LatestMain PostNational

ವಿಮಾನದಲ್ಲಿ ಪ್ರಜ್ಞಾಹೀನಳಾಗಿ ಮಹಿಳೆ ಸಾವು

ತಿರುವನಂತಪುರಂ: ದುಬೈನಿಂದ ಬಂದ ವಿಮಾನದಲ್ಲಿ(Flight) ಮಹಿಳಾ(Woman) ಪ್ರಯಾಣಿಕರೊಬ್ಬರು ಪ್ರಜ್ಞಾಹೀನಳಾಗಿ, ಮೃತಪಟ್ಟ ಘಟನೆ ಕೊಚ್ಚಿಯಲ್ಲಿ(Kochi) ನಡೆದಿದೆ.

ಮಿನಿ(56) ಅವರು ದುಬೈನಿಂದ(Dubai) ಕೊಚ್ಚಿಗೆ ವಿಮಾನದ ಮೂಲಕ ಹೋಗುತ್ತಿದ್ದರು. ಆ ಸಮಯದಲ್ಲಿ ಮಿನಿ ಪ್ರಜ್ಞಾಹೀನರಾಗಿದ್ದಾರೆ. ವಿಮಾನ ಲ್ಯಾಂಡ್ ಆದ ನಂತರ ತಕ್ಷಣ ಆಕೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ(Hospital) ಕರೆದೊಯ್ಯಲಾಯಿತು. ಆದರೆ ಅಲ್ಲಿ ವೈದ್ಯರು ಮಿನಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಇದನ್ನೂ ಓದಿ: ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮಹಿಳೆ ನೇಣಿಗೆ ಶರಣು

ಆಕೆ ಕೆಲವು ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಳು. ಇದರಿಂದಾಗಿ ಸಾವನ್ನಪ್ಪಿದ್ದಾಳೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಈ ಬಗ್ಗೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಬದಲಿಗೆ ಸಹಜ ಸಾವು ಎಂದೇ ಪರಿಗಣಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ತಂತಿ ಸರಿಪಡಿಸಲು ಹೋಗಿ ಲೈನ್‍ಮ್ಯಾನ್ ಸಾವು

Live Tv

Leave a Reply

Your email address will not be published.

Back to top button