ಬೆಂಗಳೂರು: ಹೃದಯ ಸ್ತಂಭನದಿಂದ ಆಸ್ಪತ್ರೆ ಸೇರಿದ್ದ ಆಹಾರ, ಅರಣ್ಯ ಸಚಿವ ಉಮೇಶ್ ಕತ್ತಿ(Umesh Katti) ಅವರು ಕೊನೆಯುಸಿರೆಳೆದಿದ್ದಾರೆ. ಅವರ ತಂದೆ ವಿಶ್ವನಾಥ್ ಕತ್ತಿ(Vishwanath Katti) ಅವರು ಸದನದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದರು.
ರಾಮಕೃಷ್ಣ ಹೆಗಡೆ(Ramakrishna Hegde) ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸಚಿವ ಉಮೇಶ್ ಕತ್ತಿ ಅವರ ತಂದೆ ವಿಶ್ವನಾಥ್ ಕತ್ತಿ ಅವರು ಜನತಾ ಪಕ್ಷದ ಶಾಸಕರಾಗಿದ್ದರು. 1984 ಸಮಯದಲ್ಲಿ ಶಾಸಕರಾಗಿದ್ದ ವಿಶ್ವನಾಥ್ ಕತ್ತಿ ಅವರು ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗ ಸದನದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದರು. ಇದನ್ನೂ ಓದಿ: ಉಮೇಶ್ ಕತ್ತಿ ನಿಧನ: ಸಂಜೆ ಬೆಲ್ಲದ ಬಾಗೇವಾಡಿ ತೋಟದಲ್ಲಿ ಅಂತ್ಯಕ್ರಿಯೆ
Advertisement
Advertisement
ಸದನದೊಳಗೆ ಹೃದಯಾಘಾತ ಆಗುತ್ತಿದ್ದಂತೆ ವಿಶ್ವನಾಥ್ ಕತ್ತಿ ಅಲ್ಲೇ ಕುಸಿದು ಬಿದ್ದಿದ್ದರು. ತಕ್ಷಣ ಆಗಿನ ಸಚಿವ ಡಾ.ಜೀವರಾಜ ಆಳ್ವ(Jeevaraj Alva) ಸದನದೊಳಗೆ ಪ್ರಾಥಮಿಕ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿರಲಿಲ್ಲ. ಸದನದ ಇತಿಹಾಸದಲ್ಲೇ ಶಾಸಕರಾದವರು ಸದನದಲ್ಲಿದ್ದಾಗ ಮೃತಪಟ್ಟದ್ದು ಅದೇ ಮೊದಲು. ಇದನ್ನೂ ಓದಿ: ಬೆಳಗಾವಿಯ ಶಾಲಾ- ಕಾಲೇಜು, ಸರ್ಕಾರಿ ಕಚೇರಿಗೆ ರಜೆ ಘೋಷಣೆ