ಚಿಕ್ಕಮಗಳೂರು: ಎನ್.ಆರ್.ಪುರ (N.R Pura) ತಾಲೂಕಿನ ಬಾಳೆಹೊನ್ನೂರಿನಲ್ಲಿ ಮಹಿಳೆಯೊಬ್ಬಳು ಸಾವನ್ನಪ್ಪಿದ್ದು, ವರದಕ್ಷಿಣೆಗಾಗಿ (Dowry Case) ಪತಿ ಹಾಗೂ ಆತನ ಮನೆಯವರು ಹೊಡೆದು ನೇಣು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಾಳೆಹೊನ್ನೂರಿನ ಮಮತಾ ಮೃತ ದುರ್ದೈವಿ. ಆಕೆಯನ್ನು 4 ವರ್ಷಗಳ ಹಿಂದೆ ಅವಿನಾಶ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ 110 ಗ್ರಾಂ ಚಿನ್ನವನ್ನು ಮಮತಾ ಪೋಷಕರು ನೀಡಿದ್ದರು. ಈ ಹಿಂದೆಯೂ ಹಣಕ್ಕಾಗಿ ಗಂಡನ ಮನೆಯವರಿಂದ ಮಾನಸಿಕ – ದೈಹಿಕ ಕಿರುಕುಳ ನೀಡಿದ್ದರು. ಆಗ ಹಿಂಸೆ ತಾಳಲಾರದೆ ಮಹಿಳೆ ಗಂಡನ ಮನೆ ಬಿಟ್ಟು ತವರು ಸೇರಿದ್ದಳು. ಬಳಿಕ ದೊಡ್ಡವರ ರಾಜಿ ಪಂಚಾಯಿತಿ ಮೂಲಕ ಮತ್ತೆ ಮಮತಾ ಗಂಡನ ಮನೆ ಸೇರಿದ್ದಳು. ಇನ್ನೂ ಕಳೆದ ವರ್ಷ ತೋಟದ ನಿರ್ವಹಣೆಗೆಂದು ಅವಿನಾಶ್, ಪತ್ನಿ ಮನೆಯವರಿಂದ 50,000 ರೂ. ಹಣ ಸಹ ಪಡೆದಿದ್ದ ಎನ್ನಲಾಗಿದೆ. ಇದನ್ನೂ ಓದಿ: ಆನೇಕಲ್ | ಪತ್ನಿ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದ ಟೆಕ್ಕಿ ಪತಿ – ಮಹಾರಾಷ್ಟ್ರದಲ್ಲಿ ಹಂತಕ ಅರೆಸ್ಟ್
- Advertisement -
ಜನವರಿ 25ರಂದು ಮಮತಾಗೆ ಪಿಡ್ಸ್ ಬಂದಿದೆ ಎಂದು ಅವಿನಾಶ್ ಆಸ್ಪತ್ರೆಗೆ ದಾಖಲಿಸಿದ್ದ. ಇನ್ನೂ ಅವಿನಾಶ್ ಚಿಕ್ಕಪ್ಪ, ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ಮಾಹಿತಿ ನೀಡಿದ್ದರು. ಇದೆಲ್ಲದರ ನಡುವೆ ಗಂಡನ ಮನೆಯವರು ಹೊಡೆದು ನೇಣು ಹಾಕಿ ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ಮಮತಾ ಪೋಷಕರು ಆರೋಪಿಸಿದ್ದಾರೆ.
- Advertisement -
- Advertisement -
ಎರಡು ತಿಂಗಳಿಂದ ಮಮತಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಕೆ ಹುಷಾರಾಗುವ ಮುನ್ನವೇ ಗಂಡನ ಮನೆಯವರು ಮನೆಗೆ ಕರೆದುಕೊಂಡು ಬಂದಿದ್ದಾರೆ. ಮನೆಗೆ ಕರೆದುಕೊಂಡು ಬಂದ ಬಳಿಕ ಆಕೆ ಸಾವನ್ನಪ್ಪಿದ್ದಾಳೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ.
- Advertisement -
ಮಮತಾ ಗಂಡ, ಅತ್ತೆ ಹಾಗೂ ಮಾವನ ವಿರುದ್ಧ ಮೃತ ಮಮತಾ ಅಣ್ಣ ಮಂಜುನಾಥ್ ದೂರು ನೀಡಿದ್ದು, ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಸ್ಪತ್ರೆಯಲ್ಲೇ ವೈದ್ಯೆಗೆ ಇರಿದು ಹತ್ಯೆ – ಪತಿ ವಿರುದ್ಧ ಕೊಲೆ ಆರೋಪ