ಭುವನೇಶ್ವರ: 25 ವರ್ಷಗಳಿಂದ ಆಟೋ ಸೇವೆ ನೀಡಿದ ವ್ಯಕ್ತಿಗೆ ಮಹಿಳೆಯೊಬ್ಬರು ತನ್ನ 1 ಕೋಟಿ ರೂ. ಮೌಲ್ಯದ ಆಸ್ತಿಯನ್ನೇ ದಾನ ಮಾಡಿದ ಅಚ್ಚರಿಯ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ.
ಹೌದು. ಈ ರೀತಿ ಆಸ್ತಿ ದಾನ ಮಾಡಿರುವ ಮಹಿಳೆಯನ್ನು ಮಿನಾತಿ ಪಟ್ನಾಯಕ್ ಎಂದು ಗುರುತಿಸಲಾಗಿದ್ದು, ಇವರು ಕಟಕ್ ನಿವಾಸಿ. ಸದ್ಯ ತಮಗೆ ಸಹಾಯ ಮಾಡಿರುವ ಬುಧ ಸಮಾಲ್ ಎಂಬ ಆಟೋ ಎಳೆಯುವ ವ್ಯಕ್ತಿಗೆ ತಮ್ಮ ಮೂರು ಅಂತಸ್ತಿನ ಮನೆ, ಚಿನ್ನದ ಆಭರಣಗಳನ್ನು ದಾನ ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ ಒಂದು ಕೋಟಿ ರೂ.ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.
Advertisement
Advertisement
ಕಳೆದ ವರ್ಷ ಪತಿ ಹಾಗೂ ಈ ವರ್ಷ ಮಗಳನ್ನು ಮಿನಾತಿ ಕಳೆದುಕೊಂಡಿದ್ದಾರೆ. ಆ ಬಳಿಕದಿಂದ ಒಬ್ಬರೇ ವಾಸ ಮಾಡುತ್ತಿರುವ ಮಿನಾತಿಯವರಿಗೆ ಪತಿ ಹಾಗೂ ಮಗಳಲಿಲ್ಲವೆಂದರೆ ಎಷ್ಟು ಆಸ್ತಿ ಇದ್ದರೆ ಏನು ಉಪಯೋಗ. ನಾನು ದುಃಖದಲ್ಲಿ ಬದುಕುತ್ತಿರುವಾಗ ಸಂಬಂಧಿಕರು ಯಾರೂ ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ಹೀಗಾಗಿ ನಾನು ಒಂಟಿಯಾದೆ. ಹೀಗಾಗಿ ಬಡವರಿಗೆ ಈ ಆಸ್ತಿಯನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಈ ವೇಳೆ ರಿಕ್ಷಾ ಎಳೆಯುವಾತ ಹಾಗೂ ಆತನ ಕುಟುಂಬದವರು ನನ್ನಿಂದ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ನನ್ನ ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಿದ್ದರು. ಅಂತೆಯೇ ಆಟೋ ಎಳೆಯುವವನಿಗೆ ನೀಡಲು ತೀರ್ಮಾನಿಸಿ ವಿಲ್ ಸಹ ಮಾಡಿಸಿರುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಪರೀಕ್ಷೆಯಲ್ಲಿ 100ಕ್ಕೆ 89 ಅಂಕ ಪಡೆದ 104ರ ವೃದ್ಧೆಯ ಸ್ಫೂರ್ತಿದಾಯಕ ಕಥೆ
Advertisement
Advertisement
ಈ ಸಂ ಬಂಧ ಬುಧ ಸಮಾಲ್ ಪ್ರತಿಕ್ರಿಯಿಸಿ, ಕಳೆದ 25 ವರ್ಷಗಳಿಂದ ಈ ಕುಟುಂಬಕ್ಕೆ ಸೇವೆ ಸಲ್ಲಿಸುತ್ತಿದ್ದು, ಆಸ್ತಿಯ ಕನಸು ಕಂಡಿರಲಿಲ್ಲ ಎಂದು ರಿಕ್ಷಾ ಚಾಲಕ ಹೇಳಿದರು. ಅವನು ತನ್ನ ರಿಕ್ಷಾದಲ್ಲಿ ಬೇರೆ ಯಾವುದೇ ಪ್ರಯಾಣಿಕರನ್ನು ಹೊತ್ತೊಯ್ಯುವುದಿಲ್ಲ. ಮಿನಾತಿಯ ಪತಿ ಹಾಗೂ ಅವರ ಮಗಳು ತೀರಿಕೊಂಡ ನಂತರ ನನ್ನ ಕುಟುಂಬದಂತೆ ಅವರನ್ನು ನೋಡಿಕೊಳ್ಳುತ್ತೇನೆ, ಮುಂದೆಯೂ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.