀಕ್ಷಿಸಿದ್ದು, ಮಹಿಳೆಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.