ವಿಜಯಪುರ: ನಗರದಲ್ಲಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಸರಗಳ್ಳತನ ಮಾಡಿದ್ದ ಪ್ರಕರಣ ಸಂಬಂಧ `ಪಬ್ಲಿಕ್ ಟಿವಿ’ ವಿಸ್ತೃತ ವರದಿ ಬೆನ್ನಲ್ಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಆಸೀಫ್ ಜಮಾದಾರ್ ಹಾಗೂ ರಿಹಾನ್ ಮಣಿಯಾರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: 10 ಗಂಟೆಯ ನವಜಾತ ಶಿಶು ಜೀವನ್ಮರಣ ಹೋರಾಟ – ಝೀರೋ ಟ್ರಾಫಿಕ್‌ನಲ್ಲಿ ಕಿಮ್ಸ್ ಆಸ್ಪತ್ರೆಗೆ ರವಾನೆ
ಇತ್ತೀಚಿಗಷ್ಟೇ ವಿಜಯಪುರ ನಗರದ ಮಹಿಳೆಯೊಬ್ಬರು ದಿವಟಗೇರಿ ಬಡವಾಣೆಯಲ್ಲಿನ ಅಂಗಡಿಗೆ ತೆರಳಿದ್ದರು. ಆಗ ಆರೋಪಿಗಳಿಬ್ಬರು ಏಕಾಏಕಿ ಕಲಾವತಿ ಮೇಲೆ ಹಲ್ಲೆಗೈದು, ಕಿವಿ ಕತ್ತರಿಸಿದ್ದರು. ಬಳಿಕ ಕಿವಿಯಲ್ಲಿದ್ದ ಓಲೆ ಹಾಗೂ ಕತ್ತಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ `ಪಬ್ಲಿಕ್ ಟಿವಿ’ ವಿಸ್ತೃತ ವರದಿ ಬೆನ್ನಲ್ಲೇ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: 56 ಕೋಟಿ ರೂ. ಡ್ರಗ್ಸ್ ಮಾಹಿತಿ ಸುಳ್ಳು.. ಮಹಾರಾಷ್ಟ್ರ ಪೊಲೀಸರಿಂದ ಸುಳ್ಳು ಮಾಹಿತಿ: ಪರಮೇಶ್ವರ್ ಸ್ಪಷ್ಟನೆ

