BelgaumDistrictsKarnatakaLatestMain Post

ಮನೆ ಬಿದ್ದು 9 ತಿಂಗಳಾದ್ರೂ ಪರಿಹಾರ ನೀಡಿಲ್ಲ – ಆತ್ಮಹತ್ಯೆ ಬೆದರಿಕೆ ಹಾಕಿದ ನೆರೆ ಸಂತ್ರಸ್ತ

ಬೆಳಗಾವಿ: ಅತಿವೃಷ್ಟಿಯಿಂದ ಮನೆ (House) ಬಿದ್ದು 9 ತಿಂಗಳು ಕಳೆದರೂ ಪರಿಹಾರ ನೀಡದ ಆರೋಪ ಹಿನ್ನೆಲೆ ಮನೆ ನಿರ್ಮಿಸಿ ಕೊಡದಿದ್ದರೆ ಆತ್ಮಹತ್ಯೆ (Suicide) ಮಾಡಿಕೊಳ್ಳುವ ಸಂದರ್ಭ ಬರುತ್ತದೆ ಎಂದು ನೆರೆ ಸಂತ್ರಸ್ತ ವ್ಯಕ್ತಿಯೊಬ್ಬರು ವೀಡಿಯೋ (Video) ಮಾಡಿ ಅಳಲು ತೋಡಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಕ್ಕೇರಿ ಗ್ರಾಮದ ಈರಪ್ಪ ನಾಡಗೌಡ್ರ ಎಂಬಾತ ಮೊಬೈಲ್ ಸೆಲ್ಫಿ ವೀಡಿಯೋ ಮಾಡಿ ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಾಂಸದ ಉತ್ಪನ್ನಗಳ ಜಾಹೀರಾತುಗಳ ನಿಷೇಧ ಕೋರಿದ ಅರ್ಜಿದಾರರಿಗೆ ಬಾಂಬೆ ಹೈಕೋರ್ಟ್ ತರಾಟೆ

ನಿರಂತರ ಮಳೆಗೆ ಕಳೆದ ನವೆಂಬರ್‍ನಲ್ಲಿ ಯಲ್ಲಪ್ಪ ನಾಡಗೌಡ್ರ ಅವರ ಮನೆ ನೆಲಸಮವಾಗಿತ್ತು. ಮನೆ ಬಿದ್ದರೂ ಪರಿಹಾರ ನೀಡಿಲ್ಲ. ಅಂಜಲಿ ನಿಂಬಾಳ್ಕರ್, ಖಾನಾಪುರ ತಹಶಿಲ್ದಾರ್, ಬೆಳಗಾವಿ ಡಿಸಿ, ಲೋಕಾಯುಕ್ತ, ಸಿಎಂಗೆ ಪತ್ರ ಬರೆದರೂ ಪ್ರಯೋಜನ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೋಸಿ ಹೋಗಿರುವ ನೆರೆ ಸಂತ್ರಸ್ತ ಯಲ್ಲಪ್ಪ ಮೊಬೈಲ್‍ನಲ್ಲಿ ವೀಡಿಯೋ ಮಾಡಿ ಅಳಲನ್ನು ತೋಡಿಕೊಂಡಿದ್ದು, ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶಾಸಕರಿಗೆ ಕರೆ ಮಾಡಿದರೆ ಸರ್ಕಾರದಿಂದ ಪರಿಹಾರ ಬಂದಿಲ್ಲ ಅಂತಾ ಫೋನ್ ಕಟ್ ಮಾಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಟ್ರೈನ್‌ನಲ್ಲೂ ಸವಿಯಬಹುದು ಹಬ್ಬದೂಟ – ನವರಾತ್ರಿ ಹಿನ್ನೆಲೆ ರೈಲ್ವೆಯಿಂದ ಸ್ಪೆಷಲ್ ಮೆನು

ಗ್ರಾಮಲೆಕ್ಕಾಧಿಕಾರಿ ಎರಡು ಸಾವಿರ ರೂಪಾಯಿ ಹಣ ಪಡೆದಿದರು. ಹೆಚ್ಚಿನ ಹಣ ಬೇಡಿಕೆ ಇಟ್ಟಾಗ ನೀಡದಿದ್ದಾಗ ನನ್ನ ಮನೆಯ ವರದಿ ಮಾಡಿಲ್ಲ. ಗ್ರಾಮಲೆಕ್ಕಾಧಿಕಾರಿ ಕರ್ತವ್ಯಲೋಪ ಎಸೆಗಿದ್ದಾರೆ. ಅವರನ್ನು ವರ್ಗಾವಣೆ ಮಾಡಿದ್ದಾರೆ ಎಂದು ತಹಶಿಲ್ದಾರ್ ಪತ್ರ ಬರೆದಿದ್ದಾರೆ. ಅವರನ್ನು ವರ್ಗಾವಣೆ ಮಾಡಿದ್ದರೆ ನಮಗೆ ಪರಿಹಾರ ಸಿಗುವುದಿಲ್ಲ. ಆದರೆ ನನಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಅಂಜಲಿ ನಿಂಬಾಳ್ಕರ್‌ಗೆ ಎಲ್ಲಾ ದಾಖಲೆ ವಾಟ್ಸಪ್ ಮಾಡಿದ್ದು ನೋಡಿದ್ದಾರೆ. ಆದರೆ ಪರಿಹಾರ ಕೊಡಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ತನಗೆ ಚಿಕ್ಕಚಿಕ್ಕ ಮಕ್ಕಳು ವೃದ್ಧ ತಂದೆ ಇದ್ದು ಬೀದಿಯಲ್ಲಿ ಕಳೆಯುವ ಪರಿಸ್ಥಿತಿ ಬಂದಿದೆ. ನನ್ನ ಮಕ್ಕಳ ಸ್ಥಿತಿ ಹೇಗಿದೆ ನೋಡಿ ಎಂದು ವೀಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button