ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ದಾಖಲೆಯನ್ನು ಮಹಿಳೆಯೊಬ್ಬಳು ಮುರಿದಿದ್ದಾಳೆ ಎಂದರೆ ನೀವು ನಂಬ್ತೀರಾ..? ಹೌದು, ಟೀಂ ಇಂಡಿಯಾದ ಕೊಹ್ಲಿ, ದಕ್ಷಿಣ ಆಫ್ರಿಕಾದ ಹಶೀಂ ಆಮ್ಲ ದಾಖಲೆ ಧೂಳೀಪಟವಾಗಿದೆ.
ನಾವೂ ಪುರುಷರಿಗಿಂತ ಯಾವುದರಲ್ಲೂ ಕಮ್ಮಿಯಿಲ್ಲ ಎಂಬಂತೆ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ಆಟಗಾರ್ತಿ ಮೆಗ್ ಲ್ಯಾನ್ನಿಂಗ್ ಅತ್ಯಂತ ಕಡಿಮೆ ಇನ್ನಿಂಗ್ಸ್‍ನಲ್ಲಿ 11 ಶತಕಗಳನ್ನು ಬಾರಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ ದಾಖಲೆ ಬರೆದಿದ್ದಾರೆ.
Advertisement
2017ರ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಶ್ರೀಲಂಕಾದ 258 ಮೊತ್ತವನ್ನ ಬೆನ್ನಟ್ಟಿ 8 ವಿಕೆಟ್‍ಗಳ ಭರ್ಜರಿ ಜಯ ಗಳಿಸಿತು. ಈ ಪಂದ್ಯದಲ್ಲಿ ಮೆಗ್ ಲ್ಯಾನ್ನಿಂಗ್ ಏಕದಿನ ಪಂದ್ಯಗಳಲ್ಲಿನ 11ನೇ ಸೆಂಚುರಿ ಬಾರಿಸಿ ದಾಖಲೆ ಬರೆದರು.
Advertisement
Advertisement
ಆಸ್ಟ್ರೇಲಿಯಾ ತಂಡದ ನಾಯಕಿಯಾದ ಲ್ಯಾನ್ನಿಂಗ್ 59 ಇನ್ನಿಂಗ್ಸ್ ನಲ್ಲಿ 11 ಸೆಂಚುರಿ ಬಾರಿಸಿದ್ದು, ಪುರುಷ ಕ್ರಿಕೆಟ್ ಆಟಗಾರರಾದ ಹಶೀಮ್ ಅಮ್ಲಾ, ಕ್ವಿಂಟನ್ ಡಿ ಕಾಕ್ ಹಾಗೂ ಟೀಂ ಇಂಡಿಯಾ ನಾಯಕ ಕೊಹ್ಲಿ ಅವರ ದಾಖಲೆಯನ್ನ ಮುರಿದಿದ್ದಾರೆ. ಅಮ್ಲಾ 64 ಇನ್ನಿಂಗ್ಸ್‍ನಲ್ಲಿ 11 ಸೆಂಚುರಿ ಬಾರಿಸಿದ್ದರು. ಡಿ ಕಾಕ್ 65 ಇನ್ನಿಂಗ್ಸ್ ಹಾಗೂ ವಿರಾಟ್ ಕೊಹ್ಲಿ 82 ಇನ್ನಿಂಗ್ಸ್‍ನಲ್ಲಿ 11 ಶತಕಗಳನ್ನ ಬಾರಿಸಿದ್ದರು.
Advertisement
ಮತ್ತೊಂದು ವಿಶೇಷತೆ ಅಂದ್ರೆ ಲ್ಯಾನ್ನಿಂಗ್ ಈ 11 ಶತಕಗಳಲ್ಲಿ 8 ಶತಕಗಳನ್ನ ಎದುರಾಳಿ ತಂಡದ ಮೊತ್ತವನ್ನ ಬೆನ್ನಟ್ಟಿದ ವೇಳೆ ಪೂರೈಸಿದ್ದು, ಈ ಎಲ್ಲಾ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಜಯಗಳಿಸಿದೆ. ಪುರುಷರ ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ ಈವರೆಗೆ 62 ಇನ್ನಿಂಗ್ಸ್‍ನಲ್ಲಿ ಯಶಸ್ವಿ ಚೇಸಿಂಗ್‍ನಲ್ಲಿ 15 ಸೆಂಚುರಿ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಲ್ಯಾನ್ನಿಂಗ್ ಅವರು ಗೇಲ್, ಗಿಲ್‍ಕ್ರಿಸ್ಟ್ ಹಾಗೂ ರಿಕಿ ಪಾಂಟಿಂಗ್ ಅವರಿಗಿಂತ ಮುಂಚೂಣಿಯಲ್ಲಿದ್ದಾರೆ.
ಲ್ಯಾನ್ನಿಂಗ್ 2011ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಮೊದಲ ಏಕದಿನ ಪಂದ್ಯವನ್ನ ಆಡಿದ್ದು, ಈವರೆಗೆ 59 ಪಂದ್ಯಗಳಲ್ಲಿ 2835 ರನ್ ಗಳಿಸಿದ್ದಾರೆ. 11 ಸೆಂಚುರಿಗಳ ದಾಖಲೆಯ ಜೊತೆಗೆ 10 ಅರ್ಧ ಶತಕಗಳನ್ನ ಬಾರಿಸಿದ್ದಾರೆ. ಮಹಿಳಾ ಕ್ರಿಕೆಟ್ ನಲ್ಲಿ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಹೆಗ್ಗಳಿಕೆಗೆ ಲ್ಯಾನ್ನಿಂಗ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಶಾರ್ಲೊಟ್ ಎಡ್ವಡ್ರ್ಸ್ 9 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ನ್ಯೂಜಿಲ್ಯಾಂಡ್‍ನ ಸೂಝಿ ಬೇಟ್ಸ್ 8 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
???????? WIN! Meg Lanning seals it with a six to finish unbeaten on 152 in a record WWC run chase: https://t.co/UFrlsBUER9 #WWC17 #SLvAUS pic.twitter.com/WmcUgPHci2
— Australian Women's Cricket Team ???? (@AusWomenCricket) June 29, 2017