ಬೆಂಗಳೂರು: ನಗರದಲ್ಲಿ ಸೈಟ್ ಖರೀದಿಸೋದು ತುಂಬಾನೆ ಕಷ್ಟ. ಆದ್ರೆ ಜನರು ಸಾಲ ಮಾಡಿ ಖರೀದಿಸಿದ್ದ ಸೈಟ್‍ಗೆ ಮಹಿಳೆಯೊಬ್ಬಳು ಬೇಲಿ ಹಾಕಿರುವ ಆರೋಪವೊಂದು ಕೇಳಿಬಂದಿದೆ.
ಹೌದು. ನಾಗವಾರ ಸರ್ಕಲ್ ಬಳಿ ಇರೋ ವೈಯಾಲಿಕಾವಲ್ ಹೌಸಿಂಗ್ ಸೋಸೈಟಿಯ ಲೇಔಟ್ ಜಾಗದಲ್ಲಿ 10 ವರ್ಷಗಳ ಹಿಂದೆ ಸಾಲಸೋಲ ಮಾಡಿ ಸೈಟ್‍ಗಳನ್ನು ಖರೀದಿ ಮಾಡಿದ್ರು. ಆದ್ರೆ ಇನ್ನೇನು ಮನೆ ಕಟ್ಟಬೇಕು ಅನ್ನೋಷ್ಟರಲ್ಲೇ ಮಂಜುಳಾ ಎಂಬ ಮಹಿಳೆ ಈ ಜಾಗ ನನ್ನದು ನಾನು ಮೂರನೇ ತಲೆಮಾರಿನವಳು ಅಂತ ಸೈಟ್‍ನಲ್ಲಿ ಕಟ್ಟಿರೋ ಕಾಂಪೌಂಡ್ ಶೆಡ್‍ಗಳನ್ನು ಜೆಸಿಬಿ ತಂದು ನೆಲಸಮ ಮಾಡಿ ಇಡೀ ಜಾಗಕ್ಕೆ ಬೇಲಿ ಹಾಕಿದ್ದಾಳೆ. ಕೇಳಲು ಹೋದ ಸೈಟ್ ಮಾಲೀಕರ ಮೇಲೇನೆ ದಲಿತ ದೌರ್ಜನ್ಯ, ಅತ್ಯಾಚಾರದ ಕೇಸ್ ಹಾಕ್ತೀನಿ ಅಂತ ಭಯ ಹುಟ್ಟಿಸ್ತಾಳೆ.
Advertisement
Advertisement
ಹೀಗಾಗಿ ಇವಳ ವಿರುದ್ಧ ಸೈಟ್ ಮಾಲೀಕರೆಲ್ಲ ಪೊಲೀಸ್ ಕಂಪ್ಲೇಟ್ ಸಹ ಕೊಟ್ಟಿದ್ದಾರೆ. ಒಟ್ಟು 5ಕ್ಕೂ ಹೆಚ್ಚು ಎಫ್‍ಐಆರ್ ಈಕೆಯ ಮೇಲೆ ದಾಖಲಾಗಿದೆ. ಕೋರ್ಟ್ ಆದೇಶ ತಂದ್ರೂ ಸಹ ಪೊಲೀಸರೆ ಈಕೆಯ ಪರವಾಗಿ ಕೆಲಸ ಮಾಡುತ್ತಾರೆ ಅಂತ ಸೈಟ್ ಮಾಲೀಕ ಹುಸ್‍ಬನಾರ ಬೇಗಮ್ ಆರೋಪ ಮಾಡುತ್ತಾರೆ.
Advertisement
ನಿಮ್ಮ ಪರವಾಗಿ ಇರೋ ಆದೇಶದ ಕಾಪಿಗಳು ಏನಾದ್ರೂ ಇದ್ರೆ ಕೊಡಮ್ಮ ಅಂತ ನಾವು ಕೇಳಿದ್ರೆ ನನ್ನ ಮಗ ಬರಲಿ ನಮ್ಮ ಲಾಯರ್ ಬರಲಿ ಅಂತ ಹೇಳ್ತಾಳೆ. ಅಷ್ಟೇ ಅಲ್ಲದೆ ನಾನು ಅಮಾಯಕ ಮಹಿಳೆ ನನ್ನ ಮೇಲೆ ಇವರೆಲ್ಲ ದೌರ್ಜನ್ಯ ಎಸಗುತ್ತಾರೆ ಅಂತ ಸೈಟ್ ಮಾಲೀಕರ ಮೇಲೇನೆ ಆರೋಪಿಸುತ್ತಾಳೆ.
Advertisement
ಕೆಲವೊಮ್ಮೆ ಕಲ್ಲುಗಳನ್ನು ಹಿಡಿದುಕೊಂಡು ಸೈಟ್ ಮಾಲೀಕರನ್ನು ಓಡಿಸಿದ ಉದಾಹರಣೆ ಸಹ ಇದೆ. ಇದರ ಜೊತೆಗೆ ಈಕೆಯ ಮಕ್ಕಳು ಸಹ ತಮಗೆ ತಾವೇ ಬಟ್ಟೆ ಹರಿದುಕೊಂಡು ನಮ್ಮ ಮೇಲೆ ಹಲ್ಲೆ ಮಾಡೋದಕ್ಕೆ ಬಂದಿದ್ದಾರೆ ಅಂತ ಕಂಪ್ಲೇಂಟ್ ಕೋಡ್ತಾರಂತೆ. ಈಕೆಯ ಈ ಮಾರಿತನಕ್ಕೆ ಹೆದರಿದ ಕೆಲವರು ಈಕೆಗೆ ಹಣ ಸಹ ಕೊಟ್ಟು ನಮ್ಮ ಸೈಟ್ ಬಿಟ್ಟು ಬಿಡಮ್ಮ ಅಂದ್ರೆ ಇನ್ನೊಂದಿಷ್ಟು ಕೊಡಿ ಇಲ್ಲ ಸೈಟ್ ಬಿಟ್ಟು ಹೊರಡಿ ಅಂತಾಳಂತೆ. ಇಷ್ಟೆಲ್ಲ ಕಾಟ ಕೊಡುವ ಈಕೆಯ ಹಿಂದೆ ಪ್ರಭಾವಿ ವ್ಯಕ್ತಿಗಳು ಇದ್ದಾರೆ ಇಲ್ಲದಿದ್ರೆ ಈ ರೀತಿ ರಾಜಾರೋಷವಾಗಿ ಓಡಾಡುತ್ತಿರಲಿಲ್ಲ ಅಂತಾ ಮತ್ತೋರ್ವ ಸೈಟ್ ಮಾಲೀಕ ಪ್ರಕಾಶ್ ಹೇಳಿದ್ದಾರೆ.
ಒಟ್ಟಿನಲ್ಲಿ ನ್ಯಾಯ ಕೊಡಿಸಬೇಕಿದ್ದ ಪೊಲೀಸರೆ ಇವಳಿಗೆ ಆಸರೆಯಾಗಿ ನಿಂತಿದ್ದಾರೆ. ಪೊಲೀಸರು ಇವಳ ಪರವಾಗಿ ಕೆಲಸ ಮಾಡುತ್ತಿರಬೇಕಾದ್ರೆ ಇನ್ಯಾರ ಬಳಿ ನ್ಯಾಯ ಕೇಳಬೇಕು ಅನ್ನೋದು ಸೈಟ್ ಮಾಲೀಕರ ಅಳಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv