ಬೆಂಗಳೂರು: ನಿಶ್ಚಯವಾದ ಮದುವೆ(Marriage)ಗೆ ಫೋಟೋವೊಂದು ಕಿರಿಕ್ ತಂದಿದೆ. ಫೋಟೋ (Photo) ವಿಚಾರಕ್ಕೆ ಯುವತಿಯ ತಂದೆ ಹಾಗೂ ತಾಯಿಯ ನಡುವೆ ನಡೆದ ಜಗಳ ಮಹಿಳೆಯ ಸಾವಿನಲ್ಲಿ ಅಂತ್ಯವಾಗಿದೆ.
ಶಾಹಿದಾ ಸಾವನ್ನಪ್ಪಿದ ಮಹಿಳೆ. ಸೆಪ್ಟೆಂಬರ್ 21ರಂದು ಘಟನೆ ಮೋದಿ ಮಸೀದಿ ರಸ್ತೆಯಲ್ಲಿ ನಡೆದಿದೆ. ಇದನ್ನೂ ಓದಿ: ಮನೆ ಬಿದ್ದು 9 ತಿಂಗಳಾದ್ರೂ ಪರಿಹಾರ ನೀಡಿಲ್ಲ – ಆತ್ಮಹತ್ಯೆ ಬೆದರಿಕೆ ಹಾಕಿದ ನೆರೆ ಸಂತ್ರಸ್ತ
ಏನಿದು ಪ್ರಕರಣ..?: ಮುನಾವರ್ ಜೊತೆ ಮದುವೆಯಾಗಿ 19 ವರ್ಷವಾಗಿತ್ತು. ಬಳಿಕ ಹುಟ್ಟಿದ ಮಗಳಿಗೆ ಮದುವೆ ನಿಶ್ಚಯವಾಗಿತ್ತು. ಹುಡುಗನ ಜೊತೆ ಪೋಷಕರು ಮಗಳ ಎಂಗೆಜ್ಮೆಂಟ್ (Engagement) ಸಹ ಮಾಡಿದ್ದರು. ಆದರೆ ಈ ನಡುವೆ ಹುಡುಗನ ಕಡೆಯವರಿಗೆ ಅದೊಂದು ಫೋಟೋ ತಲುಪಿದೆ.
ಬೇರೊಬ್ಬನ ಜೊತೆ ಯುವತಿ ಇರುವ ಫೋಟೋ ಯುವಕನ ಮನೆಗೆ ತಲುಪಿದೆ. ಈ ಫೋಟೋ ಹಿಡಿದು ಯುವಕನ ತಂದೆ, ಯುವತಿ ತಂದೆ ಮುನಾವರ್ ಪ್ರಶ್ನಿಸಿದ್ದರು. ಬಳಿಕ ಆ ಫೋಟೋ ವಿಚಾರವಾಗಿ ಮುನಾವರ್ ಹಾಗೂ ಪತ್ನಿ ಶಾಹಿದಾ ಜೊತೆ ಜಗಳ ನಡೆದಿದೆ. ಈ ವೇಳೆ ತಳ್ಳಾಟದ ಸಂದರ್ಭ ಶಾಹಿದಾ ಕೆಳ ಬಿದ್ದಿದ್ದಾರೆ.
ಕೆಳಗೆ ಬಿದ್ದ ಸಂದರ್ಭದಲ್ಲಿ ಚೂಪಾದ ವಸ್ತುವೊಂದು ಶಾಹಿದಾ ಹೊಟ್ಟೆ (Stomach) ಕುಯ್ದಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದರೂ, ಇದೀಗ ಚಿಕಿತ್ಸೆ ಫಲಿಸಿದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧಿಸಿದಂತೆ ಸದ್ಯ ಮುನಾವರ್‍ನನ್ನು ಡಿಜೆ ಹಳ್ಳಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.