ಕೊಪ್ಪಳ: ಶಾಮಿಯಾನದ ಕಂಬಗಳು ಭಾರೀ ಗಾಳಿಗೆ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕೊಪ್ಪಳ (Koppala) ಜಿಲ್ಲೆಯಲ್ಲಿ ನಡೆದಿದೆ.
ಅಂಜಿನಮ್ಮ(45) ಮೃತ ದುರ್ದೈವಿ ಮಹಿಳೆಯಾಗಿದ್ದು, ಇವರು ಗಂಗಾವತಿ ತಾಲೂಕಿನ ಪ್ರಗತಿ ನಗರ ನಿವಾಸಿ. ಇನ್ನು ಶಾಮಿಯಾನದ ಕೆಳಗೆ ಸಿಲುಕಿ 4 ಜನರಿಗೆ ಗಂಭೀರ ಗಾಯಗಳಾಗಿವೆ.
Advertisement
Advertisement
ಕಾರಟಗಿ ತಾಲೂಕು ಮುಷ್ಟೂರು ಕ್ಯಾಂಪ್ ನಲ್ಲಿ ಇಂದು ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅಡುಗೆ ಮಾಡುವ ಸ್ಥಳದಲ್ಲಿ ಶಾಮಿಯಾನ ಹಾಕಲಾಗಿತ್ತು. ಈ ವೇಳೆ ಜೋರಾದ ಗಾಳಿ ಬೀಸಿದ್ದರಿಂದ ಕಂಬ ಉರುಳಿ ಬಿದ್ದು, ಶಾಮಿಯಾನ ಹಾರಿ ಬಿದ್ದಿದೆ. ಇದನ್ನೂ ಓದಿ; ವರದಕ್ಷಿಣೆ ಕೇಳಿದ್ದಕ್ಕೆ ವರನನ್ನೇ ಮರಕ್ಕೆ ಕಟ್ಟಿ ಹಾಕಿದ ವಧುವಿನ ಕಡೆಯವ್ರು
Advertisement
Advertisement
ಘಟನೆಯಲ್ಲಿ ಗಾಯಗೊಂಡವರನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ; ಮಾರಣಾಂತಿಕ ಹಲ್ಲೆಗೈದು ಲಾರಿಯಲ್ಲಿದ್ದ 13 ಟನ್ ಸ್ಟೀಲ್ ದೋಚಿ ಚಾಲಕನನ್ನು ರಸ್ತೆಗೆಸೆದ್ರು!