ಮುಂಬೈ: ವೃದ್ಧೆಯನ್ನು ಆಕೆಯ ಮಗ ಹಾಗೂ ಮೊಮ್ಮಗ ಕೊಲೆ ಮಾಡಿ ಆಕೆಯ ದೇಹದ ಭಾಗಗಳನ್ನು ತುಂಡರಿಸಿ ಗೋಣಿ ಚೀಲದಲ್ಲಿ ತುಂಬಿ ನದಿಗೆ(River) ಎಸೆದ ಭೀಕರ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ( Pune) ನಡೆದಿದೆ.
ಉಷಾ ಗಾಯಕ್‍ವಾಡ್(62)ನ್ನು ಆಕೆಯ ಪುತ್ರ ಹಾಗೂ ಮೊಮ್ಮಗನಿಗೆ ತನ್ನ ಮನೆಯಿಂದ ಹೊರಹೋಗುವಂತೆ ತಿಳಿಸಿದ್ದಳು. ಇದರಿಂದ ಕೋಪಗೊಂಡ ಆಕೆಯ ಪುತ್ರ ಸಂದೀಪ್ ಹಾಗೂ ಮೊಮ್ಮಗ ಸಾಹಿಲ್ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಇದಾದ ಬಳಿಕ ಮಧ್ವಾ ಪೊಲೀಸ್ ಠಾಣೆಗೆ ಸಾಹಿಲ್ ಹಾಗೂ ಸಂದೀಪ್ ಹೋಗಿ ಉಷಾ ಗಾಯಕ್ವಾಡ್ ಕಾಣೆ ಆಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಉಷಾಳ ಮಗಳು ಶೀತಲ್ ಕಾಂಬ್ಳೆ ದೂರು ದಾಖಲಿಸಿದ್ದು, ಉಷಾ ಗಾಯಕ್‍ವಾಡ್ ನಾಪತ್ತೆ ಆಗಿರುವುದರ ಹಿಂದೆ ಸಂದೀಪ್ ಹಾಗೂ ಸಾಹಿಲ್ ಪಾತ್ರವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಪೊಲೀಸರು ಸಂದೀಪ್ ಹಾಗೂ ಸಾಹಿಲ್‍ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಉಷಾ ಮನೆ, ಚಿನ್ನಾಭರಣ ಸೇರಿ ಅಪಾರ ಆಸ್ತಿ ಹೊಂದಿದ್ದರು. ಆದರೆ ಆಕೆ ತಮ್ಮ ಮನೆಯಿಂದ ಹೊರಹೊಗುವಂತೆ ಸಂದೀಪ್, ಸಾಹಿಲ್‍ಗೆ ಹೇಳಿದ್ದರಿಂದ ಕೋಪಗೊಂಡಿದ್ದಾರೆ. ಇದಾದ ಬಳಿಕ ಸಾಹಿಲ್ ಉಷಾಳ ಕತ್ತನ್ನು ಹಿಸುಕಿ ಕೊಂದಿದ್ದಾನೆ. ಇದನ್ನೂ ಓದಿ: ಸದನದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದ ಉಮೇಶ್ ಕತ್ತಿ ತಂದೆ
ಇದಾದ ಬಳಿಕ ಸಂದೀಪ್ ಹಾಗೂ ಸಾಹಿಲ್ ಸೇರಿ ಸಾಕ್ಷ್ಯ ನಾಶ ಮಾಡಲು ಎಲೆಕ್ಟ್ರಿಕ್ ಕಟರ್ ಮಷಿನ್‍ನಲ್ಲಿ ಆಕೆಯ ದೇಹವನ್ನು ತುಂಡಾಗಿ ಕತ್ತರಿಸಿ ಗೋಣಿ ಚೀಲದಲ್ಲಿ ತುಂಬಿದ್ದಾರೆ. ನಂತರ ಅದನ್ನು ನದಿಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ವೃದ್ಧೆಯ ಮಗ ಸಂದೀಪ್ ಹಾಗೂ ಸಾಹಿಲ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯ ಶಾಲಾ- ಕಾಲೇಜು, ಸರ್ಕಾರಿ ಕಚೇರಿಗೆ ರಜೆ ಘೋಷಣೆ