ವಿಜಯಪುರ: ವಿಶ್ವಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಇಂದು ಜಿಲ್ಲೆಗೆ ಆಗಮಿಸಿದ್ದಾರೆ.
ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರು ರಾಜೇಶ್ವರಿಗೆ ಸನ್ಮಾನ ಮಾಡಿ ಆಶೀರ್ವಾದ ನೀಡಿದರು. ಬಾಲ್ಯದಿಂದಲೂ ಆಶ್ರಮದ ಭಕ್ತರಾಗಿರುವ ಗಾಯಕವಾಡ್ ಪೋಷಕರು ತಮ್ಮ ಮಗಳ ಸಾಧನೆಯನ್ನು ಶ್ರೀಗಳಿಗೆ ತಿಳಿಸಿದ್ದಾರೆ. ಶ್ರೀಗಳ ಜೊತೆ ಮಾತುಕತೆ ನಡೆಸಿದ ರಾಜೇಶ್ವರಿ ತಮ್ಮ ಆಟದ ಅನುಭವನ್ನು ಹಂಚಿಕೊಂಡರು. ಈ ವೇಳೆ ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡುವಂತೆ ಹೇಳಿದರು.
ಸಿದ್ದೇಶ್ವರ ಸ್ವಾಮೀಜಿ ಅವರ ಭೇಟಿ ಬಳಿಕ ಮಾತನಾಡಿದ ರಾಜೇಶ್ವರಿ, ತವರು ಜಿಲ್ಲೆಯಲ್ಲಿ ನನಗೆ ಅದ್ಧೂರಿ ಸ್ವಾಗತ ನೀಡಿರುವುದು ಸಂತಸ ತಂದಿದೆ. ಮಹಿಳಾ ವಿಶ್ವಕಪ್‍ನಲ್ಲಿ ನನಗೆ ತುಂಬಾ ಜನರು ಸಹಾಯ ಮಾಡಿದ್ದಾರೆ. ಮಹಿಳಾ ಕ್ರಿಕೆಟ್ ಟೀಮ್ ವರ್ಕ್ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ. ಸಿದ್ದೇಶ್ವರ ಶ್ರೀಗಳು ಹಲವು ಸಲಹೆಗಳನ್ನು ನೀಡಿದ್ದಾರೆ. ಅಲ್ಲದೇ ಅವುಗಳನ್ನು ಪಾಲಿಸುವಂತೆ ಸಲಹೆ ಕೂಡ ನಿಡಿದ್ದಾರೆ ಅಂತ ಅವರು ಹೇಳಿದ್ರು.
ಇದೇ ವೇಳೆ ಆಶ್ರಮಕ್ಕೆ ಬಂದಿದ್ದ ಸಾವಿರಾರು ಭಕ್ತರು ರಾಜೇಶ್ವರಿ ಗಾಯವಾಡ್ ಅವರನ್ನು ನೋಡಲು ಮುಗಿಬಿದ್ದಿದ್ದರು. ಜೊತೆಗೆ ಅವರ ಜೊತೆ ಸೆಲ್ಫೀ ತೆಗೆದುಕೊಂಡು ಸಂಭ್ರಮಿಸಿದರು.