ವಾಷಿಂಗ್ಟನ್: ಹುಟ್ಟಿದ್ದ ಮೂರು ಗಂಟೆಯಲ್ಲೇ ನವಜತ ಶಿಶು ಮೃತಪಟ್ಟ ಕಾರಣ ತಾಯೊಯೊಬ್ಬರು 63 ದಿನದಲ್ಲಿ 15 ಲೀಟರ್ ತಮ್ಮ ಎದೆ ಹಾಲನ್ನು ದಾನ ಮಾಡಿದ್ದಾರೆ.
ಅಮೆರಿಕ ಮೂಲದ ಸಿಯೆರಾ ಸ್ಟ್ರಾಂಗ್ಫೆಲ್ಡ್ ತಮ್ಮ ಮಗು ಹುಟ್ಟಿದ್ದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪುತ್ತದೆ ಎಂಬ ವಿಷಯ ಅವರಿಗೆ ಮೊದಲೇ ತಿಳಿದಿತ್ತು. ಜನ್ಮ ಪಡೆದ ಬಳಿಕ ಮಗು ಮೂರು ಗಂಟೆಗಳ ಕಾಲ ತನ್ನ ತಾಯಿಯ ತೋಳಿನಲ್ಲಿಯೇ ಇತ್ತು.
ನೀವು ಜನ್ಮ ನೀಡುವ ಮಗುವಿಗೆ ಟ್ರೈಸೊಮಿ 18 ಇದೆ ಎಂದು ವೈದ್ಯರು ಮೊದಲೇ ಸಿಯೆರಾಗೆ ತಿಳಿಸಿದ್ದರು. ಟ್ರೈಸೊಮಿ ಇದು ಅಪರೂಪದ ಅನುವಂಶಿಕ ಸ್ಥಿತಿಯಾಗಿದ್ದು, ಜನ್ಮ ಪಡೆಯುವಾಗಲೇ ಇದು ಮಕ್ಕಳಿಗೆ ಮಾರಕವಾಗಲಿದೆ. ಈ ಸಮಸ್ಯೆ ಇದ್ದರೆ ದೇಹದ ಬೆಳವಣಿಗೆಯನ್ನು ವಿಳಂಬಗೊಳಿಸುತ್ತದೆ. ಪತ್ರಿಕೆಯೊಂದರಲ್ಲಿ ಮಾತನಾಡಿದ ಸಿಯೆರಾ, “ವೈದ್ಯರು ನನಗೆ ಅರ್ಬಾಷನ್ ಮಾಡಿಸುವಂತೆ ಸಲಹೆ ನೀಡಿದ್ದರು. ಆದರೆ ನಾನು ನನ್ನ ನವಜಾತ ಶಿಶುವನ್ನು ನೋಡಬೇಕತ್ತು. ಕೆಲವೇ ಗಂಟೆಗಳಾಗಲಿ ನನಗೆ ಮಗುವಿನ ಜೊತೆ ಇರಬೇಕು ಎಂದು ನಾನು ಹೇಳಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸ್ಯಾಮ್ಯೂಯಲ್ (ನವಜಾತ ಶಿಶು) ಕೇವಲ ಒಂದು ಬಾರಿ ಮಾತ್ರ ನನ್ನ ತೋಳಿನಲ್ಲಿದ್ದನು. ಆಗ ವೈದ್ಯರಿಗೆ ಆತನಿಗೆ ಆಕ್ಸಿಜನ್ ಟ್ಯೂಬ್ ಹಾಕಿದ್ದರು. ನಾವಿಬ್ಬರು ಮೂರು ಗಂಟೆಗಳ ಕಾಲ ಜೊತೆಯಲ್ಲಿದ್ದೇವೆ. ನಾನು ಆತನನ್ನು ಮುಟ್ಟಿದ ತಕ್ಷಣ ಆತನ ಹಾರ್ಟ್ ರೇಟ್ ಹಾಗೂ ಆಕ್ಸಿಜನ್ ರೇಟ್ ಇದಕ್ಕಿದ್ದಂತೆ ಹೆಚ್ಚಾಯಿತು. ಆ ಕ್ಷಣ ಅವನು ತನ್ನ ತಾಯಿ ಜೊತೆ ಇರುವುದು ಆತನಿಗೆ ತಿಳಿದಿರುವಂತಿತ್ತು. ಆ ಮೂರು ಗಂಟೆಗಳ ಕಾಲ ನಾನು ಆತನನ್ನೇ ನೋಡುತ್ತಿದ್ದೆ. ಆದರೆ ಆ ಮೂರು ಗಂಟೆ ನಿಮಿಷಗಳಲ್ಲಿ ಮುಗಿದುಹೋಯಿತು ಎಂದರು.
ಆ ಮೂರು ಗಂಟೆಯಲ್ಲಿ ನಾನು ನನ್ನ ಎದೆ ಹಾಲನ್ನು ದಾನ ಮಾಡಬೇಕೆಂದು ನಿರ್ಧಾರ ಮಾಡಿದೆ. ಅಗತ್ಯವಿರುವ ಮಕ್ಕಳಿಗೆ ನನ್ನ ಎದೆ ಹಾಲು ಉಪಯೋಗವಾಗಬೇಕು ಎಂಬುದು ನನ್ನ ಬಯಕೆ. ನನ್ನ ಮಗುವಿನ ಜೀವನ ಮತ್ತು ಸಾವಿನ ಮೇಲೆ ನನಗೆ ನಿಯಂತ್ರಣವಿಲ್ಲ. ಆದರೆ ನಂತರ ನಾನು ಮಾಡಿದ ಕೆಲಸ ನನ್ನ ನಿಯಂತ್ರಣದಲ್ಲಿತ್ತು. ನಾನು ಗರ್ಭಿಣಿಯಾಗಿದ್ದೇನೆ ಎಂದು ತಿಳಿದಾಗ ಸ್ತನ್ಯಪಾನ ಯಶಸ್ವಿಯಾಗಿ ನೀಡಬೇಕು ಎಂದುಕೊಂಡಿದ್ದೆ. ಆದರೆ ಸ್ಯಾಮ್ಯೂಯಲ್ ಆರೋಗ್ಯದ ಬಗ್ಗೆ ವೈದ್ಯಕೀಯ ರಿಪೋರ್ಟ್ ಸಿಕ್ಕಾಗ ಇದು ಸಾಧ್ಯವಾಗಲ್ಲ ಎಂದು ತಿಳಿಯಿತು ಎಂದು ಸಿಯೆರಾ ಹೇಳಿದ್ದಾರೆ.
ನನ್ನ ಎದೆ ಹಾಲಿನಿಂದ ಬೇರೆ ನವಜಾತ ಶಿಶುವಿನ ಪ್ರಾಣ ಉಳಿಯುತ್ತದೆ. 63 ದಿನ ಪಂಪ್ ಮೂಲಕ ನಾನು ಎದೆ ಹಾಲನ್ನು ಸಂಗ್ರಹಿಸಿದ್ದೇನೆ. ನಾನು ಮದರ್ ಮಿಲ್ಕ್ ಬ್ಯಾಂಕಿಗೆ 15 ಲೀ. ಹಾಲನ್ನು ನೀಡಿದ್ದೇನೆ ಎಂದು ಸಿಯೆರಾ ಫೇಸ್‍ಬುಕ್‍ನಲ್ಲಿ ತಮ್ಮ ಪೋಸ್ಟ್ ಮಾಡುವ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.